AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಹತ್ತದ ಹುಡುಗಿ ವಿಮಾನ ಹತ್ತಲು ಸಜ್ಜು; ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ

ಈ ಪುಟ್ಟ ಹುಡುಗಿಯ ಕುಟುಂಬದಲ್ಲಿ ಯಾರಲ್ಲೂ ಸ್ಮಾರ್ಟ್‌ಫೋನ್ ಇಲ್ಲ, ಕಂಪ್ಯೂಟರ್ ಅಂತೂ ಇಲ್ಲವೇ ಇಲ್ಲ. ಬಡತನದಲ್ಲಿ ಬೆಳೆದ ಅದಿತಿ ಪಾರ್ಥೆ ಪುಣೆ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದು, ಇದೀಗ ನಾಸಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾಳೆ. ಸಣ್ಣ ವಯಸ್ಸಿನಲ್ಲಿಯೇ ಈಕೆಯ ಸಾಧನೆಗೆ ಇಡೀ ಗ್ರಾಮವೇ ಹನ್ನೆರಡರ ಪೋರಿಯ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ರೈಲು ಹತ್ತದ ಹುಡುಗಿ ವಿಮಾನ ಹತ್ತಲು ಸಜ್ಜು; ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ
ಅದಿತಿ ಪಾರ್ಥೆImage Credit source: Social Media
ಸಾಯಿನಂದಾ
|

Updated on:Oct 13, 2025 | 6:28 PM

Share

ಬದುಕಿನಲ್ಲಿ ಕೆಲವು ಅವಕಾಶಗಳು ಹೇಳದೇ ಬರುತ್ತದೆ. ಆದರೆ ಅದನ್ನು ಸರಿಯಾಗಿ ಬಳಸುವುದು ತಿಳಿದಿರಬೇಕು. ಹೀಗೆ ಸಿಕ್ಕ ಅವಕಾಶ ಗಳನ್ನು ಬಳಸಿಕೊಂಡು ಇಂದು ಇಡೀ ಗ್ರಾಮವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಪೋರಿ ಈ ಅದಿತಿ ಪಾರ್ಥೆ (Aditi Parthe). ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪುಣೆ ಜಿಲ್ಲಾ ಪರಿಷತ್ (Pune Zilla Parishad) ನಾಸಾ ಪ್ರವಾಸಕ್ಕೆ 25 ವಿದ್ಯಾರ್ಥಿಗಳಲ್ಲಿ 12 ವರ್ಷದ ಬಾಲಕಿ ಅದಿತಿ ಪಾರ್ಥೆ ಆಯ್ಕೆಯಾಗಿದ್ದಾಳೆ.

ಬಡತನದ ನಡುವೆ ಬಾಲಕಿಯ ಸಾಧನೆ

ಮನೆಯಲ್ಲಿ ಕಡುಬಡತನ. ಓದಬೇಕೆಂಬ ಛಲ. ಈ ಎಲ್ಲಾ ಕೊರತೆಗಳನ್ನು ಮೆಟ್ಟಿ ನಿಂತು ಅದಿತಿ ಪಾರ್ಥೆ ಪುಣೆಯ ಭೋರ್ ತಾಲ್ಲೂಕಿನಲ್ಲಿರುವ ನಿಗುಡಘರ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದಾಳೆ. ಈ ಬಾಲಕಿಯ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಪುಣೆಯ ಮಾರುಕಟ್ಟೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಹುಡುಗಿಯ ತಾಯಿ ತನ್ನ ಅಣ್ಣನೊಂದಿಗೆ ತನ್ನ ತಂದೆಯ ಮನೆಯಲ್ಲಿ ನೆಲೆಸಿದ್ದಾರೆ. ಈ ಬಾಲಕಿಯ ಕುಟುಂಬದಲ್ಲಿ ಯಾರಲ್ಲೂ ಸ್ಮಾರ್ಟ್‌ಫೋನ್ ಇಲ್ಲ, ಕಂಪ್ಯೂಟರ್ ಅಂತೂ ಇಲ್ಲವೇ ಇಲ್ಲ. ಬಡತನವನ್ನು ಮೆಟ್ಟಿ ನಿಂತು ಜಿಲ್ಲಾ ಪರಿಷತ್ ಜಾರಿಗೆ ತಂದ ನಾಸಾ ಭೇಟಿ ಉಪಕ್ರಮದಲ್ಲಿ ಆಯ್ಕೆಯಾಗಿದ್ದಾಳೆ.

ನಾಸಾ ಪ್ರವಾಸಕ್ಕೆ ಆಯ್ಕೆಯಾದ ಅದಿತಿ

ಅಂತರ್ ವಿಶ್ವವಿದ್ಯಾನಿಲಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರ ಸಹಯೋಗದೊಂದಿಗೆ, ಆಗಸ್ಟ್‌ನಲ್ಲಿ ಕೊನೆಗೊಂಡ ಮೂರು ಸುತ್ತಿನ ಪ್ರಯೋಗಗಳ ಮೂಲಕ ZP ಶಾಲೆಗಳಿಂದ 6 ಮತ್ತು 7 ನೇ ತರಗತಿಗಳ 75 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಇವರಲ್ಲಿ 50 ವಿದ್ಯಾರ್ಥಿಗಳು ಅಕ್ಟೋಬರ್ 6 ರಂದು ತಿರುವನಂತಪುರಂನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಮೂರು ದಿನಗಳ ಭೇಟಿ ನೀಡಿದ್ದಾರೆ. ಇನ್ನು ಉಳಿದ 25 ವಿದ್ಯಾರ್ಥಿಗಳು ನಾಸಾಗೆ ಹೋಗಲಿದ್ದಾರೆ. ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅದಿತಿ ಶಾಲೆಗೆ ಪ್ರತಿದಿನ ಬೆಳಗ್ಗೆ ಮೂರೂವರೆ ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದು, ಇದುವರೆಗೆ ರೈಲು ಹತ್ತಿದವಳಲ್ಲ. ಆದರೆ ಇದೀಗ ಅದಿತಿ ಈಗ ಮುಂಬೈನಿಂದ ವಿಮಾನ ಹತ್ತಲಿದ್ದು, ಏಳು ಸಾಗರಗಳನ್ನು ದಾಟಿ ಯುಎಸ್ ನಲ್ಲಿರುವ ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾಳೆ.

ಇದನ್ನೂ ಓದಿ
Image
ಕೇರಳದ ಸುಸಜ್ಜಿತ ಹವಾನಿಯಂತ್ರಿತ ಈ ಸರ್ಕಾರಿ ಶಾಲೆ ಉದ್ಘಾಟನೆಗೆ ಸಜ್ಜು
Image
ಕನ್ನಡಾಕ್ಷರವನ್ನು ಜೋಡಿಸಿ ಪಟಪಟನೇ ಓದುತ್ತಿರುವ ಪುಟಾಣಿ
Image
ಉಪಾಯದಿಂದ ಪುಟಾಣಿಯನ್ನು ಶಾಲಾ ಬಸ್‌ ಹತ್ತಿಸಿದ ತಂದೆ
Image
ನರ್ಸರಿ ಸ್ಕೂಲ್ ಫೀಸ್ 2.5 ಲಕ್ಷ ರೂ: ವೈರಲ್‌ ಆಯ್ತು ಪೋಸ್ಟ್

ನಾಸಾ ಪ್ರವಾಸ:ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಪುಣೆ ಜಿಲ್ಲಾ ಪರಿಷತ್ ಜಾರಿಗೆ ತಂದ ಈ ಉಪಕ್ರಮದಡಿಯಲ್ಲಿ, ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿರುವ 25 ವಿದ್ಯಾರ್ಥಿಗಳಿಗೆ ‘ನಾಸಾ’ಗೆ ಹೋಗುವ ಅವಕಾಶ ಸಿಕ್ಕಿತು. 6 ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ 16 ಸಾವಿರ 671 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಈ ಪೈಕಿ ಕೇವಲ 25 ವಿದ್ಯಾರ್ಥಿಗಳು ಆಯ್ಕೆಯಾದರು, ಅವರಲ್ಲಿ ಒಬ್ಬಳು ಈ ಅದಿತಿ. ಮೊದಲ MCQ ಪರೀಕ್ಷೆಯ ಸುತ್ತಿಗೆ 13 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು ಪ್ರತಿ ಬ್ಲಾಕ್‌ನಿಂದ ಅಗ್ರ 10 ಪ್ರತಿಶತದಷ್ಟು ವಿದ್ಯಾರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾದರು, ಅಲ್ಲಿ ಅವರು ಆನ್‌ಲೈನ್ MCQ ಪರೀಕ್ಷೆಯನ್ನು ಎದುರಿಸಬೇಕಾಯಿತು. ಆದರೆ ಶಾಲೆಯಲ್ಲಿ ಕಂಪ್ಯೂಟರ್‌ಗಳು ಇಲ್ಲದ ಕಾರಣ, ಪ್ರಾಂಶುಪಾಲ ಅಶೋಕ್ ಬಂಡಲ್ ತಮ್ಮ ವೈಯಕ್ತಿಕ ಲ್ಯಾಪ್‌ಟಾಪ್ ಬಳಸಿ ಎರಡನೇ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಗೆಗಿನ ಕೆಲವು ಮಾಹಿತಿಯನ್ನು ನೀಡಿದರು. ಐಯುಸಿಎಎಯಲ್ಲಿ ನಡೆದ ಅಂತಿಮ ಸುತ್ತಿನ ವೈಯಕ್ತಿಕ ಸಂದರ್ಶನಗಳಿಗೆ 235 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಹಲವು ಹಂತಗಳ ಬಳಿಕ ಅಂತಿಮವಾಗಿ ಕೆಲವು ಆಯ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ:ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ ಕೇರಳದ ಸುಸಜ್ಜಿತ ಹವಾನಿಯಂತ್ರಿತ ಈ ಸರ್ಕಾರಿ ಶಾಲೆ

ನಾಸಾಗೆ ಭೇಟಿ ನೀಡುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅದಿತಿ ನಾಸಾಗೆ ಭೇಟಿ ನೀಡುವ ವಿದ್ಯಾರ್ಥಿಗಳಲ್ಲಿ ನಾನು ಆಯ್ಕೆಯಾಗಿದ್ದೇನೆ ಎಂದು ಪ್ರಾಂಶುಪಾಲರು ನನ್ನ ಚಿಕ್ಕಮ್ಮನಿಗೆ ಹೇಳಿದಾಗ, ಅವರು ತುಂಬಾ ಸಂತೋಷಪಟ್ಟರು. ಅವರಿಗೆ ಸಂತೋಷದಲ್ಲಿ ಮಾತೇ ಹೊರಡಲಿಲ್ಲ. ನನ್ನ ತಾಯಿಗೂ ತುಂಬಾನೇ ಖುಷಿಯಾಯ್ತು. ನಾನು ಬೆಳಿಗ್ಗೆ 7 ಗಂಟೆಗೆ ಕರೆ ಮಾಡಿ ನಾನು ಅಮೆರಿಕಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದೆ. ನನಗೆ ಆ ದಿನ ಅಮ್ಮನು ಹದಿನೈದು ಬಾರಿ ಕರೆ ಮಾಡಿದರು ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾಳೆ. ಇನ್ನು ನಾಸಾಗೆ ಭೇಟಿ ನೀಡಿದ ಬಳಿಕ, ಅದಿತಿ ಮಹಾನ್ ವಿಜ್ಞಾನಿಗಳನ್ನು ಭೇಟಿಯಾಗಲು ಹಾಗೂ ನಾಸಾ ಬಾಹ್ಯಾಕಾಶ ಸಂಸ್ಥೆಯನ್ನು ನೇರವಾಗಿ ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Mon, 13 October 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್