Viral: ಅಬ್ಬಬ್ಬಾ ಲಾಟ್ರಿ…. ಜಪಾನ್‌ಗೆ ಹೋಗುವ ಭಾರತೀಯ ಪ್ರವಾಸಿಗರಿಗೆ ಫ್ಲೈಟ್ ಟಿಕೆಟ್ ಫ್ರೀ ಫ್ರೀ ಫ್ರೀ….
ಇನ್ನೂ ಮುನ್ನೆಲೆಗೆ ಬಂದಿರದ ಆಫ್ ಬೀಟ್ ಪ್ರವಾಸಿ ಸ್ಥಳಗಳ ಉತ್ತೇಜನಕ್ಕಾಗಿ ಜಪಾನ್ ಏರ್‌ಲೈನ್ಸ್ ಒಂದಷ್ಟು ದೇಶಗಳ ಪ್ರವಾಸಿಗರಿಗೆ ಬಂಪರ್ ಆಫರ್ ಒಂದನ್ನು ನೀಡಿದೆ. ಇದರಲ್ಲಿ ಭಾರತೀಯ ಪ್ರವಾಸಿಗರೂ ಅವಕಾಶವನ್ನು ಪಡೆದುಕೊಂಡಿದ್ದು, ನೀವೇನಾದರೂ ಜಪಾನ್‌ಗೆ ಪ್ರವಾಸ ಹೋಗುವ ಪ್ಲಾನ್‌ನಲ್ಲಿದ್ದರೆ ಜಪಾನ್ ಏರ್‌ಲೈನ್ಸ್ ನಿಮಗೆ ಉಚಿತ ವಿಮಾನ ಟಿಕೆಟ್ ಅನ್ನು ನೀಡಲಿದೆ.
ಅದ್ಭುತವಾದ ಪ್ರವಾಸಿ ತಾಣಗಳ ನೆಲೆಯಾಗಿರುವ ಜಪಾನ್ ದೇಶಕ್ಕೆ ಪ್ರವಾಸ ಹೋಗಬೇಕೆಂಬುದುವುದು ಹಲವರ ಕನಸು. ನೀವು ಕೂಡಾ ಜಪಾನ್ ದೇಶಕ್ಕೆ ಪ್ರವಾಸ ಹೋಗುವ ಯೋಜನೆಯಲ್ಲಿದ್ದಿರಾ, ಹಾಗಾದ್ರೆ ನಿಮಗಿದೆ ಇಲ್ಲೊಂದು ಗುಡ್ ನ್ಯೂಸ್.… ಅದೇನೆಂದ್ರೆ ಜಪಾನ್ ಏರ್‌ಲೈನ್ಸ್ ಈ ದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ ಫ್ರೀ ಫ್ಲೈಟ್ ಟಿಕೆಟ್ ನೀಡಲಿದೆ. ಹೌದು ಇನ್ನೂ ಮುನ್ನೆಲೆಗೆ ಬಂದಿರದ ಆಫ್ ಬೀಟ್ ಪ್ರವಾಸಿ ಸ್ಥಳಗಳ ಉತ್ತೇಜನಕ್ಕಾಗಿ ಜಪಾನ್ ಏರ್‌ಲೈನ್ಸ್ ಒಂದಷ್ಟು ದೇಶಗಳ ಪ್ರವಾಸಿಗರಿಗೆ ಬಂಪರ್ ಈ ಆಫರ್ ನೀಡಿದ್ದು, ಇದರಲ್ಲಿ ಭಾರತೀಯ ಪ್ರವಾಸಿಗರೂ ಕೂಡಾ ಅವಕಾಶವನ್ನು ಪಡೆದುಕೊಂಡಿದ್ದಾರೆ. ನೀವೇನಾದರೂ ಜಪಾನ್‌ಗೆ ಪ್ರವಾಸ ಹೋಗುವ ಪ್ಲಾನ್‌ನಲ್ಲಿದ್ದರೆ ಜಪಾನ್ ಏರ್‌ಲೈನ್ಸ್ ನಿಮಗೆ ಉಚಿತ ವಿಮಾನ ಟಿಕೆಟ್ ಅನ್ನು ನೀಡಲಿದೆ.
ಜಪಾನ್ ದೇಶದಲ್ಲಿರುವ ಆಫ್‌ಬೀಟ್ ಪ್ರವಾಸಿ ತಾಣಗಳ ಉತ್ತೇಜನಕ್ಕಾಗಿ ಜಪಾನ್ ಏರ್‌ಲೈನ್ಸ್ ವಿದೇಶಿ ಪ್ರವಾಸಿಗರಿಗೆ ಫ್ರೀ ಫ್ಲೈಟ್ ಟಿಕೆಟ್ ನೀಡುವ ಭರ್ಜರಿ ಆಫರ್ ನೀಡಿದೆ. ಈ ಉಪಕ್ರಮವನ್ನು ಸೆಪ್ಟೆಂಬರ್ ತಿಂಗಳಿನಿಂದಲೇ ಪ್ರಾರಂಭಿಸಲಾಗಿದೆ. ಭಾರತ, ಅಮೇರಿಕಾ, ಕೆನಡಾ, ಮೆಕ್ಸಿಕೋ, ಥೈಲ್ಯಾಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿಯೆಟ್ನಾಂ, ಫಿಲಿಪೈನ್, ಇಂಡೋನೇಷ್ಯಾ, ಚೀನಾ ಮತ್ತು ತೈವಾನ್ ದೇಶದ ಜನರಿಗೆ ಈ ಭರ್ಜರಿ ಆಫರ್ ಅನ್ನು ನೀಡಿದೆ. ಭಾರತ ಸೇರಿದಂತೆ ಈ ಕೆಲ ದೇಶಗಳ ಜನರು ಜಪಾನ್‌ಗೆ ಪ್ರವಾಸ ಹೋಗಲು ಬಯಸಿದರೆ ಅವರಿಗೆ ಜಪಾನ್ ಏರ್‌ಲೈನ್ಸ್ ಫ್ರೀ ಟಿಕೆಟ್ ನೀಡಲಿದೆ.
ಉಚಿತ ಟಿಕೆಟ್‌ಗಳನ್ನು ಪಡೆಯಲು, ಪ್ರವಾಸಿಗರು ಜಪಾನ್ ಏರ್‌ಲೈನ್ಸ್‌ನೊಂದಿಗೆ ಅಂತರಾಷ್ಟ್ರೀಯ ರೌಂಡ್-ಟ್ರಿಪ್ ಟಿಕೆಟ್‌ಗಳನ್ನು ಬುಕ್ ಮಾಡಬೇಕಾಗುತ್ತದೆ. ಅದೇ ಟಿಕೆಟ್ ಖರೀದಿಯ ಸಮಯದಲ್ಲಿ ಆಫರ್‌ನಲ್ಲಿ ದೇಶೀಯ ವಿಮಾನವನ್ನು ಸಹ ಕಾಯ್ದಿರಿಸಬೇಕು. ಈ ಒಂದು ಆಫರ್ ಯಾವಾಗ ಲಾಸ್ಟ್ ಎಂಬುದನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಜಪಾನ್ ಏರ್‌ಲೈನ್ಸ್‌ನ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಬಾಲ್ಡ್ ಎಂದು ಕರೆಯುವುದು ಕೂಡಾ ಲೈಂಗಿಕ ಕಿರುಕುಳ, ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ ಬಾಸ್‌ಗೆ ಕ್ಲಾಸ್ ತೆಗೆದುಕೊಂಡ ಕೋರ್ಟ್
ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಾರಿಗೆ ತಂದ ಉಪಕ್ರಮ:
ಕ್ಯರೇಟೆಡ್ ಕ್ಯೋಟೋ ಎಂಬ ಟ್ರಾವೆಲ್ ಏಜೆನ್ಸಿಯ ಸ್ಥಾಪಕರಾದ ಸಾರಾ ಐಕೊ, “ರಾಜಧಾನಿಯಲ್ಲಿನ ಪ್ರವಾಸೋದ್ಯಮವನ್ನು ಕಡಿಮೆ ಮಾಡಿ ನಮ್ಮ ದೇಶದ ಆಫ್ ಬೀಟ್ ಸ್ಥಳಗಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಉಪಕ್ರಮವನ್ನು ಜಾರಿಗೆ ತರಲಾಗಿದೆ” ಎಂಬ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ತುಂಬಾನೇ ಉತ್ತಮ ಉಪಕ್ರಮ ಆದರೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಗೊತ್ತಿಲ್ಲ. ಯಾಕಂದ್ರೆ ಆಫ್ ಬೀಟ್ ಸ್ಥಳಗಳೊಂದಿಗೆ ಹೀಗೆ ಬರುವ ಪ್ರವಾಸಿಗರು ಪ್ರಮುಖ ನಗರಗಳಿಗೂ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಇದರಿಂದ ನಗರಗಳಲ್ಲಿ ಜನಜಂಗುಳಿಯೇ ತುಂಬಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ