ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್

CEA Anantha Nageswaran briefs: ಬಜೆಟ್​ಗೆ ಮುನ್ನಾದಿನ ಮಂಡನೆಯಾದ ಆರ್ಥಿಕ ಸಮೀಕ್ಷೆಯ ವರದಿ ರೂಪಿಸಿದ್ದು ಸಿಇಒ ಅನಂತ ನಾಗೇಶ್ವರನ್ ನೇತೃತ್ವದಲ್ಲಿ. ನಿರ್ಮಲಾ ಸೀತಾರಾಮನ್​ರಿಂದ ಈ ವರದಿ ಮಂಡನೆ ಆದ ಬಳಿಕ ಅನಂತ ನಾಗೇಶ್ವರನ್ ಈ ಎಕನಾಮಿಕ್ ಸರ್ವೆ ಬಗ್ಗೆ ವಿವರಣೆ ನೀಡಿದರು. ಚೀನಾ ಸೇರಿದಂತೆ ಕೆಲ ದೇಶಗಳು ಆರ್ಥಿಕ ಬೆಳವಣಿಗೆ ಹೊಂದಬೇಕಾದಾಗ ಇದ್ದುದಕ್ಕಿಂತ ಭಾರತಕ್ಕೆ ಈಗ ಹೆಚ್ಚು ಸವಾಲುಗಳಿವೆ ಎಂದರು.

ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್
ಅನಂತನಾಗೇಶ್ವರನ್
Follow us
|

Updated on: Jul 22, 2024 | 5:30 PM

ನವದೆಹಲಿ, ಜುಲೈ 22: ಚೀನಾ ಜೊತೆಗಿನ ವ್ಯಾಪಾರ ಅಂತರವನ್ನು ತಗ್ಗಿಸಬೇಕಾದರೆ ಭಾರತವು ಸರಕುಗಳ ಆಮದು ಮತ್ತು ವಿದೇಶೀ ಬಂಡವಾಳ ಹೂಡಿಕೆ ಮಧ್ಯೆ ಸರಿಯಾದ ಸಮತೋಲನ ತರಬೇಕು ಎಂದು ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ. ಇಂದು ಸೋಮವಾರ ಸಂಸತ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಿದ ಬಳಿಕ ಅನಂತ ನಾಗೇಶ್ವರನ್ ಅವರು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಅನಂತನಾಗೇಶ್ವನ್ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ಸಿದ್ಧಪಡಿಸಲಾಗಿತ್ತು. ಇದೇ ಸರ್ವೇಕ್ಷಣೆ ವರದಿ ಬಗ್ಗೆ ಅನಂತನಾಗೇಶ್ವರನ್ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿಲಿಲ್ಲ: ಸಿಇಎ

ಭಾರತ ಪ್ರಸಕ್ತ ಅಭಿವೃದ್ಧಿಯ ಹಾದಿಯಲ್ಲಿದೆ. ಆದರೆ, ಈ ಹಾದಿಯಲ್ಲಿ ಅಡೆತಡೆಗಳು ಬಹಳ ಇವೆ. ಜಾಗತಿಕ ವಾತಾವರಣ ದೊಡ್ಡ ಸವಾಲು ಸೃಷ್ಟಿಸಿದೆ. ಈಗಿರುವ ಕೆಲ ದೇಶಗಳು ಹಿಂದೆ ಬೆಳವಣಿಗೆ ಹಾದಿಯಲ್ಲಿದ್ದಾಗ ಇಷ್ಟು ದೊಡ್ಡ ಸಮಸ್ಯೆಗಳಿರಲಿಲ್ಲ ಎಂದು ಆರ್ಥಿಕ ತಜ್ಞರಾಗಿರುವ ಅನಂತ ನಾಗೇಶ್ವರನ್ ಹೇಳಿದರು.

ಮಧ್ಯಂತರ ಬಜೆಟ್​ಗೆ ಮುನ್ನ ತಯಾರಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ನಾವು 2024-25ಕ್ಕೆ ಶೇ. 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಪ್ರೊಜೆಕ್ಷನ್ ನೀಡಿದ್ದೆವು. ಅದಾದ ಬಳಿಕ ಜಾಗತಿಕ ವಾತಾವರಣ ಹೆಚ್ಚು ಧ್ರುವೀಕರಣಗೊಂಡಿದೆ. ಈಗಲೂ ಕೂಡ ಶೇ. 7ರಷ್ಟು ವೃದ್ಧಿ ಸಾಧ್ಯ ಎಂದು ಅನಿಸುತ್ತದೆ, ಆದರೆ, ಸ್ವಲ್ಪ ಜಾಗರೂಕರಾಗಿರುವುದು ಅಗತ್ಯ ಎನ್ನುವ ಅಭಿಪ್ರಾಯವನ್ನು ಅವರು ಪಟ್ಟರು.

ಇದನ್ನೂ ಓದಿ: 2023-24ರ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಸ್ಥಿತಿ ಬಗ್ಗೆ ಏನು ಚಿತ್ರಣ ಇದೆ? ಇಲ್ಲಿದೆ ವರದಿ ಹೈಲೈಟ್ಸ್

ಸಮತೋಲನ ಸಾಧಿಸುವುದು ಅಗತ್ಯ…

  • ಕೈಗಾರಿಕೀಕರಣ, ತಯಾರಿಕೆ, ಪಶುಗಳಿಗೆ ಆಹಾರ ಮತ್ತು ಕೃಷಿಗೆ ಜಮೀನು ಒದಗಿಸಲು ಒಂದು ಸಮತೋಲನ ಸಾಧಿಸುವುದು ಅವಶ್ಯಕ.
  • ಚೀನಾ ಜೊತೆಗಿನ ವ್ಯಾಪಾರ ಅಂತರ ಕಡಿಮೆ ಮಾಡಲು ಸರಕುಗಳ ಆಮದು ಮತ್ತು ಬಂಡವಾಳ ಒಳಹರಿವಿನ ಮಧ್ಯೆ ಸಮತೋಲನ ತರಬೇಕು.
  • ಭಾರತದ ಐಟಿ ಮತ್ತು ಐಟಿಯೇತರ ವಲಯಗಳು ತಂತ್ರಜ್ಞಾನ ಮತ್ತು ಕಾರ್ಮಿಕರ ನಿಯೋಜನೆಯಲ್ಲಿ ಸಮತೋಲನ ಹೇಗೆ ಸಾಧಿಸಬೇಕು ಎಂದು ಯೋಚಿಸಬೇಕು.

ಎಂದು ಸಿಇಎ ಅನಂತ ನಾಗೇಶ್ವರನ್ ಹೇಳಿದರು. ಹಣದುಬ್ಬರ, ಹೂಡಿಕೆ, ಗ್ರಾಮೀಣಾಭಿವೃದ್ಧಿ, ಕೃಷಿ, ಸಣ್ಣ ಉದ್ದಿಮೆಗಳು, ಮೂಲಸೌಕರ್ಯ ವ್ಯವಸ್ಥೆ ಮೊದಲಾದ ಅಂಶಗಳ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವ ಸಾಧ್ಯತೆ ಕುರಿತು ಎಕನಾಮಿಕ್ ಸರ್ವೆಯಲ್ಲಿ ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ