Union Budget 2024: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಭರಪೂರ ಅನುದಾನ ನೀಡಿದ ಕೇಂದ್ರ
ಕೇಂದ್ರ ಸರ್ಕಾರ ಮಂಡಿಸಿರುವ ಇಂದಿನ ಬಜೆಟ್ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ. ಈ ಮೂಲಕ ಆಂಧ್ರ ಮಹತ್ವ ಯೋಜನೆಗಳನ್ನು ಹಾಗೂ ಅನುದಾನವನ್ನು ನೀಡಿದೆ, ಯಾವೆಲ್ಲ ಅನುದಾನ ನೀಡಿದೆ. ಆಂಧ್ರಕ್ಕೆ ನೀಡಿದ ಯೋಜನೆಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಇಂದು ಕೇಂದ್ರ ಸರ್ಕಾರ 2024-25ನೇ ಸಾಲಿನ ಕೇಂದ್ರ ಬಜೆಟ್ನ್ನು ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಮಂಡಿಸಿದ್ದಾರೆ. ಅನೇಕ ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ನೀಡಿದ್ದಾರೆ. ಇದರ ಜತೆಗೆ ಆಂಧ್ರಪ್ರದೇಶಕ್ಕೆ ಈ ಹಿಂದಿನ ಭರವಸೆಯಂತೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭವಾಗಲಿದೆ. ಇದರ ಜತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದ್ದಾರೆ. ಒಟ್ಟು ಆಂಧ್ರಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಇಂಧನ, ರೈಲು, ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು. ಪೋಲಾವರಂ ಪ್ರಾಜೆಕ್ಟ್ಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುವುದು. ವಿಶಾಖಪಟ್ಟಣ-ಚೆನ್ನೈ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ನೀಡಲಿದೆ. ಇದರ ಜತೆಗೆ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ವಿಭಜನೆಯ ಕಾರಣದಿಂದ ಬಳಲುತ್ತಿರುವ ಆಂಧ್ರಪ್ರದೇಶಕ್ಕೆ ಇದು ಹೊಸ ಭರವಸೆಯನ್ನು ನೀಡಿದೆ. ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ನೆರವು ಮತ್ತು ಬಾಹ್ಯ ನೆರವಿನ ಯೋಜನೆಗಳನ್ನು ಈ ಮೂಲಕ ನೀಡಲಾಗುವುದು. ಈಗಾಗಲೇ ತಜ್ಞರ ಸಲಹೆಗೆ ಅನುಗುಣವಾಗಿ, ಬಜೆಟ್ನಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ತಿಳಿಸಲಾಗಿದೆ. ಇನ್ನು ಆಂಧ್ರದ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಕೆಲಸವನ್ನು ಕೂಡ ಮಾಡಲಾಗುವುದು.
ಇದನ್ನೂ ಓದಿ: ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಕರಿಗೆ ಸರ್ಕಾರವೇ ನೀಡಲಿದೆ ಮೊದಲ 1 ತಿಂಗಳ ಪಿಎಫ್
ಇನ್ನು ಆಂಧ್ರದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆ, ಹಿಂದುಳಿದ ಜಿಲ್ಲೆಗಳ ಕೇಂದ್ರೀಕೃತ ಅಭಿವೃದ್ಧಿ, ಹಾಗೂ ಆದಾಯ ಕೊರತೆ ಅನುದಾನ, ಹೊಸ ಕೈಗಾರಿಕೆಗಳನ್ನು ಕೂಡ ನೀಡಲಾಗುವುದು. ಮಹತ್ವಾಕಾಂಕ್ಷೆಯ ಕಾರ್ಯಕ್ರಮ, ನೀರಾವರಿ, ರಸ್ತೆ, ಬಂದರು ಮತ್ತು ರೈಲ್ವೆ ಯೋಜನೆಗಳನ್ನು ನೀಡಲಾಗುವುದು.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Tue, 23 July 24