AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಉದ್ಯೋಗಿಗಳ ವಿಶ್ರಾಂತಿಗಾಗಿ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದ ಇ-ಕಾಮರ್ಸ್‌ ಸೈಟ್‌ ಮೀಶೋ

ಉದ್ಯೋಗಿಗಳಿಗೆ ರಜೆಯನ್ನು ಸಹ ಕೊಡದೆ ಸಿಕ್ಕಾಪಟ್ಟೆ ಕೆಲಸ ಮಾಡಿಸುವ ಕಂಪೆನಿಗಳ ಮಧ್ಯೆ ಇ-ಕಾಮರ್ಸ್‌ ಸಂಸ್ಥೆ ಮೀಶೋ ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲೆಂದೇ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದೆ. ಹೌದು ಮೆಗಾ ಬ್ಲಾಕ್‌ಬಸ್ಟರ್‌ ಸೇಲ್‌ ಯಶಸ್ಸಿನ ಅಂಗವಾಗಿ ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಾವು ಕೂಡಾ ಇದೇ ಕಂಪೆನಿಗೆ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Viral: ಉದ್ಯೋಗಿಗಳ ವಿಶ್ರಾಂತಿಗಾಗಿ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದ ಇ-ಕಾಮರ್ಸ್‌ ಸೈಟ್‌ ಮೀಶೋ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Oct 11, 2024 | 5:58 PM

Share

ಮೀಶೋ ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಶಾಪಿಂಗ್‌ ಸೈಟ್.‌ ವಿಶೇಷವಾಗಿ ಶಾಪಿಂಗ್‌ ಸೈಟ್‌ನಲ್ಲಿ ಫ್ಯಾಶನ್‌ ಬಟ್ಟೆಗಳಿಂದ ಹಿಡಿದು ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಬಹಳ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಮೀಶೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳನ್ನು ನೀಡುವುದು ಮಾತ್ರವಲ್ಲದೆ ಈ ಸಂಸ್ಥೆ ತನ್ನ ಉದ್ಯೋಗಿಗಳನ್ನೂ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಹೌದು ಇದೀಗ ಮೀಶೋ ತನ್ನ ಉದ್ಯೋಗಿಗಳು ವಿಶ್ರಾಂತಿ ಪಡೆಯಲೆಂದೇ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಾವು ಕೂಡಾ ಇದೇ ಕಂಪೆನಿಗೆ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಉದ್ಯೋಗಿಗಳಿಗೆ ರಜೆಯನ್ನು ಸಹ ಕೊಡದೆ ಸಿಕ್ಕಾಪಟ್ಟೆ ಕೆಲಸ ಮಾಡಿಸುವ ಕಂಪೆನಿಗಳ ಮಧ್ಯೆ ಇ-ಕಾಮರ್ಸ್‌ ಸಂಸ್ಥೆ ಮೀಶೋ ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲೆಂದೇ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದೆ. ಈ ಶಾಪಿಂಗ್‌ ಸೈಟ್‌ ಕೆಲ ದಿನಗಳ ಹಿಂದೆ ಮೀಶೋ ಮೆಗಾ ಬ್ಲಾಕ್‌ ಬಸ್ಟರ್‌ ಸೇಲ್‌ ನಡೆಸಿತ್ತು. ಈ ಸೇಲ್‌ನಲ್ಲಿ ಮೀಶೋ ಬಹಳಷ್ಟು ಲಾಭ ಗಳಿಸಿದ್ದು, ಈ ಸೇಲ್‌ನ ಯಶಸ್ಸಿನ ಖುಷಿಯಲ್ಲಿ ಮೀಶೋ ತನ್ನ ಉದ್ಯೋಗಿಗಳಿಗೆ ಬರೋಬ್ಬರಿಗ 9 ದಿನಗಳ ರಜೆಯನ್ನು ಘೋಷಿಸಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮೆಗಾ ಬ್ಲಾಕ್‌ಬಸ್ಟರ್‌ ಸೇಲ್‌ ಯಶಸ್ವಿಗೊಳಿಸಲು ಉದ್ಯೋಗಿಗಳು ಪಟ್ಟ ಕಠಿಣ ಪರಿಶ್ರಮಕ್ಕೆ ಉಡುಗೊರೆಯೆಂಬಂತೆ ಮೀಶೋ ತನ್ನ ಉದ್ಯೋಗಿಗಳಿಗೆ 9 ದಿನಗಳ ರಜೆಯನ್ನು ನೀಡಿದೆ. ಉದ್ಯೋಗಿಗಳು ವಿಶ್ರಾಂತಿ ಪಡೆಯಲೆಂದೇ ಅಕ್ಟೋಬರ್‌ 26 ರಿಂದ ನವೆಂಬರ್‌ 3 ರ ವರೆಗೆ ಸುದೀರ್ಘ ರಜೆಯನ್ನು ಘೋಷಿಸಿದೆ. ಮೀಶೋ ತನ್ನ ಅಧೀಕೃತ ಲಿಂಕ್ಡ್‌ಇನ್‌ ಖಾತೆಯಲ್ಲಿ ಕುರಿತ ಮಾಹಿತಿಯನ್ನು ಶೇರ್‌ ಮಾಡಿಕೊಂಡಿದ್ದು, “9 ದಿನಗಳ ಕಾಲ ಲ್ಯಾಪ್‌ಟಾಪ್‌ ಬಳಸದೇ, ಇಮೇಲ್‌ ಚೆಕ್‌ ಮಾಡದೇ, ಮೀಟಿಂಗ್‌ಗಳಿಗೆ ಹಾಜರಾಗದೆ ನಿಮ್ಮ ರಜೆಯನ್ನು ಎಂಜಾಯ್‌ ಮಾಡಿ ಎಂಬ ಸಂದೇಶವನ್ನು ನೀಡಿದೆ. ಮುಂದಿನ ವರ್ಷದ ಉತ್ತಮ ಆರಂಭಕ್ಕಾಗಿ ಮೈಂಡ್‌ ಫ್ರೆಶ್‌ ಮಾಡಲು ಈ ವಿರಾಮ…” ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದೆ.

ಇದನ್ನೂ ಓದಿ; ತಿಂಗಳಿಗೆ 60 ಸಾವಿರ ದುಡಿದ್ರೂ ಮಾಜಿ ಹೆಂಡ್ತಿಗೆ 30 ಲಕ್ಷ ಜೀವನಾಂಶ ಕೊಡ್ಬೇಕಂತೆ; ವೈರಲ್‌ ಆಯ್ತು ಪೋಸ್ಟ್‌

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 20 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಮತ್ತು ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಿಗಳಿಗೆ ಒತ್ತಡವನ್ನು ಹೇರುವವರ ಮಧ್ಯೆ ಮೀಶೋ ತನ್ನ ಉದ್ಯೋಗಿಗಳಿಗೆ ಸುದೀರ್ಘ ರಜೆಯನ್ನು ನೀಡಿರುವುದನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಲ್ಲಾ ಕಂಪೆನಿಗಳಲ್ಲೂ ಇದೇ ರೀತಿ ಧನಾತ್ಮಕ ವಾತಾವರಣವಿದ್ದರೆ ಎಷ್ಟು ಚೆಂದವಲ್ಲಾʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ