Viral Video : ದಾಂಡಿಯಾ ನೃತ್ಯ ಮಾಡಿ ಗಮನ ಸೆಳೆದ ವೃದ್ಧ ದಂಪತಿ, ಎನ್ ಎನರ್ಜಿ ಗುರು ಎಂದ ನೆಟ್ಟಿಗರು
ದಸರಾ ನವರಾತ್ರಿ ಹಬ್ಬವೆಂದರೆ ಸಂಭ್ರಮ ಸಡಗರದ ಸಮ್ಮಿಲನ. ಈ ಒಂಬತ್ತು ದಿನಗಳಲ್ಲಿ ನವ ದುರ್ಗೆಯರ ಪೂಜೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಾಂಪ್ರದಾಯಿಕ ಗಾರ್ಬಾ ಉಡುಪುಗಳನ್ನು ಧರಿಸಿರುವ ವೃದ್ಧ ದಂಪತಿಗಳಿಬ್ಬರೂ ದಾಂಡಿಯಾ ನೃತ್ಯ ಮಾಡಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ.
ನವರಾತ್ರಿಯೆಂದರೆ ಭಾರತದಲ್ಲಿ ನಾನಾ ರೀತಿಯಲ್ಲಿ ಆಚರಣೆಗಳಿರುತ್ತದೆ. ಕೆಲವೆಡೆ ಗೊಂಬೆ ಕೂರಿಸಿದರೆ, ಇನ್ನು ಕೆಲವೆಡೆ ಬೃಹತ್ ಮೂರ್ತಿಯನ್ನಿಟ್ಟು ದುರ್ಗಾಪೂಜೆ ಮಾಡಿ ದೇವಿಯನ್ನು ಆರಾಧಿಸುತ್ತಾರೆ. ಗುಜರಾತಿನಲ್ಲಿ ನವರಾತ್ರಿಯ ದಿನಗಳಲ್ಲಿ ದುರ್ಗಾಪೂಜೆಯೊಂದಿಗೆ ರಾತ್ರಿಗಳೆಲ್ಲಿ ದಾಂಡಿಯಾ ಹಾಗೂ ಗರ್ಭಾ ನೃತ್ಯಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ ನವರಾತ್ರಿಯೇನು ಮುಗಿದಿದೆ, ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ದಂಪತಿಗಳಿಬ್ಬರೂ ಇಳಿ ವಯಸ್ಸಿನಲ್ಲಿ ದಾಂಡಿಯಾ ನೃತ್ಯ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಉತ್ಸಾಹಭರಿತವಾಗಿ ದಾಂಡಿಯಾ ನೃತ್ಯ ಮಾಡುತ್ತಿರುವ ವೃದ್ಧ ದಂಪತಿಗಳನ್ನು ಕಂಡಾಗ ಏನು ಎನರ್ಜಿ ಗುರು ಎಂದೆನಿಸಬಹುದು. ಇನ್‌ಸ್ಟಾಗ್ರಾಮ್ ಪ್ರಭಾವಿಯಾಗಿ ತನಿಶ್ ಶಾ ಅವರು ತಮ್ಮ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೃದ್ಧ ದಂಪತಿಗಳು ಆಕರ್ಷಕವಾಗಿ ದಾಂಡಿಯಾ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವೃದ್ಧೆ ಕ್ಲಾಸಿಕ್ ಕಪ್ಪು ಕುರ್ತಾ ಧರಿಸಿದರೆ, ವೃದ್ಧ ವ್ಯಕ್ತಿಯು ಪೈಜಾಮಾವನ್ನು ಧರಿಸಿದ್ದು, ತಾಳಕ್ಕೆ ತಕ್ಕಂತೆ ಸ್ಟೆಪ್ ಹಾಕಿದ್ದು ತಮ್ಮ ನೃತ್ಯ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
View this post on Instagram
ಈ ವಿಡಿಯೋದೊಂದಿಗೆ, ನವರಾತ್ರಿಯು ಗುಜರಾತಿಗಳಿಗೆ ಕೇವಲ ಹಬ್ಬಕ್ಕಿಂತ ಹೆಚ್ಚಾಗಿರುತ್ತದೆ, ಇದೊಂದು ಅದ್ಭುತ ಭಾವನೆಯಾಗಿದೆ. ಈ ಮಾಂತ್ರಿಕ ಕ್ಷಣಗಳನ್ನು ನೀವು ಸೋಲಿಸಲು ಸಾಧ್ಯವಿಲ್ಲ” ಎಂದು ತನಿಶ್ ಶಾ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋ ಈಗಾಗಲೇ 13.4 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.
ಇದನ್ನೂ ಓದಿ: ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ? ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಮೂವರು ಯುವತಿಯರು
ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯು ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ‘ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅವರಲ್ಲಿರುವ ಈ ಉತ್ಸಾಹವು ಆರೋಗ್ಯಕರ ಜೀವನವನ್ನು ಹೊಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿ’ ಎಂದಿದ್ದಾರೆ. ಇನ್ನೊಬ್ಬರು, ‘ಸೂಪರ್ ಎನರ್ಜಿಟಿಕ್ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಅತ್ಯುತ್ತಮ ನವರಾತ್ರಿ ಆಚರಣೆ’ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ