AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ, ಆಸ್ಟ್ರೇಲಿಯಾ ಸರ್ಕಾರ ಮಹತ್ವದ ನಿರ್ಧಾರ

ಆಸ್ಟ್ರೇಲಿಯಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಹೊಸ ಕಾನೂನು ಘೋಷಣೆ ಮಾಡಲಾಗಿದೆ. ಇನ್ಮುಂದೆ ಆಸ್ಟ್ರೇಲಿಯಾದಲ್ಲಿ 16 ವರ್ಷದ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ರೆ ಕೋಟಿ ಕೋಟಿ ದಂಡವನ್ನು ವಿಧಿಸಲಾಗುವುದು. ಈ ಬಗ್ಗೆ ಸ್ವತಃ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೇ ಎಕ್ಸ್​​ನಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ.

16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ, ಆಸ್ಟ್ರೇಲಿಯಾ ಸರ್ಕಾರ ಮಹತ್ವದ ನಿರ್ಧಾರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jul 30, 2025 | 5:55 PM

Share

ವಿಶ್ವದಲ್ಲೇ ಆಸ್ಟ್ರೇಲಿಯಾ (Australian) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ (social media ban) ಎಂದು ಘೋಷಣೆ ಮಾಡಿದೆ. ಇದರಲ್ಲಿ ಯೂಟ್ಯೂಬ್​​ ಕೂಡ ಸೇರಿಕೊಂಡಿದೆ. ಯೂಟ್ಯೂಬ್ ಸಾಮಾಜಿಕ ಮಾಧ್ಯಮವಲ್ಲ ಎಂದು ಯುಟ್ಯೂಬ್​​​ ಹೇಳಿಕೆಯೊಂದನ್ನು ನೀಡಿತ್ತು. ಆದರೆ ಇದೀಗ ಅದನ್ನು ಕೂಡ ಆಸ್ಟ್ರೇಲಿಯಾ ಬ್ಯಾನ್ ಮಾಡಿದೆ. ಅಲ್ಗಾರಿದಮಿಕ್ ಫೀಡ್‌ಗಳು, ಸಂವಾದಾತ್ಮಕ ವಿಚಾರಗಳನ್ನು, ಕಾಮೆಂಟ್​​ ವಿಭಾಗದಲ್ಲೂ ಯೂಟ್ಯೂಬ್ ತಮ್ಮದೇ ಆದ ಪ್ಲಾಟ್‌ಫಾರ್ಮ್‌ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಇನ್ನು ಮೆಟಾ ಮತ್ತು ಸ್ನ್ಯಾಪ್‌ಚಾಟ್‌ನಂತಹ ತಂತ್ರಜ್ಞಾನ ದೈತ್ಯರ ಟೀಕೆಯ ನಂತರ 16 ವರ್ಷದೊಳಗಿನ ಬಳಕೆದಾರರಿಗೆ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್, ಸ್ನ್ಯಾಪ್‌ಚಾಟ್​​​ನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿತ್ತು. ಇದೀಗ ಯುಟ್ಯೂಬ್​​​ ಬ್ಯಾನ್​​ ಮಾಡಲಾಗಿದೆ.

ಮಕ್ಕಳನ್ನು ಆನ್‌ಲೈನ್‌ನಿಂದ ರಕ್ಷಿಸಲು, ಈ ಅಭ್ಯಾಸದಿಂದ ದೂರವಿರಿಸಲು ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ಆದ್ದರಿಂದ ನಾವು 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸುತ್ತಿದ್ದೇವೆ. ಈ ಸೋಶಿಯಲ್​​ ಮೀಡಿಯಾದ ವೇದಿಕೆಯ ಮೂಲಕ ತಮ್ಮದೇ ಆಗಿರುವ ಕೆಟ್ಟ ಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿಕೆ ನೀಡಿದ್ದಾರೆ. ಇನ್ನು ನಿರ್ಧಾರ ತೆಗೆದುಕೊಳ್ಳುವ ಮೊದಲು ಕೆಲವೊಂದು ವಿಚಾರಗಳನ್ನು ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರಸ್ತಾಪಿಸಿದ್ದಾರೆ. ಈ ಸಾಮಾಜಿಕ ಜಾಲತಾಣದ ಅಭ್ಯಾಸದಿಂದ ಮೂವರು ಯುವ ಹದಿಹರೆಯದವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಮಹಿಳೆಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿ, ಕಾರಣ ಇದೆ ನೋಡಿ
Image
ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
Image
ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು
Image
ಮದುವೆಯಾದ 18 ತಿಂಗಳಿಗೆ ಡಿವೋರ್ಸ್, 18 ಕೋಟಿ ರೂ ಜೀವನಾಂಶ ಬೇಕು ಎಂದ ಪತ್ನಿ

ಪ್ರಧಾನಿ ಆಂಥೋನಿ ಅಲ್ಬನೀಸ್ ಎಕ್​ಸ್​​​ ಪೋಸ್ಟ್​:

ಇನ್ನು ಈ ಕಾನೂನನ್ನು ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರುವಂತೆ ಆದೇಶವನ್ನು ನೀಡಿದ್ದಾರೆ. ತಂತ್ರಜ್ಞಾನ ಕಂಪನಿಗಳು ಅಪ್ರಾಪ್ತ ವಯಸ್ಕ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು, ಹೊಸ ಖಾತೆಗಳನ್ನು ರಚಿಸುವುದನ್ನು ತಡೆಯುವುದು ಮತ್ತು ಯಾವುದೇ ಪರಿಹಾರೋಪಾಯಗಳನ್ನು ಸರಿಪಡಿಸುವುದು ಈ ತಕ್ಷಣದಿಂದಲೇ ಮಾಡಬೇಕು. ಒಂದು ವೇಳೆ ಇದನ್ನು ಮಾಡಿಲ್ಲ ಎಂದರೆ 50 ಮಿಲಿಯನ್ (₹4,37,11,30,000)ದಂಡವನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ಹದಿಹರೆಯದವರು ಇನ್ನೂ YouTube ವಿಷಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ, ಆದರೆ ಖಾತೆಯಿಲ್ಲದೆ ಅವರು ಸಂವಹನ ನಡೆಸಲು, ಕಾಮೆಂಟ್ ಮಾಡಲು ಅಥವಾ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಗೇಮಿಂಗ್, ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳು, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ವಿಷಯಗಳು ಕಡಿಮೆ ಸಾಮಾಜಿಕ ಮಾಧ್ಯಮ ಹಾನಿಗಳನ್ನು ಉಂಟು ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಇದಕ್ಕೆ ಮಾತ್ರ  ಶಾಸನದಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ಈತ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಜಾಗತಿಕವಾಗಿ ಈ ನಿರ್ಧಾರ ಜನಪ್ರಿಯತೆಯನ್ನು ಗಳಿಸುತ್ತಿದೆ. ನಾರ್ವೆ ಈಗಾಗಲೇ ಇದೇ ರೀತಿಯ ನಿರ್ಬಂಧವನ್ನು ಘೋಷಿಸಿದೆ ಮತ್ತು ಯುಕೆ ಕೂಡ ಇದನ್ನು ಅನುಸರಿಸಲು ಮುಂದಾಗಿದೆ. ಇನ್ನು ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಹಂಚಿಕೊಂಡಿರುವ ಎಕ್ಸ್​​​​​​ ಪೋಸ್ಟ್​​ಗೆ ಅನೇಕರು ಕಾಮೆಂಟ್​​ ಮಾಡಿದ್ದಾರೆ. ಇದನ್ನು ಪೋಷಕರು ಕೂಡ ಮಾಡಬೇಕು. ಇದು ಎಲ್ಲರ ಕರ್ತವ್ಯ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಇದು ಒಂದು ಹುಚ್ಚತನ, ಮಕ್ಕಳ ಸ್ನೇಹಿ ವೇದಿಕೆಯನ್ನು ಹೇಗೆ ನಿಷೇಧಿಸಲಾಗುತ್ತಿದೆ? ಎಂದು ಅಕ್ರೋಶದಲ್ಲಿ ಕೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ