Viral: ನರ್ಸರಿ ಸ್ಕೂಲ್ ಫೀಸ್ 2.5 ಲಕ್ಷ ರೂ: ಇದು ವಿದ್ಯಾದೇಗುಲವೋ, ವ್ಯಾಪಾರ ಕೇಂದ್ರವೋ?
ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಶಾಲಾ ಶುಲ್ಕವು ಗಗನಕ್ಕೆ ಏರುತ್ತಿದೆ. ಈ ಹಿನ್ನಲೆಯಲ್ಲಿ ಪೋಷಕರು ಆತಂಕಗೊಂಡಿದ್ದಾರೆ. ಕಾಲೇಜ್ ಫೀಸ್‌ಗೆ ಹೋಲಿಸಿದ್ರೆ ಈ ನರ್ಸರಿ ಮಕ್ಕಳ ಶುಲ್ಕವೇ ದುಬಾರಿ ಎನ್ನುವಂತಾಗಿದೆ. ಇದೀಗ ನರ್ಸರಿ ಶಾಲಾ ಶುಲ್ಕದ ಪೋಸ್ಟ್‌ವೊಂದು ವೈರಲ್ ಆಗಿದ್ದು, ಪೋಷಕರು ದುಬಾರಿ ಶುಲ್ಕ ಕಂಡು ದಂಗಾಗಿದ್ದಾರೆ.

ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಸಿಗಲಿ ಎನ್ನುವ ಕಾರಣಕ್ಕೆ ಎಷ್ಟೇ ದುಬಾರಿಯಾದ್ರೂ ಖಾಸಗಿ ಶಾಲೆಗೆ ಸೇರಿರುತ್ತಾರೆ. ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು (education institution) ಯಾವುದನ್ನು ಲೆಕ್ಕಿಸದೇ ಬೇಕಾ ಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಶುಲ್ಕವನ್ನು ವಿಧಿಸಿ ಶುಲ್ಕದ ನೆಪದಲ್ಲಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕಗಳು ಹೆಚ್ಚಾಗುತ್ತಲೇ ಹೋಗುತ್ತಿದೆ. ಇದೀಗ ಇಂತಹದ್ದೇ ಪೋಸ್ಟ್ ವೈರಲ್ ಆಗಿದ್ದು, ಇದರಲ್ಲಿ ನರ್ಸರಿ ಶಾಲಾ ಶುಲ್ಕ (nursery school fees) ನೋಡಿದ್ರೆ ತಲೆ ಗ್ರಿರ್ ಅನ್ನೋದು ಗ್ಯಾರಂಟಿ. ಹೌದು, ಹೈದರಾಬಾದ್‌ನ ನರ್ಸರಿ ಶಾಲೆಯೊಂದು ಮಗುವಿಗೆ ವಾರ್ಷಿಕ ಶುಲ್ಕ 2.5 ಲಕ್ಷ ರೂ ವಿಧಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
@talk2anuradha ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟಿನ ಶೀರ್ಷಿಕೆಯಲ್ಲಿ ನರ್ಸರಿ ಶಾಲಾ ಮಕ್ಕಳ ಶುಲ್ಕದ ಬಗ್ಗೆ ಬರೆಯಲಾಗಿದೆ. 2025-26ರ ಶೈಕ್ಷಣಿಕ ಸಾಲಿನ ನರ್ಸರಿ ಮಕ್ಕಳ ಶಾಲಾ ವಾರ್ಷಿಕ ಶುಲ್ಕ 2.5 ಲಕ್ಷ ರೂಪಾಯಿಯಂತೆ. ಎಬಿಸಿಡಿ ಕಲಿಯಲು ತಿಂಗಳಿಗೆ 21000 ರೂ ಕಟ್ಟಬೇಕು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನಲ್ಲಿ ಶಾಲಾ ಶುಲ್ಕವನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಜಾಹೀರಾತು ಬೋಧನಾ ಶುಲ್ಕ: 47,750 ರೂ, ಪ್ರವೇಶ ಶುಲ್ಕ: 5,000 ರೂ, ಆರಂಭಿಕ ಶುಲ್ಕ: 12,500 ರೂ, ಮರುಪಾವತಿಸಬಹುದಾದ ಠೇವಣಿ: 10,000 ರೂ ಎಂದು ಬರೆದಿರುವುದನ್ನು ಕಾಣಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Class- Nursery Fees – Rs 2,51,000/-
Now, learning ABCD will cost you Rs 21,000 per month.
What are these schools even teaching to justify such a ridiculously high fee? pic.twitter.com/DkWOVC28Qs
— Anuradha Tiwari (@talk2anuradha) July 30, 2025
ಹೀಗಾಗಿ ನರ್ಸರಿ ಮಕ್ಕಳನ್ನು ಸೇರಿರುತ್ತೀರಿಯಾದ್ರೆ ನಾಲ್ಕು ಕಂತುಗಳಲ್ಲಿ ಒಟ್ಟು 2,51,000 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಉಳಿದಂತೆ ಪೂರ್ವ ಪ್ರಾಥಮಿಕ II : 2,72,400 ರೂ, ವರ್ಗಗಳು I ರಿಂದ II : 2,91,460 ರೂ ಹಾಗೂ ವರ್ಗಗಳು III ರಿಂದ V: 3,22,350 ರೂ ಶುಲ್ಕವನ್ನು ವಿವರವಾಗಿ ತಿಳಿಸಲಾಗಿದೆ.
ಇದನ್ನೂ ಓದಿ: Viral: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ಈತ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಜುಲೈ 30 ರಂದು ಶೇರ್ ಮಾಡಲಾದ ಈ ಪೋಸ್ಟ್ 1.9 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಶಿಕ್ಷಣದ ಹೆಸರಿನಲ್ಲಿ ಶಾಲಾ ಆಡಳಿತ ಮಂಡಳಿಗಳು ವ್ಯವಹಾರ ಮಾಡುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯ ಮಕ್ಕಳ ಶಿಕ್ಷಣಕ್ಕೆ ಇದು ದುಬೈಗಿಂತ ಅಗ್ಗವೇ ಅಥವಾ ದುಬಾರಿಯೇ? ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಒಂದು ಕಪ್ ಕಾಫಿಗೆ 800-1000 ರೂ ಏಕೆ ಶುಲ್ಕ ವಿಧಿಸುತ್ತಾರೆ ಎಂದು ನೀವು ಎಂದಾದರೂ ಕೇಳಿದ್ದೀರಾ? ಎಂದು ಕಾಮೆಂಟ್ ಮಾಡಿ ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:58 pm, Fri, 1 August 25








