AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2024 PDF download: ಬಜೆಟ್ ಮತ್ತು ಎಕನಾಮಿಕ್ ಸರ್ವೆ ಪ್ರತಿಯನ್ನು ಡೌನ್​ಲೋಡ್ ಮಾಡಿ

Union Budget and Economic Survey reports download: ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ಬಜೆಟ್ ಭಾಷಣದಿಂದ ಹಿಡಿದು ಹೈಲೈಟ್ಸ್​ವರೆಗೆ ವಿವಿಧ ಪ್ರತಿಗಳನ್ನು ಡೌನ್​ಲೋಡ್ ಮಾಡುವ ಲಿಂಕ್ ಇರುತ್ತದೆ. ಜುಲೈ 22ರಂದು ಪ್ರಸ್ತುತಪಡಿಸಲಾದ ಎಕನಾಮಿಕ್ ಸರ್ವೆ ವರದಿಯನ್ನೂ ಡೌನ್​ಲೋಡ್ ಮಾಡುವ ಲಿಂಕ್ ಇಲ್ಲಿದೆ.

Budget 2024 PDF download: ಬಜೆಟ್ ಮತ್ತು ಎಕನಾಮಿಕ್ ಸರ್ವೆ ಪ್ರತಿಯನ್ನು ಡೌನ್​ಲೋಡ್ ಮಾಡಿ
ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 23, 2024 | 3:23 PM

Share

ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸತತ 7ನೇ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿದೆ. ಬಜೆಟ್ ಕೆಲವರ ನಿರೀಕ್ಷೆಗೆ ತಕ್ಕಂತೆ ಇದೆ. ಮತ್ತೆ ಕೆಲವರಿಗೆ ನಿರಾಸೆಯಾಗಿದೆ. ನಿನ್ನೆ ಸೋಮವಾರ ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುತಪಡಿಸಲಾಯಿತು. ಪ್ರಸಕ್ತ ಹಣಕಾಸು ಸ್ಥಿತಿ, ಹಣದುಬ್ಬರ ಇತ್ಯಾದಿ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಅದು ನೀಡಿತ್ತು. ಈಗ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್​ನಲ್ಲಿ ಹಲವು ಕ್ಷೇತ್ರಗಳಿಗೆ ಆದ್ಯತೆ ಕೊಟ್ಟಿದ್ದಾರೆ.

ಮ್ಯಾನುಫ್ಯಾಕ್ಚರಿಂಗ್ ವಲಯದಿಂದ ಹಿಡಿದು ರಕ್ಷಣಾ ವಲಯದವರೆಗೆ ವಿವಿಧ ಕ್ಷೇತ್ರಗಳು ಹೆಚ್ಚಿನ ಅನುದಾನಗಳ ನಿರೀಕ್ಷಿಸಿದ್ದವು. ಈ ಬಾರಿಯ ಬಜೆಟ್​ನಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಯುವಜನರು ಈ ನಾಲ್ಕು ಜನವರ್ಗಗಳ ಏಳ್ಗೆಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗುವುದು ಎಂದು ಈ ಹಿಂದೆಯೇ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

ಬಜೆಟ್ ಪ್ರತಿಗಳು ಸಿಗುವ ಲಿಂಕ್

ಬಜೆಟ್ ಭಾಷಣ ಸುಮಾರು ಎರಡರಿಂದ ಮೂರು ಗಂಟೆ ಕಾಲ ಇರಬಹುದು. ಬಜೆಟ್ ಸಂಬಂಧಿಸಿದ ಪ್ರತಿಯನ್ನು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ಅಪ್​ಡೇಟ್ ಮಾಡಲಾಗಿರುತ್ತದೆ. ಅದರಲ್ಲಿ ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್​ವರೆಗೆ ಎಲ್ಲಾ ಪ್ರತಿಗಳು ಪಿಡಿಎಫ್ ರೂಪದಲ್ಲಿ ಲಭ್ಯ ಇರುತ್ತವೆ. ಯಾರು ಬೇಕಾದರೂ ಡೌನ್​ಲೋಡ್ ಮಾಡಬಹುದು.

ಎಕನಾಮಿಕ್ ಸರ್ವೆ ವರದಿಯನ್ನು ಡೌನ್​ಲೋಡ್ ಮಾಡುವ ಲಿಂಕ್

ಆರ್ಥಿಕ ಸಮೀಕ್ಷಾ ವರದಿಯ ವಿವಿಧ ಪ್ರತಿಗಳೂ ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ಲಭ್ಯ ಇದೆ. ನಿನ್ನೆ ಜುಲೈ 22ರಂದು ಈ ಸರ್ವೇಕ್ಷಣೆ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುತಪಡಿಸಲಾಗಿತ್ತು. 500ಕ್ಕೂ ಹೆಚ್ಚು ಪುಟಗಳಿರುವ ಈ ವರದಿಯನ್ನೂ ಕೂಡ ಪಿಡಿಎಫ್ ರೂಪದಲ್ಲಿ ಡೌನ್​ಲೋಡ್ ಮಾಡಬಹುದು.

ಕೇಂದ್ರ ಬಜೆಟ್ ಲೈವ್ ಬ್ಲಾಗ್ ಲಿಂಕ್

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:04 am, Tue, 23 July 24