AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಮಾರ್ಗಸೂಚಿಗಳನ್ನು ಮುಂದಿಟ್ಟ ಬಿಸಿಸಿಐ

IPL 2026 Schedule: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಮಾರ್ಚ್ 28 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಇದಾದ ಮೊದಲ ಹಂತದಲ್ಲಿ 19 ಪಂದ್ಯಗಳು ಜರುಗಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಮಾರ್ಗಸೂಚಿಗಳನ್ನು ಮುಂದಿಟ್ಟ ಬಿಸಿಸಿಐ
Ipl 2026
ಝಾಹಿರ್ ಯೂಸುಫ್
|

Updated on:Mar 17, 2026 | 2:20 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಅದಕ್ಕೂ ಮುನ್ನ ಬಿಸಿಸಿಐ ಎಲ್ಲಾ ತಂಡಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳ ಪ್ರಕಾರವೇ ಅಭ್ಯಾಸ ನಡೆಸಬೇಕೆಂದು ತಿಳಿಸಲಾಗಿದೆ. ಬಿಸಿಸಿಐ ಮುಂದಿಟ್ಟಿರುವ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  • ತಾಜಾ ಪಿಚ್‌ಗಳ ಬಳಕೆ: ಯಾವುದೇ ತಂಡವು ಅಭ್ಯಾಸದ ವೇಳೆ ತನ್ನ ಪ್ರತಿಸ್ಪರ್ಧಿ ತಂಡ ಬಳಸಿದ ಪಿಚ್ ಅಥವಾ ನೆಟ್‌ಗಳನ್ನು ಬಳಸುವಂತಿಲ್ಲ. ಪ್ರತಿ ಸೆಷನ್‌ಗೂ ಹೊಸದಾಗಿ ಸಿದ್ಧಪಡಿಸಿದ ಪಿಚ್‌ಗಳನ್ನೇ ನೀಡಬೇಕು. ಉದಾಹರಣೆಗೆ, ಬೆಳಿಗ್ಗೆ ‘ತಂಡ ಎ’ ಅಭ್ಯಾಸ ಮಾಡಿದ ಪಿಚ್‌ನಲ್ಲಿ ಸಂಜೆ ‘ತಂಡ ಬಿ’ ಅಭ್ಯಾಸ ಮಾಡುವಂತಿಲ್ಲ.
  • ನೆಟ್‌ಗಳ ಹಂಚಿಕೆಗೆ ನಿಷೇಧ: ಒಂದರ ನಂತರ ಒಂದರಂತೆ ತಂಡಗಳು ಅಭ್ಯಾಸ ನಡೆಸುತ್ತಿದ್ದರೂ ಸಹ, ಮೊದಲ ತಂಡ ಬಳಸಿದ ನೆಟ್‌ಗಳನ್ನು ಎರಡನೇ ತಂಡಕ್ಕೆ ನೀಡಲಾಗುವುದಿಲ್ಲ. ಇದು ‘ರೇಂಜ್ ಹಿಟ್ಟಿಂಗ್’ ಪಿಚ್‌ಗಳಿಗೂ ಅನ್ವಯಿಸುತ್ತದೆ.
  • ಅಭ್ಯಾಸ ಪಂದ್ಯಗಳ ಮಿತಿ: ಪ್ರತಿ ತಂಡವು ಗರಿಷ್ಠ 2 ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡಬಹುದು ಮತ್ತು ಅದಕ್ಕಾಗಿ ಮಂಡಳಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
  • ಸಮಯದ ಮಿತಿ: ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು.
  • ಮುಖ್ಯ ಪಿಚ್‌ಗಳ ರಕ್ಷಣೆ: ತಂಡದ ಮೊದಲ ಹೋಮ್ ಮ್ಯಾಚ್‌ಗಿಂತ 4 ದಿನಗಳ ಮೊದಲು ಮುಖ್ಯ ಪಿಚ್ ಅಥವಾ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ತರಬೇತಿ ಪಂದ್ಯಗಳನ್ನು ನಡೆಸುವಂತಿಲ್ಲ. ಈ ಅವಧಿಯಲ್ಲಿ ಹೋಮ್ ತಂಡಕ್ಕೆ ಬೇರೆ ಅಭ್ಯಾಸ ಮೈದಾನದ ಅಗತ್ಯವಿದ್ದರೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅದನ್ನು ಉಚಿತವಾಗಿ ಒದಗಿಸಬೇಕು.
  • ಸಮಯ ಮತ್ತು ಆದ್ಯತೆ: ಅಭ್ಯಾಸದ ಸ್ಲಾಟ್‌ಗಳನ್ನು ಆರಿಸುವಾಗ ಹೋಮ್ ತಂಡಕ್ಕೆ ಮೊದಲ ಆದ್ಯತೆ ಇರುತ್ತದೆ. ಆದರೆ, ಹಿಂದಿನ ದಿನ ಪಂದ್ಯವಿದ್ದಲ್ಲಿ ಅಥವಾ ಪ್ರಯಾಣದ ಒತ್ತಡವಿದ್ದಲ್ಲಿ ಪ್ರವಾಸಿ ತಂಡಗಳ ವಿನಂತಿಯನ್ನೂ ಪರಿಗಣಿಸಲಾಗುತ್ತದೆ.
  • ಜವಾಬ್ದಾರಿಗಳು: ಅಭ್ಯಾಸದ ಸಮಯದಲ್ಲಿ ಊಟ, ವೈದ್ಯಕೀಯ ಸೇವೆ ಮತ್ತು ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಆಯಾ ಹೋಮ್ ತಂಡದ್ದೇ ಆಗಿರುತ್ತದೆ.
  • ರೇಂಟ್ ಹಿಟ್ಟಿಂಗ್​ ಅಭ್ಯಾಸ: ಎಲ್ಲಾ ತಂಡಗಳಿಗೆ ನಿಗದಿತ ಮೈದಾನಗಳಲ್ಲಿ ಎರಡು ನೆಟ್ಸ್ ಅಭ್ಯಾಸ ಮತ್ತು ರೇಂಜ್-ಹಿಟ್ಟಿಂಗ್‌ಗಾಗಿ ಮುಖ್ಯ ಮೈದಾನದಲ್ಲಿ ಅವಕಾಶ ಒದಗಿಸಲು ಬಿಸಿಸಿಐ ಸೂಚಿಸಿದೆ.

ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಅಲಭ್ಯ..!

ಯಾಕೆ ಈ ನಿಯಮ?

  • ಸಮಾನ ಅವಕಾಶ: ಮೊದಲು ಅಭ್ಯಾಸ ಮಾಡುವ ತಂಡಕ್ಕೆ ಪಿಚ್ ಚೆನ್ನಾಗಿರುತ್ತದೆ, ನಂತರ ಬರುವ ತಂಡಕ್ಕೆ ಪಿಚ್ ಹಾಳಾಗಿರುತ್ತದೆ . ಇದನ್ನು ತಡೆಗಟ್ಟಿ ಎರಡೂ ತಂಡಗಳಿಗೆ ಸಮಾನ ಗುಣಮಟ್ಟದ ಪಿಚ್ ಸಿಗಲಿ ಎಂಬುದು ಉದ್ದೇಶ.
  • ಗಾಯದ ಮುನ್ನೆಚ್ಚರಿಕೆ: ಬಳಸಿದ ಪಿಚ್‌ಗಳಲ್ಲಿ ಅಸಮತೋಲಿತ ಬೌನ್ಸ್ ಇರಬಹುದು, ಇದು ಬ್ಯಾಟರ್‌ಗಳಿಗೆ ಗಾಯ ಮಾಡುವ ಸಾಧ್ಯತೆ ಇರುತ್ತದೆ.
  • ನಿಖರ ಸಿದ್ಧತೆ: ಪಂದ್ಯದ ದಿನದ ಪಿಚ್ ಹೇಗಿರುತ್ತದೆ ಎಂಬ ನಿಖರ ಕಲ್ಪನೆ ಸಿಗಲು ತಾಜಾ ಪಿಚ್‌ಗಳ ಅಗತ್ಯವಿರುತ್ತದೆ.

Published On - 2:19 pm, Tue, 17 March 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್
‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ