
ಸಾಮಾನ್ಯವಾಗಿ ಟ್ರಾವೆಲ್, ಟ್ರಿಪ್ ಎಂದು ಹೊರಗಡೆ ಹೋಟೆಲ್ ರೂಮ್ (Hotel Room) ಅಥವಾ ಲಾಡ್ಜ್ ಬುಕ್ ಮಾಡುವುದು ಸಹಜ. ವಿಶ್ರಾಂತಿ ಪಡೆಯಲೆಂದು ಹೋಟೆಲ್ ರೂಮ್‌ಗೆ ಹೋಗಿ ಬೆಡ್ ಮೇಲೆ ಕುಳಿತುಕೊಂಡಾಗ ಕಣ್ಣ ಮುಂದೆ ಕಾಣುವುದೇ ಈ ಫಳ ಫಳ ಹೊಳೆಯುವ ಕನ್ನಡಿ. ಬೆಡ್ ಮುಂದೆಯೆ ಯಾಕೆ ಕನ್ನಡಿ ಅಳವಡಿಸಲಾಗಿರುತ್ತದೆ ಎಂಬ ಬಗ್ಗೆ ಯಾರು ಕೂಡ ಯೋಚನೆ ಮಾಡಲ್ಲ. ಹೋಟೆಲ್ ರೂಮ್‌ನಲ್ಲಿ ಮಿರರ್‌ಗಳನ್ನು ಅಳವಡಿಸುವುದರ ಹಿಂದೆ ಕೆಲ ಕಾರಣಗಳಿವೆ. ಈ ಮಿರರ್‌ಗಳು ಬೆಳಕನ್ನು ರೂಮ್ ಒಳಗೆ ಬರುವಂತೆ ಮಾಡುತ್ತದೆ. ಹೋಟೆಲ್ ರೂಮ್‌ಗಳು ಕಡಿಮೆ ಸ್ಥಳವಕಾಶ ಹೊಂದಿದ್ರು, ದೊಡ್ಡದಾಗಿ ಕಾಣುವಂತೆ ಮಾಡಲು ಇದು ಸಹಕಾರಿಯಾಗಿದೆ.
ಬೆಡ್ ಮುಂದೆ ಕನ್ನಡಿ ಅಳವಡಿಸುವುದರಿಂದ ಸಣ್ಣ ಕೋಣೆಯನ್ನು ದೊಡ್ಡದಾಗಿ ಹಾಗೂ ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಹೋಟೆಲ್ ರೂಮ್‌ಗಳಲ್ಲಿ ಗೋಡೆಗಳು ಕಡಿಮೆ ಇರುವುದರಿಂದ ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್‌ನ್ನು ಹಾಸಿಗೆಯ ಎದುರುಗಡೆ ಇರಿಸುವುದು ಅನಿವಾರ್ಯ. ಅದಲ್ಲದೇ, ಈ ಕೊಠಡಿಯ ಕಿಟಕಿಯಿಂದ ಬರುವ ಸಹಜ ಬೆಳಕನ್ನು ಕನ್ನಡಿ ಪ್ರತಿಫಲಿಸಸುತ್ತದೆ. ಹೆಚ್ಚುವರಿ ಲೈಟ್ಸ್ ಬಳಸದೆಯೇ ಕೋಣೆ ತುಂಬಾ ಪ್ರಕಾಶಮಾನವಾಗಿ ಆಕರ್ಷಕವಾಗಿ ಕಾಣುತ್ತದೆ.
ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ
ನೀವು ಹೋಟೆಲ್ ಗೆ ತಂಗಲು ಹೋದಾಗ ಕನ್ನಡಿಯನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕನ್ನಡಿಗಳು ಸಾಮಾನ್ಯವಾದದ್ದೇ ಅಥವಾ ಟು-ವೇ ಮಿರರ್ ಗಳೇ ಎಂದು ಪರೀಕ್ಷಿಸಿಕೊಳ್ಳಿ. ನೀವು ಈ ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇಟ್ಟಾಗ, ಬೆರಳಿಗೆ ಹಾಗೂ ಪ್ರತಿಬಿಂಬಕ್ಕೆ ಮಧ್ಯೆ ಸಣ್ಣ ಅಂತರ ಕಂಡುಬಂದರೆ ಯಾವುದೇ ಸಮಸ್ಯೆಯಿಲ್ಲ, ಸುರಕ್ಷಿತವಾಗಿದೆ ಎಂದರ್ಥ. ನಿಮ್ಮ ಬೆರಳಿನ ತುದಿ ಯಾವುದೇ ಅಂತರವಿಲ್ಲದೇ ಪ್ರತಿಬಿಂಬವನ್ನು ಮುಟ್ಟಿದರೆ, ನೀವು ತಕ್ಷಣವೇ ಎಚ್ಚೆತ್ತುಕೊಳ್ಳುವುದು ಅವಶ್ಯಕ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ