Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಅರ್ಜಿ ಹಾಕಿದ 48 ವರ್ಷಗಳ ನಂತರ ಬಂತು ಆಫರ್​ ಲೆಟರ್​

ವರದಿಯ ಪ್ರಕಾರ, ಟಿಜ್ಜಿ ಹಾಡ್ಸ್ ಸ್ಟಂಟ್ ವುಮನ್ ಆಗಲು ಬಯಸಿದ್ದರು. ಅದರಂತೆ 1976 ರಲ್ಲಿ, ಮೋಟಾರ್ ಸೈಕಲ್ ಸ್ಟಂಟ್ ರೈಡರ್ ಆಗಲು ಅದೇ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಆದರೆ 48 ವರ್ಷಗಳ ನಂತರ ಆಫರ್​ ಲೆಟರ್​ ಬಂದು ಕೈ ಸೇರಿದೆ.

ಕೆಲಸಕ್ಕೆ ಅರ್ಜಿ ಹಾಕಿದ 48 ವರ್ಷಗಳ ನಂತರ ಬಂತು ಆಫರ್​ ಲೆಟರ್​
Follow us
ಅಕ್ಷತಾ ವರ್ಕಾಡಿ
|

Updated on: Oct 12, 2024 | 4:24 PM

ಸಾಮಾನ್ಯವಾಗಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ, 10-15 ದಿನಗಳಲ್ಲಿ ಹೆಚ್ಚೆಂದರೆ ಒಂದು ತಿಂಗಳ ಒಳಗೆ ಉತ್ತರ ಸಿಗುತ್ತದೆ. ಆದರೆ ಎಂದಾದರೂ 48 ವರ್ಷಗಳ ನಂತರ ಆಫರ್​ ಲೆಟರ್​ ಬಂದಿರುವುದನ್ನು ಕೇಳಿದ್ದೀರಾ? ಸದ್ಯ ಇದಕ್ಕೆ ಸಂಬಂಧಿಸಿದ ಘಟನೆಯೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದೆ.

ಇಂಗ್ಲೆಂಡ್‌ನ ನಿವಾಸಿ ಟಿಜ್ಜಿ ಹಾಡ್ಸ್ ತನ್ನ 22 ನೇ ವಯಸ್ಸಿನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ 48 ವರ್ಷಗಳ ನಂತರ ಆಫರ್​ ಲೆಟರ್​ ಬಂದು ಕೈ ಸೇರಿದೆ. ಇದೀಗ ಆಫರ್​​ ಲೆಟರ್​ ಕಂಡು ಟಿಜ್ಜಿ ಶಾಕ್​​ ಆಗಿದ್ದು, ಈ ಘಟನೆಯ ಕುರಿತು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲ್ಡ್‌ ಎಂದು ಕರೆಯುವುದು ಕೂಡಾ ಲೈಂಗಿಕ ಕಿರುಕುಳ, ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ ಬಾಸ್‌ಗೆ ಕ್ಲಾಸ್‌ ತೆಗೆದುಕೊಂಡ ಕೋರ್ಟ್

ವರದಿಯ ಪ್ರಕಾರ, ಟಿಜ್ಜಿ ಹಾಡ್ಸ್ ಯಾವಾಗಲೂ ಸ್ಟಂಟ್ ವುಮನ್ ಆಗಲು ಬಯಸಿದ್ದರು. 1976 ರಲ್ಲಿ, ಅವರು ಮೋಟಾರ್ ಸೈಕಲ್ ಸ್ಟಂಟ್ ರೈಡರ್ ಆಗಲು ಬಯಸಿದ್ದರು ಮತ್ತು 1976 ರ ಜನವರಿಯಲ್ಲಿ ಅದೇ ಕೆಲಸಕ್ಕೆ ಅರ್ಜಿ ಸಲ್ಲಿಸಿದಳು. ಆದರೆ ಬಂದ ಆಫರ್​ ಲೆಟರ್ ಪೋಸ್ಟ್ ಆಫೀಸ್‌ನ ಡ್ರಾಯರ್‌ನ ಹಿಂದೆ ಅಂಟಿಕೊಂಡಿತು, ಇದರಿಂದಾಗಿ ಅದನ್ನು ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಕೆಲಸದ ಬಗ್ಗೆ ತಿಜಿ ತಲೆಕೆಡಿಸಿಕೊಂಡಿರಲಿಲ್ಲ. ಇದು ಅವರ ವೃತ್ತಿಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಯಾಕೆಂದರೆ ಅವರು ಈಗಾಗಲೇ ಸಾಕಷ್ಟು ಬೈಕ್ ಸ್ಟಂಟ್ ಮಾಡಿ ಹೆಸರು ಗಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ