AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral:ತಿಂಗಳಿಗೆ 60 ಸಾವಿರ ದುಡಿದ್ರೂ ಮಾಜಿ ಹೆಂಡ್ತಿಗೆ 30 ಲಕ್ಷ ಜೀವನಾಂಶ ಕೊಡ್ಬೇಕಂತೆ; ವೈರಲ್‌ ಆಯ್ತು ಪೋಸ್ಟ್‌

ಮದುವೆಯಾದ ಬಳಿಕ ಬೇಕಂತಲೇ ಮೋಸ ಮಾಡಿ ಹೋಗುವವರಿಗೆ, ಆರ್ಥಿಕವಾಗಿ ಸಬಲವಾಗಿರುವ ಹೆಣ್ಣಿಗೆ ದೊಡ್ಡ ಮೊತ್ತದ ಜೀವನಾಂಶ ಕೊಡಬೇಕಾಗಿಲ್ಲ ಎಂದು ಹಲವರು ಹೇಳುತ್ತಾರೆ. ಆದ್ರೆ ವಿಚ್ಛೇದನದ ಬಳಿಕ ಪತ್ನಿಗೆ ಇಂತಿಷ್ಟು ಜೀವನಾಂಶ ಕೊಡಲೇಬೇಕು ಎಂಬುದು ಕಾನೂನಿನಲ್ಲಿದೆ. ಮಹಿಳೆಯರಿಗಾಗಿ ರಚಿಸಲಾದ ಈ ಕೆಲ ಕಾನೂನುಗಳು ನಿಜಕ್ಕೂ ಪುರುಷರನ್ನು ಕಷ್ಟದ ಕೂಪಕ್ಕೆ ತಳ್ಳುತ್ತಿವೆ ಎಂದು ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Viral:ತಿಂಗಳಿಗೆ 60 ಸಾವಿರ ದುಡಿದ್ರೂ ಮಾಜಿ ಹೆಂಡ್ತಿಗೆ 30 ಲಕ್ಷ ಜೀವನಾಂಶ ಕೊಡ್ಬೇಕಂತೆ; ವೈರಲ್‌ ಆಯ್ತು ಪೋಸ್ಟ್‌
ವೈರಲ್​​​ ಫೋಸ್ಟ್​​
ಮಾಲಾಶ್ರೀ ಅಂಚನ್​
| Edited By: |

Updated on: Oct 11, 2024 | 5:06 PM

Share

ಇಂದಿನ ಕಾಲದಲ್ಲಿ ವಿಚ್ಛೇದನದ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಆಸ್ತಿ, ಹಣ ಕಸಿದುಕೊಳ್ಳುವ ಸಲುವಾಗಿಯೂ ಡಿವೋರ್ಸ್‌ ಪಡೆದುಕೊಳ್ಳುವವರಿದ್ದಾರೆ. ಹೀಗೆ ಪತಿ ಪತ್ನಿಯರ ನಡುವೆ ಡಿವೋರ್ಸ್‌ ಆದ್ರೆ ಪತಿಯಾದವನು ಮಾಜಿ ಪತ್ನಿಗೆ ಇಂತಿಷ್ಟು ಜೀವನಾಂಶ ನೀಡಬೇಕು ಎಂಬ ಕಾನೂನು ಇದೆ. ನಿಜಕ್ಕೂ ಈ ಕೆಲವು ಕಾನೂನುಗಳು ಕೆಲ ಅಮಾಯಕ ಪುರುಷರನ್ನು ಕಷ್ಟಕ್ಕೆ ತಳ್ಳುತ್ತವೆ ಮತ್ತು ಅವರನ್ನು ಶೋಷಿಸುತ್ತಿವೆ ಎಂದು ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವ್ಯಕ್ತಿಯೊಬ್ಬರು ಪತ್ನಿಯ ಕ್ರೌರ್ಯದಿಂದ ಬೇಸತ್ತು, 2014 ರಲ್ಲಿ ಕಾನೂನು ಹೋರಾಟಕ್ಕೆ ಇಳಿದು ಕೊನೆಗೂ ಇದೀಗ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಆದ್ರೆ ಮಕ್ಕಳಿಲ್ಲದಿದ್ದರೂ, ಆಕೆ ತಿಂಗಳಿಗೆ 60 ಸಾವಿರ ಸಂಪಾದನೆ ಮಾಡಿ, ಆರ್ಥಿಕವಾಗಿ ಸಬಲೆಯಾಗಿದ್ದರೂ ಅಕೆಗೆ 30 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ.

ದೀಪಿಕಾ ನಾರಾಯಣ ಭಾರದ್ವಾಜ್‌ (DeepikaBhardwaj) ಎಂಬವರು ಈ ಕುರಿತ ವಾಟ್ಸಾಪ್‌ ಚಾಟ್‌ ಸ್ಕ್ರೀನ್‌ ಶಾಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ಈ ವ್ಯಕ್ತಿ 10 ವರ್ಷಗಳ ಕಾನೂನು ಹೋರಾಟ ಮಾಡಿ ಕೊನೆಗೂ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್‌ ಪಡೆದುಕೊಂಡ. ಆದ್ರೆ ಆತನ ಮಾಜಿ ಪತ್ನಿ ತಿಂಗಳಿಗೆ 60 ಸಾವಿರ ದುಡಿದರೂ ಆಕೆಗೆ 30 ಲಕ್ಷ ರೂಪಾಯಿ ಜೀವನಾಂಶ ಕೊಡಬೇಕಂತೆ. ಮಹಿಳೆಯರ ಸಬಲೀಕರಣಕ್ಕಾಗಿ ರಚಿಸಲಾದ ಕಾನೂನುಗಳು ಪುರುಷರನ್ನು ದುರ್ಬಲಗೊಳಿಸುತ್ತಿವೆ ಮತ್ತು ಶೋಷಿಸುತ್ತಿವೆ ಎಂದು ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ಮೂಲಕ ಪುರುಷರಿಗೂ ಸಮಾನ ನ್ಯಾಯವನ್ನು ನೀಡಬೇಕು ಎಂಬುದನ್ನು ಕೇಳಿಕೊಂಡಿದ್ದಾರೆ.

ವೈರಲ್‌ ಫೋಟೋದಲ್ಲಿ ಡಿವೋರ್ಸ್‌ ಪಡೆದುಕೊಂಡ ವ್ಯಕ್ತಿ, ಕೊನೆಗೂ 2014 ರಲ್ಲಿ ಆರಂಭವಾದ ಕಾನೂನು ಹೋರಾಟದಲ್ಲಿ ಗೆದ್ದು, ಪತ್ನಿಯಿಂದ ಡಿವೋರ್ಸ್‌ ಪಡೆದುಕೊಂಡಿದ್ದೇನೆ. ಆಕೆ ತಿಂಗಳಿಗೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರೂ, ಆಕೆಗೆ ನಾನು 30 ಲಕ್ಷ ಜೀವನಾಂಶ ಕೊಡಬೇಕೆಂದು ಕೋರ್ಟ್‌ ಆದೇಶಿಸಿದೆ ಎಂದು ಹೇಳುವ ವಾಟ್ಸಾಪ್‌ ಸಂಭಾಷಣೆಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಇಂಗ್ಲೀಷ್‌ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?

ಅಕ್ಟೋಬರ್‌ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 58 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ10 ವರ್ಷ ಹೋರಾಡಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತಾಗಿ ಪತ್ನಿಯಿಂದ ಡಿವೋರ್ಸ್‌ ಪಡೆದುಕೊಂಡ್ರೂ ಜೀವನಾಂಶ ನೀಡಬೇಕೇ? ಹಾಗಾದ್ರೆ ಪುರುಷರ ಪರವಾಗಿ ಯಾವುದೇ ಕಾನೂನು ಇಲ್ವೇʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ತುಂಬಾ ಭಯಾನಕವಾಗಿದೆ, ಕಾನೂನು ಕೂಡಾ ಏಕಪಕ್ಷೀಯವಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ