Video: ನೋಡ ನೋಡುತ್ತಿದ್ದಂತೆ ಮುರಿದು ಬಿದ್ದ 360 ಡಿಗ್ರಿ ರೈಡ್, ಭಯಾನಕ ದೃಶ್ಯ ಇಲ್ಲಿದೆ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಮೈ ನಡುಕ ಉಂಟು ಮಾಡುತ್ತದೆ. ಈಗಾಗಲೇ ಸಾಹಸಮಯ ಕ್ರೀಡೆಯಲ್ಲಿ ತೊಡಗಿಕೊಂಡು ಜೀವನಕ್ಕೆ ಸಂಚಾಕಾರ ತಂದುಕೊಂಡ ಘಟನೆಗಳು ನಡೆದಿವೆ. ಆದರೆ, ಇದೀಗ 360 ಡಿಗ್ರಿ ರೈಡ್ ದಿಢೀರ್ ಮುರಿದು ಬೀಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಈ ಘಟನೆ ನಡೆದದ್ದು ಎಲ್ಲಿ? ಈ ಕುರಿತಾದ ಮಾಹಿತಿ ಇಲ್ಲಿದೆ.

ಸೌದಿ ಅರೇಬಿಯಾ, ಆಗಸ್ಟ್ 01: ಬದುಕಿನಲ್ಲಿ ಯಾವಾಗ ಹೇಗೆ ಕಹಿ ಘಟನೆಗಳು ನಡೆಯುತ್ತದೆ ಎಂದು ಊಹಿಸಲು ಅಸಾಧ್ಯ. ಸಂತೋಷವಾಗಿದ್ದ ಕ್ಷಣಗಳು ದುಃಖಕರವಾಗಿ ಮಾರ್ಪಡಾಗಬಲ್ಲದು. ಇದಕ್ಕೆ ಸಾಕ್ಷಿ ಈ ವಿಡಿಯೋ. ಸೌದಿ ಅರೇಬಿಯಾದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ (Green Mountain park in Saudi Arabia) 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿ ರೈಡ್ (360 Degree Ride) ಮಧ್ಯದ ಕಂಬವೇ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ಘಟನೆಯಲ್ಲಿ ಬೃಹತ್ ಜೋಕಾಲಿಯಲ್ಲಿ ಕುಳಿತಿದ್ದ 23 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರಂತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
@nabilajamal ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿಯ ಮಧ್ಯಭಾಗವು ಎರಡು ತುಂಡುಗಳಾಗಿ ಮುರಿದು ಬೀಳುವುದನ್ನು ನೋಡಬಹುದು. ಇದರಲ್ಲಿ ಕುಳಿತುಕೊಂಡಿದ್ದ ಜನರು ಜೋರಾಗಿ ಕಿರುಚುತ್ತಿದ್ದು, ಮೇಲಿಂದ ಕೆಳಗೆ ಎಸೆಯಲ್ಪಡುತ್ತಿರುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Horrific ride malfunction in Saudi Arabia
A “360-degree” amusement ride broke mid-air at Green Mountain Park in Taif
At least 23 people injured while on board
Visuals show the ride snapping in half pic.twitter.com/xr25xOAcFa
— Nabila Jamal (@nabilajamal_) July 31, 2025
ಈ ಬೃಹತಾಕಾರದ ಜೋಕಾಲಿ ಮುರಿದು ಬಿದ್ದಿದ್ದು, 23 ಜನರು ಗಾಯಗೊಂಡಿದ್ದಾರೆ. ಆದರೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಜೋಕಾಲಿ ಮುರಿದು ಬಿದ್ದ ರಭಸಕ್ಕೆ ಎದುರಿಗೆ ನಿಂತಿದ್ದ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಭದ್ರತಾ ಪಡೆಗಳು ಹಾಗೂ ತುರ್ತು ಪ್ರತಿಕ್ರಿಯೆ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ರೈಡ್‌ನ ಅಸಮರ್ಪಕ ಕಾರ್ಯದ ಕಾರಣದ ಬಗ್ಗೆ ತುರ್ತು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Viral: ಪ್ರಬಲ ಭೂಕಂಪದ ನಡುವೆಯೂ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ವಿಡಿಯೋ ವೈರಲ್
ಜುಲೈ 31 ರಂದು ಶೇರ್ ಮಾಡಲಾದ ಈ ವಿಡಿಯೋ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಒಬ್ಬ ವ್ಯಕ್ತಿಯನ್ನು ಮೇಲಿಂದ ಕೆಳಗೆ ಎಸೆಯಲಾಯಿತು. ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ನಾನು ಈ 360 ಡಿಗ್ರಿ ರೈಡ್ ನಲ್ಲಿ ಎಂದಿಗೂ ಹೋಗುವುದಿಲ್ಲ. ಇನ್ನೆಂದಿಗೂ ಈ ಜೋಕಾಲಿಯನ್ನು ಹತ್ತುವ ಪ್ರಯತ್ನ ಮಾಡಲಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ನಿಜಕ್ಕೂ ಭಯಾನಕವಾಗಿದೆ. ಒಂದು ಕ್ಷಣ ಎದೆ ಝಲ್ ಎನ್ನಿತು ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








