ಅಬ್ಬಬ್ಬಾ, ಬೆಂಗಳೂರಿನಲ್ಲಿ ಮನೆ ಕೆಲಸದವರಿಗೆ ತಿಂಗಳಿಗೆ 45 ಸಾವಿರ ರೂ. ವೇತನ ನೀಡುವ ರಷ್ಯಾದ ಮಹಿಳೆ

ಬೆಂಗಳೂರಿನಲ್ಲಿ ವಾಸಿಸುವ ರಷ್ಯಾದ ಮಹಿಳೆ ಯೂಲಿಯಾ ಅಸ್ಲಮೋವಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ರಷ್ಯಾ ಹಾಗೂ ಯುರೋಪಿಯನ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಜೀವನ ವೆಚ್ಚ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಮಾಸಿಕ 2.5 ಲಕ್ಷ ರೂ. ಖರ್ಚಿನ ಪಟ್ಟಿಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ಬಾಡಿಗೆ, ಶಾಲೆ, ಆಹಾರ, ಮನೆಯ ಸಹಾಯಕಿಯರ ವೇತನ ಸೇರಿ ಹಲವಾರು ವೆಚ್ಚಗಳನ್ನು ವಿವರಿಸಿದ್ದಾರೆ. ಈ ಪೋಸ್ಟ್ ನೆಟ್ಟಿಗರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅಬ್ಬಬ್ಬಾ, ಬೆಂಗಳೂರಿನಲ್ಲಿ ಮನೆ ಕೆಲಸದವರಿಗೆ ತಿಂಗಳಿಗೆ 45 ಸಾವಿರ ರೂ. ವೇತನ ನೀಡುವ ರಷ್ಯಾದ ಮಹಿಳೆ
ಯೂಲಿಯಾ ಅಸ್ಲಮೋವಾ

Updated on: Oct 14, 2025 | 10:47 AM

ಬೆಂಗಳೂರು, ಅ.14: ಬೆಂಗಳೂರಿನಲ್ಲಿ (Bengaluru) ವಾಸಿಸುವ ರಷ್ಯಾದ ಮಹಿಳೆಯೊಬ್ಬರು ದಿನ ವೆಚ್ಚದ ಬಗ್ಗೆ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರಕ್ಕೂ ಹಾಗೂ ರಷ್ಯಾದ ನಗರದಲ್ಲಿ ಆಗುವ ಖರ್ಚು-ವೆಚ್ಚದ ಬಗ್ಗೆ ವಿವರಿಸಿದ್ದಾರೆ. ಇದೀಗ ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಯೂಲಿಯಾ ಅಸ್ಲಮೋವಾ ಎಂಬ ರಷ್ಯಾನ್​ ಮಹಿಳೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜೀವನದ ಅನುಭವದ ಬಗ್ಗೆ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಯೂಲಿಯಾ ಅಸ್ಲಮೋವಾ ಈ ವಿಡಿಯೋದಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ” ನಾನು 11 ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ, ಇಲ್ಲಿ ಎಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು. ಜತೆಗೆ ನನ್ನ ದೇಶದ ಕರೆನ್ಸಿಯನ್ನು ಭಾರತ ರೂ.ಗೆ ಬದಲಾವಣೆ ಮಾಡಿಕೊಂಡೆ, ಆಗಾ ನನ್ನ ದೇಶದ ಕರೆನ್ಸಿ ತುಂಬಾ ಪ್ರಬಲವಾಗಿತ್ತು” ಎಂದು ಯೂಲಿಯಾ ಅಸ್ಲಮೋವಾ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನ HSR ಲೇಔಟ್​​​​ ಸುತ್ತಮುತ್ತಲಿನ ಎಲ್ಲ ಸೌಲಭ್ಯಗಳು ಇತ್ತು. ಜತೆಗೆ ಆ ನಗರ ನನಗೆ ತುಂಬಾ ಇಷ್ಟವಾಗಿತ್ತು. ಸುಂದರವಾದ 2 BHK ಮನೆ, ಅದಕ್ಕೆ 25 ಸಾವಿರ ರೂ ಬಾಡಿಗೆ, ಇನ್ನು ವಿಮಾನ ನಿಲ್ದಾಣಕ್ಕೆ ಕ್ಯಾಬ್​ ಮಾಡಿಕೊಂಡು ಹೋದ್ರೆ 700 ರೂ. ಈ ನಗರದ ಜೀವನ ವೆಚ್ಚವನ್ನು “ಸ್ಪೇನ್, ಪೋರ್ಚುಗಲ್, ಗ್ರೀಸ್ ಅಥವಾ ಸೈಪ್ರಸ್‌ನಂತಹ ಯುರೋಪಿನ ಹಲವಾರು ಸ್ಥಳಗಳಿಗೆ ಮತ್ತು ನನ್ನ ಸ್ವಂತ ಊರಾದ ಸೇಂಟ್ ಪೀಟರ್ಸ್‌ಬರ್ಗ್, ರಷ್ಯಾಕ್ಕೆ ಸುಲಭವಾಗಿ ಹೋಲಿಸಬಹುದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮೂರು ಜನರ ಕುಟುಂಬವು ಚೆನ್ನಾಗಿ ಬದುಕಲು ಬೇಕೆಂದರೆ ಕಡಿಮೆಯೆಂದರು ₹ 2.5 ಲಕ್ಷ ಬೇಕಾಗುಬಹುದು ಎಂದು ಹೇಳುತ್ತಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ

ಗುರಗಾಂವ್ ಮತ್ತು ಮುಂಬೈಯನ್ನು ಕೂಡ ಬೆಂಗಳೂರಿಗೆ ಹೋಲಿಸಿರುವುದನ್ನು ನಾನು ನೋಡಿದ್ದೇನೆ. ಆದರೆ ನಾನು ಬೆಂಗಳೂರಿನಲ್ಲಿ ದುಡಿಯುತ್ತೇನೆ. ಹಾಗೂ ದುಡಿದ ಹಣವನ್ನು ಖರ್ಚು ಮಾಡುತ್ತೇನೆ. ಬೆಂಗಳೂರಿನ ಜೀವನವನ್ನು ತುಂಬಾ ಸುಖವಾಗಿ ಅನುಭವಿಸುತ್ತಿದ್ದೇನೆ ಎಂದು ಯೂಲಿಯಾ ಅಸ್ಲಮೋವಾ ಹೇಳಿಕೊಂಡಿದ್ದಾರೆ. ನಾನು 2025ರಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ತುಂಬಾ ಅವಕಾಶಗಳು ಇದೆ. ಎಲ್ಲವನ್ನು ಪಡೆಯುವ ಶಕ್ತಿಯನ್ನು ಈ ದೇಶ ನೀಡಿದೆ ಎಂದು ಹೇಳಿದ್ದಾರೆ. ಯೂಲಿಯಾ ಅಸ್ಲಮೋವಾ ತನ್ನ ಖರ್ಚಿನ ಬಗ್ಗೆ ಪಟ್ಟಿಯನ್ನು ಕೂಡ ಇಲ್ಲಿ ಹಂಚಿಕೊಂಡಿದ್ದಾರೆ. ಬಾಡಿಗೆ ₹ 1,25,000, ಶಾಲೆ ₹ 30,000, ಆಹಾರ ಮತ್ತು ಮನೆಯ ವೆಚ್ಚ ₹ 75,000, ಮನೆ ಸಹಾಯಕರಿಗೆ ₹ 45,000, ಆರೋಗ್ಯ ಮತ್ತು ಫಿಟ್‌ನೆಸ್ ₹ 30,000, ಮತ್ತು ಪೆಟ್ರೋಲ್ ₹ 5,000 ಖರ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈಲು ಹತ್ತದ ಹುಡುಗಿ ವಿಮಾನ ಹತ್ತಲು ಸಜ್ಜು; ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ

ಅವರು ಹಂಚಿಕೊಂಡಿರುವ ವಿಡಿಯೋ ಸುಮಾರು 3 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಜತೆಗೆ ಈ ವಿಡಿಯೋಗೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರೂ ಕಮೆಂಟ್​ ಮಾಡಿದ್ದಾರೆ. ಒಬ್ಬ ಬಳಕೆದಾರರು, ಮನೆ ಸಹಾಯ ₹ 45,000? ನೀವು ಹೆಚ್ಚು ಪಾವತಿ ಮಾಡುತ್ತಿದ್ದೀರ ಎಂದು ಕಮೆಂಟ್​​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಾನು 20 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇನೆ. ನೀವು ಖರ್ಚು ಮಾಡಿದ ಅರ್ಧದಷ್ಟು ಖರ್ಚು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Tue, 14 October 25