Video: ಮಹಿಳೆಯ ವೇಷ ತೊಟ್ಟು ಬಂದು 28 ಕೆಜಿ ಬೆಳ್ಳಿಯೊಂದಿಗೆ ಪರಾರಿಯಾದ ಖದೀಮ

|

Updated on: Oct 11, 2024 | 5:38 PM

ಕಣ್ಣು ಮಿಟುಕಿಸುವಷ್ಟರಲ್ಲಿ ಕಳ್ಳ 28 ಕೆಜಿ ಚಿನ್ನಾಭರಣಗಳಿದ್ದ ಬ್ಯಾಗ್ ಕಿತ್ತುಕೊಂಡು ತನ್ನ ಜೊತೆಗಿದ್ದ ಇನ್ನೊಬ್ಬನೊಂದಿಗೆ ಸ್ಕೂಟರ್ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ಗುಜರಾತ್: ಹಾಡಹಗಲೇ ದರೋಡೆ ನಡೆದ ಘಟನೆ ಅಹಮದಾಬಾದ್‌ನ ಕೃಷ್ಣಾನಗರದ ಬೀದಿಯಲ್ಲಿ ಇತ್ತೀಚೆಗೆ ವರದಿಯಾಗಿದೆ. ಕಳ್ಳನೊಬ್ಬ ಮಹಿಳೆಯಂತೆ ವೇಷಭೂಷಣ ಧರಿಸಿ 23 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ.

ದರೋಡೆಕೋರನು ಮಹಿಳೆಯ ವೇಷದಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು ಬಂದಿದ್ದು, ಆಭರಣ ಅಂಗಡಿಯ ಉದ್ಯೋಗಿ ತನ್ನ ಸ್ಕೂಟರ್​​ನ ಮುಂಭಾಗದಲ್ಲಿ ಇರಿಸಿದ್ದ ಬೆಳ್ಳಿಯ ಆಭರಣದ ತುಂಬಿದ ಬ್ಯಾಗ್​ ದೋಚಿ ಪರಾರಿಯಾಗಿದ್ದಾನೆ. ಕಣ್ಣು ಮಿಟುಕಿಸುವಷ್ಟರಲ್ಲಿ ಕಳ್ಳ 28 ಕೆಜಿ ಚಿನ್ನಾಭರಣಗಳಿದ್ದ ಬ್ಯಾಗ್ ಕಿತ್ತುಕೊಂಡು ತನ್ನ ಜೊತೆಗಿದ್ದ ಇನ್ನೊಬ್ಬನೊಂದಿಗೆ ಸ್ಕೂಟರ್ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಇಂಗ್ಲೀಷ್‌ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?

23.5 ಲಕ್ಷ ಮೌಲ್ಯದ ಬೆಳ್ಳಿ ಆಭರಣ ದರೋಡೆಯಲ್ಲಿ ಇಬ್ಬರು ಭಾಗಿಯಾಗಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯ ಇದೀಗ ಅಂತರ್ಜಾಲದಲ್ಲಿ ವೈರಲ್​ ಆಗುತ್ತಿದೆ. ಬುಧವಾರ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಕಳುವಾದ ಚೀಲದಲ್ಲಿ ಬೆಳ್ಳಿಯ ಕಾಲುಂಗುರ ಮತ್ತು ಕಿವಿಯೋಲೆಗಳಿದ್ದವು ಎನ್ನಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ