AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇಲ್ಲಿನ ಜನರು ವಾರಕ್ಕೊಮ್ಮೆಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ

ಒತ್ತಡ ಯಾರಿಗೆ ಇಲ್ಲ ಹೇಳಿ, ಕೆಲವರಿಗೆ ಆಫೀಸ್ ಕೆಲಸದ ಒತ್ತಡ ಆದ್ರೆ, ಇನ್ನು ಕೆಲವರಿಗೆ ಮನೆ ಒತ್ತಡ. ಈ ಒತ್ತಡಕ್ಕೆ ಬ್ರೇಕ್ ಹಾಕಲು ಕೆಲವರು ಇಷ್ಟದ ಕೆಲಸವೋ, ಇಲ್ಲವಾದ್ರೆ ಇಷ್ಟದ ಹಾಡು ಕೇಳಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ತಾರೆ. ಆದರೆ ಇಲ್ಲಿನ ಜನರ ಒತ್ತಡ ಕಡಿಮೆ ಮಾಡಲು ಏನು ಮಾಡ್ತಾರೆ ಗೊತ್ತಾ? ಈ ವಿಡಿಯೋ ನೋಡಿದ ಮೇಲೆ ಇಂತಹ ಜನರು ಇರ್ತಾರಾ ಎಂದೆನಿಸಿದ್ರೆ ತಪ್ಪೇನಿಲ್ಲ. ಹಾಗಾದ್ರೆ ಈ ಸ್ಟೋರಿ ಓದಿ.

Video: ಇಲ್ಲಿನ ಜನರು ವಾರಕ್ಕೊಮ್ಮೆಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Aug 01, 2025 | 5:26 PM

Share

ಅಮೆರಿಕ, ಆಗಸ್ಟ್‌ 01: ಒತ್ತಡ (stress) ಈ ಪದ ಕೇಳಿದ್ರೆ ಸಾಕು, ಎಲ್ಲರೂ ಎಷ್ಟು ಆರಾಮಾಗಿದ್ದಾರೆ, ನನ್ನ ಮಾತ್ರ ಈ  ಸ್ಟ್ರೆಸ್ ಯಾಕೆ ಹೀಗೆ ಅಂದುಕೊಳ್ಳುವವರೇ ಹೆಚ್ಚು. ಆದರೆ ಈ ರೀತಿ ಮಾನಸಿಕ ಒತ್ತಡದಿಂದ ಮುಕ್ತರಾಗಲು ಒಬ್ಬರೊಬ್ಬರು ಒಂದೊಂದು ದಾರಿ ಕಂಡುಕೊಳ್ಳುತ್ತಾರೆ. ಕೆಲವರು ತಮ್ಮ ಆತ್ಮೀಯರ ಜೊತೆಗೆ ಮಾತನಾಡಿ ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ (America) ಜನರು ತಮ್ಮ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುವ ವಿಧಾನವೇ ಭಿನ್ನ. ಪ್ರಶಾಂತವಾದ ವಾತಾವರಣದ ನಡುವೆ ಎಲ್ಲರೂ ಸೇರಿ, ಜೋರಾಗಿ ಕಿರುಚುವ ಮೂಲಕ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುತ್ತಾರಂತೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

@FoxNews ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಅಮೆರಿಕದ ಚಿಕಾಗೋದ ಜನರು ಪ್ರತಿ ಭಾನುವಾರ ಸಂಜೆಯ ವೇಳೆ ಮಿಚಿಗನ್ ಸರೋವರದಲ್ಲಿ ಸೇರಿಕೊಂಡು, ಜೊತೆಯಾಗಿ ಕಿರುಚುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಮೆರಿಕದ ಚಿಕಾಗೋದ ಜನರು ಮಿಚಿಗನ್ ಸರೋವರದ ಬಳಿ ಸೇರಿರುವುದನ್ನು ಕಾಣಬಹುದು. ಸಾಲಾಗಿ ನಿಂತುಕೊಂಡು ಜೋರಾಗಿ ಕಿರುಚುವ ಮೂಲಕ ತಮ್ಮ ಸ್ಟ್ರೆಸ್‌ನ್ನು ಹೊರಹಾಕುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಫೋನ್​ನಲ್ಲಿ ಹರಟೆ ಹೊಡೆಯುತ್ತಾ ಜನರ ಸತಾಯಿಸಿದ ಕ್ಲರ್ಕ್: ವಿಡಿಯೋ ವೈರಲ್
Image
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
Image
ಪ್ರಬಲ ಭೂಕಂಪದ ನಡುವೆಯೂ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
Image
ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗ ಅರೆಸ್ಟ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ವಿದೇಶದಲ್ಲಿ ಲಕ್ಷ ಲಕ್ಷ ದುಡಿಯುತ್ತಿದ್ದ ದಂಪತಿ ನೆಮ್ಮದಿಗಾಗಿ ಸಿಂಗಾಪುರ ತೊರೆದು ಭಾರತಕ್ಕೆ ಬಂದ್ರು

ಜುಲೈ 31 ರಂದು ಶೇರ್ ಮಾಡಲಾದ ಈ ವಿಡಿಯೋ 10.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು ಯಾರಾದರೂ ಅವರನ್ನು ಆ ನೀರಿಗೆ ತಳ್ಳಲು ಸಾಧ್ಯವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, 70 ದಶಕದಲ್ಲಿ ಜನರು ಇದನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಒತ್ತಡ ಕಡಿಮೆ ಮಾಡಲು ಇದು ಉತ್ತಮ ಮಾರ್ಗ, ಕೆಲವೊಮ್ಮೆ ನಾನು ಕೂಡ ಹೀಗೆ ಮಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Fri, 1 August 25