ಈ ದೇವಿಯ ವಿಗ್ರಹದಿಂದ ಬೆವರು ಸುರಿಯುತ್ತದೆ, ಈ ಅಚ್ಚರಿಯ ದೇವಾಲಯ ಎಲ್ಲಿದೆ ಗೊತ್ತಾ?
ಮನುಷ್ಯನ ಮುಖದಲ್ಲಿ ಹೇಗೆ ಬೆವರು ಸುರಿಯುತ್ತದೆಯೋ ಅದೇ ರೀತಿ ದೇವಿಯ ಮುಖದಲ್ಲೂ ಬೆವರು ಕಾಣಿಸಿಕೊಂಡಿದ್ದರಿಂದ ಅದು ಅಮ್ಮನ ಮಹಿಮೆ ಎಂದು ಭಕ್ತರು ನಂಬುತ್ತಾರೆ. ಅಮ್ಮನವರನ್ನು ನಂಬಿದವರಿಗೆ ಯಾವುದೇ ಕಷ್ಟವಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ದೇವಸ್ಥಾನದ ಅರ್ಚಕ ನಾಗ ವೆಂಕಟ ರಮಣ ಶರ್ಮಾ ಹೇಳಿದ್ದಾರೆ.
ನವರಾತ್ರಿಯ 9 ದಿನಗಳು ಕಳೆದು ಇಂದು ವಿಜಯ ದಶಮಿಯ ಆಚರಣೆ ನಾಡಿನೆಲ್ಲೆಡೆ ಜೋರಾಗಿ ಸಾಗಿದೆ. ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿದ ವಿಜಯವನ್ನು ಮತ್ತು ಶ್ರೀರಾಮನು ರಾವಣನನ್ನು ಸೋಲಿಸಿದ ವಿಜಯವನ್ನು ಆಚರಿಸುವ ಹಬ್ಬವಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಪವಾಡವನ್ನು ಸೃಷ್ಟಿಸಿದ ವಿಶೇಷವಾದ ದೇವಿಯ ದೇವಾಲಯದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿ ಗುಡೆಂನ ದೇವಿಯ ದೇವಸ್ಥಾನದಲ್ಲಿ ನಡೆದ ದೇವಿಯ ಪವಾಡವನ್ನು ಸ್ಥಳೀಯರು ಹೇಳುತ್ತಾರೆ. ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದ ದೇವಿಯ ಮುಖದಲ್ಲಿ ಬೆವರು ಸುರಿಸುವಂತೆ ನೀರಿನ ಹನಿಗಳು ಕಾಣಿಸಿಕೊಳ್ಳುತ್ತಿದ್ದು, ಮೊದಮೊದಲು ಬೆರಗಾದ ಅನೇಕರು ನಂತರ ಸಮಾಧಾನಪಡಿಸಿ ಸಂತಸ ವ್ಯಕ್ತಪಡಿಸಿದರಂತೆ. ಈ ವಿಚಿತ್ರವನ್ನು ಕಂಡ ಸ್ಥಳೀಯ ಭಕ್ತರು ಹಾಗೂ ದೇವಸ್ಥಾನ ಸಮಿತಿಯವರು ಇದು ದೇವಿಯ ಮಹಿಮೆ ಎಂದಿದ್ದಾರೆ.
ವಾಸವಿ ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದಸರಾ ಶರನ್ನವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಹಬ್ಬದ ಅಂಗವಾಗಿ ಅಮ್ಮನವರು ದಿನನಿತ್ಯದ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ; ತಿಂಗಳಿಗೆ 60 ಸಾವಿರ ದುಡಿದ್ರೂ ಮಾಜಿ ಹೆಂಡ್ತಿಗೆ 30 ಲಕ್ಷ ಜೀವನಾಂಶ ಕೊಡ್ಬೇಕಂತೆ; ವೈರಲ್ ಆಯ್ತು ಪೋಸ್ಟ್
ಮನುಷ್ಯನ ಮುಖದಲ್ಲಿ ಹೇಗೆ ಬೆವರು ಬೀಳುತ್ತದೆಯೋ ಅದೇ ರೀತಿ ಅಮ್ಮನ ಮುಖದಲ್ಲೂ ಬೆವರು ಕಾಣಿಸಿಕೊಂಡಿದ್ದರಿಂದ ಅದು ಅಮ್ಮನ ಮಹಿಮೆ ಎಂದು ಭಕ್ತರು ನಂಬುತ್ತಾರೆ. ಅಮ್ಮನವರನ್ನು ನಂಬಿದವರಿಗೆ ಯಾವುದೇ ಕಷ್ಟವಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ದೇವಸ್ಥಾನದ ಅರ್ಚಕ ನಾಗ ವೆಂಕಟ ರಮಣ ಶರ್ಮಾ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sat, 12 October 24