Viral: ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ? ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಮೂವರು ಯುವತಿಯರು
ಪೂಜಾ ಕಾರ್ಯಕ್ರಮ, ದೇವಾಲಯಗಳಿಗೆ ಹೋಗುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆಗಳನ್ನು ತೊಟ್ಟರೆಯೇ ಚಂದ. ಆದ್ರೆ ಇಲ್ಲಿ ಮೂವರು ಯುವತಿಯರು ನವರಾತ್ರಿ ಹಬ್ಬದ ದುರ್ಗಾ ಪೂಜೆಗೆ ಪಬ್, ಪಾರ್ಟಿಗೆ ಹೋಗುವಂತೆ ತುಂಡುಡುಗೆ ತೊಟ್ಟು ಆಗಮಿಸಿದ್ದಾರೆ. ಇವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ದೇವಾಲಯಗಳಿಗೆ ಹೋಗುವ ಸಂದರ್ಭದಲ್ಲಾಗಿರಲಿ ಅಥವಾ ಯಾವುದೇ ಪೂಜಾ ಕಾರ್ಯಕ್ರಮಗಳಿಗೆ ಹೋಗುವ ಸಮಯದಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆಗಳನ್ನು ತೊಟ್ಟರೆಯೇ ಚಂದ. ಆದ್ರೆ ನವರಾತ್ರಿ ಹಬ್ಬದಲ್ಲಿ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮೂವರು ಮಾಡೆಲ್ ಗಳು ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಇವರುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೆಂಥಾ ಸಂಸ್ಕೃತಿ ಎಂದು ಇವರ ಅವತಾರಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲ್ಕತ್ತಾದ ಮೂವರು ಮಾಡೆಲ್‌ಗಳು ದುರ್ಗಾ ಪೂಜೆಯಲ್ಲಿ ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಸ್ವತಃ ಈ ಫೋಟೋವನ್ನು ಮಾಡೆಲ್ ಸನ್ನತಿ (sannati__ ) ಮತ್ತು (selena.bb22) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೂವರು ಯುವತಿಯರು ಅರೆಬರೆ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿ ದೇವಿಯ ವಿಗ್ರಹದ ಮುಂದೆ ನಿಂತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನನ್ಗೂ ಒಂದು ಸೀಟು ಕೊಡಿ ಮಾರ್ರೆ, ಕಾಲೇಜಿಗೆ ಡೈರೆಕ್ಟ್ ಎಂಟ್ರಿ ಕೊಟ್ಟ ಎಮ್ಮೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಾನು ಒಬ್ಬ ಮುಸ್ಲಿಮನಾಗಿ ಹೇಳುತ್ತಿದ್ದೇನೆ ಪವಿತ್ರ ಸ್ಥಳದಲ್ಲಿ ಇಂತಹ ಡ್ರೆಸ್ಸಿಂಗ್ ತುಂಬಾನೇ ಅಸಹ್ಯಕರವಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ದಯವಿಟ್ಟು ದುರ್ಗಾ ಪೂಜೆಯನ್ನು ಹಾಳು ಮಾಡಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಪವಿತ್ರ ಸ್ಥಳದಲ್ಲಿ ಇದೆಂತಾ ಅಸಹ್ಯ ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ