ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮೆಗಳಲ್ಲಿ ಆದಾಯ ತೆರಿಗೆ ಹೇಗಿದೆ? ಇಲ್ಲಿದೆ ಡೀಟೆಲ್ಸ್
Income tax rates, old vs new regime: ನಿರ್ಮಲಾ ಸೀತಾರಾಮನ್ ಮಂಡಿಸಲಾಗುತ್ತಿರುವ ಮುಂಗಡಪತ್ರದಲ್ಲಿ ಹೆಚ್ಚಿನ ಜನರ ನಿರೀಕ್ಷೆ ಆದಾಯ ತೆರಿಗೆಯದ್ದಾಗಿರುತ್ತದೆ. ಸರ್ಕಾರ ಹೊಸ ಟ್ಯಾಕ್ಸ್ ರೆಜಿಮೆಯನ್ನು ತರಲಾಗಿದ್ದರೂ ಹಳೆಯ ವ್ಯವಸ್ಥೆಯೂ ಮುಂದುವರಿದಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ದರ ಕಡಿಮೆ ಆದರೂ ಡಿಡಕ್ಷನ್ ಕಡಿಮೆ ಇದೆ.
ನವದೆಹಲಿ, ಜುಲೈ 23: ಇವತ್ತು ಬಜೆಟ್ನಲ್ಲಿ ಹೆಚ್ಚಿನ ಜನಸಾಮಾನ್ಯರ ಚಿತ್ತ ಆದಾಯ ತೆರಿಗೆಯತ್ತ ನೆಟ್ಟಿರುತ್ತದೆ. ಬಜೆಟ್ ಭಾಷಣದ ಕೊನೆಯ ಭಾಗದಲ್ಲಿ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಬಗ್ಗೆ ತಿಳಿಸುತ್ತಾರೆ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದರೂ ಹಳೆಯ ಟ್ಯಾಕ್ಸ್ ರೆಜಿಮೆಯನ್ನೂ ಸದ್ಯ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕುತೂಹಲ ಎಂದರೆ ಹೆಚ್ಚಿನ ಜನರು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲೇ ಐಟಿಆರ್ ಸಲ್ಲಿಸುತ್ತಿದ್ದಾರೆ. ಅದಕ್ಕೆ ಕಾರಣ, ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಡಿಡಕ್ಷನ್ಗಳ ಸೌಲಭ್ಯ ಹೆಚ್ಚಿರುವುದು. ಐಟಿ ಕಾಯ್ದೆ 80ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎರಡು ಲಕ್ಷ ರೂಗೂ ಹೆಚ್ಚು ಡಿಡಕ್ಷನ್ ಲಭ್ಯ ಇದೆ. ಹೀಗಾಗಿ, ಬಹಳಷ್ಟು ತೆರಿಗೆ ಪಾವತಿದಾರರು ಹಳೆಯ ಟ್ಯಾಕ್ಸ್ ವ್ಯವಸ್ಥೆಯಲ್ಲೇ ಮುಂದುವರಿಯುತ್ತಿದ್ದಾರೆ.
ಹಳೆಯ ಟ್ಯಾಕ್ಸ್ ರೆಜಿಮೆ ವಿವರ
- ಎರಡೂವರೆ ಲಕ್ಷ ರೂವರೆಗಿನ ಆದಾಯ: ತೆರಿಗೆ ಇಲ್ಲ
- 2.50ರಿಂದ 3 ಲಕ್ಷ ರೂ ಆದಾಯಕ್ಕೆ: ಶೇ. 5 ತೆರಿಗೆ
- 3 ಲಕ್ಷ ರೂನಿಂದ 5 ಲಕ್ಷ ರೂ ಆದಾಯಕ್ಕೆ: ಶೇ. 5
- 5 ಲಕ್ಷ ರೂನಿಂದ 10 ಲಕ್ಷ ರೂ ಆದಾಯ: ಶೇ. 20
- 10 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 30 ತೆರಿಗೆ
60ರಿಂದ 80 ವರ್ಷ ವಯೋಮಾನದ ಹಿರಿಯ ನಾಗರಿಕರಿಗೆ 3 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 3 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಮಾಮೂಲಿಯ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತವೆ.
ಇದನ್ನೂ ಓದಿ: ಬಜೆಟ್ ಲೈವ್ ಬ್ಲಾಗ್ ಲಿಂಕ್
ಇಲ್ಲಿ 80 ವರ್ಷ ಮೇಲ್ಪಟ್ಟ ವಯೋಮಾನದ ಅತಿ ಹಿರಿಯ ನಾಗರಿಕರಿಗೆ 5 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 5 ಲಕ್ಷ ರೂ ಮೇಲ್ಪಟ್ಟ ಆದಾಯಗಳಿಗೆ ಮಾಮೂಲಿಯ ಟ್ಯಾಕ್ಸ್ ಸ್ಲಾಬ್ ಪ್ರಕಾರ ದರಗಳಿರುತ್ತವೆ.
ಹೊಸ ಟ್ಯಾಕ್ ರೆಜಿಮೆ
- 3 ಲಕ್ಷ ರೂವರೆಗಿನ ಆದಾಯ: ತೆರಿಗೆ ಇರುವುದಿಲ್ಲ
- 3 ಲಕ್ಷ ರೂನಿಂದ 6 ಲಕ್ಷ ರೂ ಆದಾಯ: ಶೇ.. 5
- 6 ಲಕ್ಷ ರೂನಿಂದ 9 ಲಕ್ಷ ರೂ: ಶೇ. 10 ತೆರಿಗೆ
- 9 ಲಕ್ಷ ರೂನಿಂದ 12 ಲಕ್ಷ ರೂ ಆದಾಯ: ಶೇ. 15 ತೆರಿಗೆ
- 12 ಲಕ್ಷ ರೂನಿಂದ 15 ಲಕ್ಷ ರೂ ಆದಾಯ: ಶೇ. 20 ತೆರಿಗೆ
- 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30 ತೆರಿಗೆ
ಇಲ್ಲಿ ಏಳು ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಇರುತ್ತದೆ. ಜೊತೆಗೆ 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ಅಲ್ಲಿಗೆ 7.5 ಲಕ್ಷ ರೂ ವಾರ್ಷಿಕ ಆದಾಯಕ್ಕೆ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿರುವಂತೆ ಹಿರಿಯ ನಾಗರಿಕರಿಗೆ ನ್ಯೂ ಟ್ಯಾಕ್ಸ್ ರೆಜಿಮೆಯಲ್ಲಿ ರಿಯಾಯಿತಿಗಳು ಇರುವುದಿಲ್ಲ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:31 am, Tue, 23 July 24