Nobuyo Oyama: ಡೋರೆಮಾನ್ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ಮಹಿಳೆ ನಿಧನ

‘ಡೋರಮನ್’ ಪಾತ್ರಕ್ಕೆ ತನ್ನ ಕಂಠದಾನದ ಮೂಲಕ ಜೀವ ತುಂಬಿದ್ದ ನಬುಯೊ ಒಯಾಮಾ (90) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಶುಕ್ರವಾರ ತಿಳಿಸಿದ್ದಾರೆ.

Nobuyo Oyama: ಡೋರೆಮಾನ್ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ಮಹಿಳೆ ನಿಧನ
Nobuyo Oyama passes away
Follow us
ಅಕ್ಷತಾ ವರ್ಕಾಡಿ
|

Updated on: Oct 12, 2024 | 12:56 PM

ಡೋರೆಮನ್ ಎಂಬುದು ಕಾಲ್ಪನಿಕ ಪಾತ್ರವಾಗಿದ್ದು, ಇದನ್ನು ಬರಹಗಾರ ಫುಜಿಕೊ ಎಫ್.ಫ್ಯೂಜಿಯೊ ರಚಿಸಿದ್ದಾರೆ. ಈ ಕಾರ್ಟೂನ್ ಪಾತ್ರವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಈ ಡೋರೆಮನ್ ಸೀರಿಸ್ ಅನ್ನು ಬಾಲ್ಯದಲ್ಲಿ ನೋಡದವರಿಲ್ಲ. ಇದೀಗ ಡೋರಮನ್ ಕಾರ್ಟೂನ್ ಶೋನಲ್ಲಿ ಡೋರಮನ್ ಪಾತ್ರಕ್ಕೆ ಡಬ್ ಮಾಡಿದ್ದ ಜಪಾನಿ ಮಹಿಳೆ ನೊಬುಯೊ ಒಯಾಮಾ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

‘ಡೋರಮನ್’ ಪಾತ್ರಕ್ಕೆ ತನ್ನ ಕಂಠದಾನದ ಮೂಲಕ ಜೀವ ತುಂಬಿದ್ದ ನಬುಯೊ ಒಯಾಮಾ (90) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಶುಕ್ರವಾರ ಬಹಿರಂಗ ಪಡಿಸಿದ್ದಾರೆ.

ನೊಬುಯೊ 1979 ರಿಂದ 2005 ರವರೆಗೆ ಡೋರೇಮನ್​ಗೆ ಡಬ್ ಮಾಡಿದ್ದರು. ತನ್ನ ಧ್ವನಿಯಿಂದಲೇ ಡೋರೆಮನ್ ಎಂಬ ಕಾಲ್ಪನಿಕ ಪಾತ್ರಕ್ಕೆ ಜೀವ ತುಂಬಿದ್ದರು. ಡೋರೆಮನ್  ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಈಗಲೂ ಕೂಡ ಪುಟ್ಟ ಪುಟ್ಟ ಮಕ್ಕಳ ಬ್ಯಾಗೂ, ಲಂಚ್ ಬಾಕ್ಸ್​​ ಹಾಗೂ ಬಟ್ಟೆಗಳಲ್ಲಿ ಡೋರೆಮನ್  ಚಿತ್ರಗಳನ್ನು ಕಾಣಬಹುದು.

ಇದನ್ನೂ ಓದಿ: ಉದ್ಯೋಗಿಗಳ ವಿಶ್ರಾಂತಿಗಾಗಿ ಬರೋಬ್ಬರಿ 9 ದಿನಗಳ ರಜೆಯನ್ನು ಘೋಷಿಸಿದ ಇ-ಕಾಮರ್ಸ್‌ ಸೈಟ್‌ ಮೀಶೋ

ಭಾರತದಲ್ಲಿ ಡೋರೆಮಾನ್ ಕಾರ್ಟೂನ್ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದು, ಇದಕ್ಕೆ ಸೋನಾಲ್ ಕೌಶಲ್ ಧ್ವನಿ ನೀಡುತ್ತಿದ್ದಾರೆ. ಇದಲ್ಲದೇ ಸೋನಾಲ್ ಛೋಟಾ ಭೀಮ್, ಮೈಟಿ ರಾಜು ಮತ್ತು ಪವರ್ ಪಫ್ ಗರ್ಲ್ಸ್ ನಂತಹ ಪ್ರಸಿದ್ಧ ಅನಿಮೇಷನ್ ಕಾರ್ಟೂನ್ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ