Video: ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗನನ್ನು ಅರೆಸ್ಟ್ ಮಾಡಿದ ಪೊಲೀಸರು, ಕಾರಣ ಇದೇ ನೋಡಿ
ವಿದೇಶಿಗರು ಭಾರತಕ್ಕೆ ಆಗಾಗ ಬರುತ್ತಿರುತ್ತಾರೆ. ಹೀಗೆ ಬಂದವರು ಪ್ರವಾಸಿ ತಾಣಗಳನ್ನು ವೀಕ್ಷಿಸುವುದು, ಆಹಾರ ಸವಿದು ಎಂಜಾಯ್ ಮಾಡುತ್ತಾರೆ. ಆದರೆ ಭಾರತಕ್ಕೆ ಬಂದಿರುವ ಕಂಟೆಂಟ್ ಕ್ರಿಯೇಟರ್ ಜರ್ಮನಿನ ನೋಯೆಲ್ ರಾಬಿನ್ಸನ್ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು ಭಾರತೀಯ ಸಾಂಪ್ರಾದಾಯಿಕ ಉಡುಗೆ ತೊಟ್ಟು ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಈ ವಿದೇಶಿಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 31: ನಾವು ಮಾಡುವ ಸಣ್ಣ ಸಣ್ಣ ಎಡವಟ್ಟುಗಳೇ ನಮ್ಮನ್ನು ಇಕ್ಕಟ್ಟಿನಲ್ಲಿ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡುತ್ತದೆ. ಇಂತಹದ್ದೇ ಪರಿಸ್ಥಿತಿ ಭಾರತಕ್ಕೆ ಬಂದ ಜರ್ಮನ್ ಮೂಲದ ವ್ಯಕ್ತಿಯದ್ದಾಗಿದೆ. ಟಿಕ್ ಟೋಕರ್ ನೋಯೆಲ್ ರಾಬಿನ್ಸನ್ (Neol Robinson) ಅವರು ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಾ ಜನರನ್ನು ಒಟ್ಟು ಸೇರಿಸಿದ್ದಾರೆ. ಈ ಡ್ಯಾನ್ಸ್ ಪ್ರದರ್ಶನದ ವೇಳೆಯೇ ಬೆಂಗಳೂರು ಪೊಲೀಸರು (Bengaluru Police) ವಿದೇಶಿಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ವತಃ ಈ ವಿದೇಶಿಗನೇ ವಿಡಿಯೋ ಹಂಚಿಕೊಂಡು ಈ ಘಟನೆಯ ಬಗ್ಗೆ ವಿವರಿಸಿದ್ದಾರೆ.
neol ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಸಾಂಪ್ರಾದಾಯಿಕ ಉಡುಗೆಯಾದ ಬಿಳಿ ಪಂಚೆ, ಬನಿಯಾನ್ ಹಾಗೂ ಶಾಲು ಧರಿಸಿರುವ ನೋಯೆಲ್ ರಾಬಿನ್ಸನ್ ಬೀದಿ ಬದಿಯಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಈ ವಿದೇಶಿಗನ ನೃತ್ಯ ಪ್ರದರ್ಶನ ನೋಡಲು ಜನರೆಲ್ಲರೂ ಸೇರಿದ್ದಾರೆ. ಜನರು ಸೇರಿರುವುದನ್ನು ಕಂಡ ಬೆಂಗಳೂರಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ವ್ಯಕ್ತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಪೊಲೀಸ್ ವಾಹನದಲ್ಲಿ ಕೂರಿಸುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಯಲ್ಲಿ ಈ ವಿದೇಶಿಗನು ಠಾಣೆಯಿಂದ ಹೊರನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ಈ ಘಟನೆಯ ಬಗ್ಗೆ ವಿವರಿಸಿದ್ದು ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ನಾನು ಡ್ಯಾನ್ಸ್ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ನನ್ನನ್ನು ನೋಡಲು ಜನರು ಜಮಾಯಿಸಿದ್ದರು. ಆಗ ಅಲ್ಲಿಗೆ ಬಂದ ಪೊಲೀಸರು ನನ್ನನ್ನು ಬಂಧಿಸಿದರು. ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರು ಸರಿಸುಮಾರು 15 ನಿಮಿಷಗಳ ಕಾಲ ಅಲ್ಲೇ ಇರಿಸಿಕೊಂಡಿದ್ದರು ಕೊನೆಗೆ ನಾನು ಫೈನ್ ಕಟ್ಟಲು ಹೇಳಿ, ನನ್ನ ಹೋಗಲು ಹೇಳಿದರು ಎಂದು ಈ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಆದರೆ, ಇದೇ ಮೊದಲು ಪೊಲೀಸ್ ಠಾಣೆಗೆ ಕರೆದೊಯ್ದದ್ದದ್ದು. ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎನ್ನುವ ಭಯಯಿತ್ತು. ಅದೃಷ್ಟವಶಾತ್ ಏನು ಆಗಲಿಲ್ಲ. ನಾನು ಸುರಕ್ಷಿತವಾಗಿದ್ದೇನೆ. ಇದು ಪ್ರತಿಯೊಂದು ದೇಶದಲ್ಲಿ ಸಂಭವಿಸುತ್ತದೆ. ಇಂತಹ ಸಣ್ಣ ಅನುಭವವು ಭಾರತದ ಮೇಲಿನ ಪ್ರೀತಿಯನ್ನು ಕಸಿದು ಕೊಳ್ಳುವುದಿಲ್ಲ. ನಾನು ಭಾರತವನ್ನು ಸದಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಪುಷ್ಪಾ 2 ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ ಬೆಂಗ್ಳೂರಿನ ಕಾಲೇಜ್ ಸ್ಟೂಡೆಂಟ್ಸ್
ಈ ವಿಡಿಯೋ 9.6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಕರ್ನಾಟಕ ಪೊಲೀಸರೇ ಒಳ್ಳೆಯ ಕೆಲಸ ಮಾಡಿದ್ದೀರಾ ಎಂದಿದ್ದಾರೆ. ಇನ್ನೊಬ್ಬರು, ದುಡ್ಡಿದರೆ ಮಾತ್ರ ದುನಿಯಾ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಬೆಂಗಳೂರು ಹಾಗೂ ಅಮೆರಿಕದ ಪೊಲೀಸರು ಎಲ್ಲರೊಂದಿಗೆ ಕಠೋರವಾಗಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. ಕೆಲವರು ಈ ವಿಡಿಯೋಗೆ ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








