Viral News : ಇಂಡೋನ್ಯೇಷ್ಯಾದಲ್ಲಿ ನಡೆಯುತ್ತೆ ಪ್ರವಾಸಿಗರ ಜೊತೆ ತಾತ್ಕಾಲಿಕ ಮದುವೆ, ಏನಿದು ವಿಚಿತ್ರ ಮದುವೆ ಪದ್ಧತಿ?

ನಮ್ಮ ಹಿರಿಯರ ಕಾಲದಲ್ಲಿ ಮದುವೆ ಎಂದರೆ ಅದೊಂದು ಪವಿತ್ರ ಬಂಧನ ಎನ್ನುವ ಭಾವವಿತ್ತು. ಈಗಿನ ಕಾಲದಲ್ಲಿ ಮದುವೆಯು ಅರ್ಥ ಕಳೆದುಕೊಂಡಿದೆ. ಇದಕ್ಕೆ ಉದಾಹರಣೆ ಎಂಬಂತ ಇಂಡೋನೇಷ್ಯಾದ ಕೆಲ ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳ ಟ್ರೆಂಡ್‌ ಹುಟ್ಟಿಕೊಂಡಿದೆ. ಪ್ರವಾಸಕ್ಕೆಂದು ಬರುವವರನ್ನು ಆಕರ್ಷಿಸಿ ಅವರೊಂದಿಗೆ ಇಲ್ಲಿನ ಯುವತಿಯರು ತಾತ್ಕಾಲಿಕ ಮದುವೆಯಾಗುತ್ತಿದ್ದಾರೆ. ಆದರೆ ಈ ಪ್ರವಾಸಿಗರು ವಾಪಸ್ಸು ತನ್ನ ದೇಶಕ್ಕೆ ಮರಳಿದರೆ ಯುವತಿಯ ಜೊತೆಗಿನ ಮದುವೆಯು ರದ್ದಾಗುತ್ತದೆಯಂತೆ.

Viral News : ಇಂಡೋನ್ಯೇಷ್ಯಾದಲ್ಲಿ ನಡೆಯುತ್ತೆ ಪ್ರವಾಸಿಗರ ಜೊತೆ ತಾತ್ಕಾಲಿಕ ಮದುವೆ, ಏನಿದು ವಿಚಿತ್ರ ಮದುವೆ ಪದ್ಧತಿ?
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Oct 13, 2024 | 2:08 PM

ಮಾನವನು ಎಷ್ಟು ಅಭಿವೃದ್ಧಿ ಹೊಂದಿದ್ದಾನೆ ಎಂದರೆ ಸಂಬಂಧವನ್ನು ಕೂಡ ಹಣಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಗಂಡ ಹೆಂಡತಿ ಪವಿತ್ರ ಸಂಬಂಧವೆಂದು ಹೇಳಲಾಗುತ್ತದೆ. ಆದರೆ ಇದೀಗ ಈಗ ಮದುವೆಯೇ ಆಗದೇ ಸಂಸಾರ ನಡೆಸುವವರು ಹೆಚ್ಚಾಗುತ್ತಿದ್ದಾರೆ. ಅದಲ್ಲದೇ ಇಂಡೋನೇಷ್ಯಾದ ಕೆಲ ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳ ಟ್ರೆಂಡ್‌ ವೊಂದು ಹುಟ್ಟಿಕೊಂಡಿದ್ದು ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಹಣಕ್ಕಾಗಿ ಪ್ರವಾಸಿಗರೊಂದಿಗೆ ತಾತ್ಕಾಲಿಕ ವಿವಾಹ ಬಂಧನಕ್ಕೆ ಒಳಗಾಗುವ ಉದ್ಯಮವೊಂದು ಇಂಡೋನೇಷ್ಯಾದ ಪನ್ಕಾಕ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದನ್ನು “ಸಂತೋಷದ ಮದುವೆಗಳು” ಎಂದು ಕರೆಯಲಾಗುತ್ತಿದೆ. ಹೌದು, ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಮಾಡಿದ ವರದಿಯ ಪ್ರಕಾರ ಈ ದೇಶದಲ್ಲಿ ಅತ್ಯಂತ ಕಡು ಬಡತನದ ಹಿನ್ನೆಲೆಯಿಂದ ಬಂದ ಯುವತಿಯರು ತಾತ್ಕಾಲಿಕ ಮದುವೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಹೇಳಿ ಕೇಳಿ ಈ ಇಂಡೋನೇಷಿಯಾ ಆತ್ಯಕರ್ಷಕ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಪ್ರೇಕ್ಷಣೀಯ ತಾಣಗಳನ್ನು ನೋಡಲೆಂದೇ ಬರುತ್ತಾರೆ. ಆದರೆ ಇಲ್ಲಿ ಬಡ ಯುವತಿಯರು ಪ್ರವಾಸಿಗರನ್ನು ಹಣಕ್ಕಾಗಿ ವಾರದ ಮಟ್ಟಿಗೆ ಮದುವೆಯಾಗುತ್ತಾರಂತೆ. ಇದನ್ನೇ ತಾತ್ಕಾಲಿಕ ಮದುವೆ ಎಂದು ಕರೆಯಲಾಗುತ್ತದೆ. ಇಂಡೋನೇಷ್ಯಾದ ಪುಂಕಾಕ್‌ ಎಂಬ ಹಳ್ಳಿಯಲ್ಲಿ ಇಂತಹದ್ದೊಂದು ಪದ್ಧತಿ ಇದೆ. ಅದಲ್ಲದೇ, ಸ್ಥಳೀಯ ಹೆಣ್ಣು ಮಕ್ಕಳೇ ದುಡ್ಡಿಗಾಗಿ ಯುವತಿಯರನ್ನು ಮದುವೆ ಮಾಡಿಕೊಳ್ಳುವ ಎಜೆನ್ಸಿಗಳನ್ನು ಪ್ರಾರಂಭಿಸಿದ್ದಾರೆ.

ಈ ಎಜೆನ್ಸಿಗಳು ಯುವತಿ ಹಾಗೂ ಇಲ್ಲಿಗೆ ಬಂದ ಪ್ರವಾಸಿಗರು ಒಪ್ಪಿಕೊಂಡರೆ ಮದುವೆ ಮಾಡಿ ಮುಗಿಸುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ಮದುವೆಗಾಗಿ ವಧುದಕ್ಷಿಣೆ ಎಂದು ಲಕ್ಷಾಂತರ ರೂಪಾಯಿ ಹಣವನ್ನು ನೀಡಬೇಕು. ಆದಾದ ಬಳಿಕ ತಮ್ಮ ತಮ್ಮ ದೇಶಕ್ಕೆ ಹೋರಾಟ ಪ್ರವಾಸಿಗರ ಜೊತೆಗಿನ ಈ ಮದುವೆಯು ರದ್ದಾಗುತ್ತದೆ. ಆ ಬಳಿಕ ಈ ಯುವತಿಯು ಬೇರೊಬ್ಬ ಪ್ರವಾಸಿಗನನ್ನು ಇದೇ ರೀತಿ ವರಿಸಿಕೊಳ್ಳುತ್ತಾಳೆ.

ಇದನ್ನೂ ಓದಿ: ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ? ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಮೂವರು ಯುವತಿಯರು

ಕಹಾಯಾ ಎನ್ನುವ ಯುವತಿಯು ಈ ತಾತ್ಕಾಲಿಕ ಮದುವೆಯ ಬಗ್ಗೆ ಹೇಳಿಕೊಂಡಿದ್ದು, ತಾನು 17 ವರ್ಷ ವಯಸ್ಸಿನಲ್ಲಿ ತಾತ್ಕಾಲಿಕ ಹೆಂಡತಿಯಾಗಿದ್ದೇನೆ. ಈವರೆಗೆ ತಾನು 15ಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದೇನೆ. ಎಲ್ಲವೂ ಮಧ್ಯಪ್ರಾಚ್ಯದ ಪ್ರವಾಸಿಗರು. ಮೊದಲ ತಾತ್ಕಾಲಿಕ ಪತಿ ಸೌದಿ ಅರೇಬಿಯಾದ 50ರ ಹರೆಯದ ವ್ಯಕ್ತಿ ಎಂದಿದ್ದಾಳೆ.

ಅದಲ್ಲದೇ, ಈಕೆಯು 850 ಡಾಲರ್ ಕೊಟ್ಟು ಮದುವೆಯಾಗಿದ್ದನಂತೆ. ಏಜೆಂಟ್ ಮತ್ತು ಅಧಿಕಾರಿಗಳು ತಮ್ಮ ಪಾಲು ಪಡೆದ ಬಳಿಕ ಅರ್ಧದಷ್ಟು ಮೊತ್ತ ಮಾತ್ರ ತಮ್ಮ ಕೈ ಸೇರಿತ್ತು. ಆದರೆ ಮದುವೆಯಾದ ಐದು ದಿನಗಳ ಬಳಿಕ ಪತಿ ತನ್ನ ದೇಶಕ್ಕೆ ವಾಪಾಸ್ಸಾಗಿದ್ದಾನೆ. ಆ ಬಳಿಕ ವಿಚ್ಛೇದನ ಪಡೆದಿದ್ದೇನೆ. ಇದರಿಂದಲೇ ತಮ್ಮ ಜೀವನ ಸಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಯನ್ನು ನೋಡಿಕೊಳ್ಳಲು ಈ ಮದುವೆಯಿಂದ ಸಾಧ್ಯವಾಗಿದೆ ಎಂದಿದ್ದಾರೆ. ಇಲ್ಲಿನ ಇನ್ನೊಬ್ಬ ಮಹಿಳೆಯು ಕೂಡ ತಾನು ಕನಿಷ್ಠ 20 ಬಾರಿ ಮದುವೆಯಾಗಿದ್ದೇನೆ. ಈಗ ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದಿದ್ದೇನೆ ಎಂದಿದ್ದಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ