Viral: ಬಾಲ್ಡ್ ಎಂದು ಕರೆಯುವುದು ಕೂಡಾ ಲೈಂಗಿಕ ಕಿರುಕುಳ, ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ ಬಾಸ್‌ಗೆ ಕ್ಲಾಸ್ ತೆಗೆದುಕೊಂಡ ಕೋರ್ಟ್
ಬೋಳು ತಲೆಯವರಿಗೆ ಮೊಟ್ಟೆ, ಬಾಲ್ಡ್ ಅಂತೆಲ್ಲಾ ರೇಗಿಸ್ತಿರ್ತಾರೆ. ಹೀಗೆಲ್ಲಾ ರೇಗಿಸುವಾಗ ಬೊಕ್ಕ ತಲೆಯವರಿಗೆ ಏನೋ ಬೇಜಾರಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಬಾಸ್ ಕೂಡಾ ತನ್ನ ಉದ್ಯೋಗಿಯ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ್ದು, ಇದರಿಂದ ಬೇಸರಗೊಂಡ ಉದ್ಯೋಗಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಕೂಡದೂ ಎಂದು ಬಾಸ್‌ಗೆ ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಬೋಳು ತಲೆಯ ಸಮಸ್ಯೆ ಪುರುಷರಿಗೆ ತುಂಬಾ ಮುಜುಗರ ಉಂಟು ಮಾಡುವಂತಹ ಸಂಗತಿ. ಹೌದು ಬೋಳು ತಲೆಯವರಿಗೆ ಅವರ ಫ್ರೆಂಡ್ಸ್, ಸಹದ್ಯೋಗಿಗಳು ಮೊಟ್ಟೆ, ಬಾಲ್ಡ್ ಅಂತೆಲ್ಲಾ ಹೇಳಿ ರೇಗಿಸುತ್ತಿರುತ್ತಾರೆ. ಈ ಮಾತುಗಳು ಅವರನ್ನು ತೀರಾ ಮುಜುಗರಕ್ಕೆ ಉಂಟು ಮಾಡುತ್ತವೆ ಮತ್ತು ಕೆಲವೊಂದು ಬಾರಿ ಈ ತಮಾಷೆಯ ಮಾತುಗಳು ಅವರ ಮನಸ್ಸಿಗೂ ನೋವುಂಟು ಮಾಡುತ್ತವೆ. ಇಲ್ಲೊಬ್ಬ ಬಾಸ್ ಕೂಡಾ ತನ್ನ ಉದ್ಯೋಗಿಯ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದು, ಇದರಿಂದ ಬೇಸರಗೊಂಡ ಉದ್ಯೋಗಿ ಸೀದಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಸತತ ಹೋರಾಟದ ಬಳಿಕ ಕೋರ್ಟ್ ಉದ್ಯೋಗಿಯ ಪರ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಕೂಡದೂ ಎಂದು ಬಾಸ್‌ಗೆ ನ್ಯಾಯಾಲಯ ಕ್ಲಾಸ್ ತೆಗೆದುಕೊಂಡಿದೆ.
ಬ್ರಿಟನ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹೈ ಕೋರ್ಟ್ ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ ನೀಡಿದಂತೆ ಎಂಬ ತೀರ್ಪನ್ನು ನೀಡಿದೆ. ಬ್ರಿಟನ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೋಳು ತಲೆಗೆ ಅವರ ಬಾಸ್ ತಮಾಷೆ ಮಾಡಿದ್ದು ಮಾತ್ರವಲ್ಲದೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ಆ ವ್ಯಕ್ತಿ 2021 ರಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಆ ವ್ಯಕ್ತಿಯ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಕೂಡದೂ ಎಂದು ಬಾಸ್‌ಗೆ ನ್ಯಾಯಾಲಯ ಕ್ಲಾಸ್ ತೆಗೆದುಕೊಂಡಿದೆ.
ಇದನ್ನೂ ಓದಿ: ಉದ್ಯೋಗಿಗಳ ವಿಶ್ರಾಂತಿಗಾಗಿ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದ ಇ-ಕಾಮರ್ಸ್ ಸೈಟ್ ಮೀಶೋ
ಪುರುಷರ ಬೋಳು ತಲೆಯ ಬಗ್ಗೆ ಗೇಲಿ ಮಾಡುವುದು ಮಹಿಳೆಯರ ಸ್ತನದ ಬಗ್ಗೆ ತಮಾಷೆ ಮಾಡುವುದಕ್ಕೆ ಸಮಾನವಾದ್ದದ್ದು, ಆದ್ದರಿಂದ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಬಾರದು, ಇದು ಕೂಡಾ ಲೈಗಿಂಕ ದೌರ್ಜನ್ಯ ಎಂದು ಬ್ರಿಟನ್ ಹೈ ಕೋರ್ಟ್ ಆದೇಶ ಹೊರಡಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ