ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ ಕೇರಳದ ಸುಸಜ್ಜಿತ ಹವಾನಿಯಂತ್ರಿತ ಈ ಸರ್ಕಾರಿ ಶಾಲೆ
ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಇದಕ್ಕೆ ಉದಾಹರಣೆಯಂತೆ ಕೇರಳದ ಈ ಶಾಲೆ. ಇದು ಸಂರ್ಪೂಣ ಹವಾನಿಯಂತ್ರಿತವಾಗಿದೆ. ಕೇರಳದ ಮುತ್ತಿಪ್ಪಾಡಿಯಲ್ಲಿ ಆಧುನಿಕ ಹೈಟೆಕ್ ಶಾಲೆಯೂ ನಿರ್ಮಾಣಗೊಂಡಿದ್ದು, ಅಕ್ಟೋಬರ್ 19 ರಂದು ಉದ್ಘಾಟನೆ ನಡೆಯಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇರಳ, ಅಕ್ಟೋಬರ್ 13: ಇಂದಿನ ಪೋಷಕರು ತಮ್ಮ ಮಕ್ಕಳನ್ನು ಎಷ್ಟೇ ಕಷ್ಟ ಇರಲಿ ಖಾಸಗಿ ಶಾಲೆಗೆ ಸೇರಿಸುತ್ತಾರೆ, ಸರ್ಕಾರಿ ಶಾಲೆಗೆ ಸೇರಿಸಲು ಮನಸ್ಸು ಮಾಡುವುದು ಕಡಿಮೆಯೇ. ಆದರೆ ಕೆಲ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲ ಎನ್ನುವಂತಿದೆ. ಕೇರಳದ ಮಲಪ್ಪುರಂನ ಮೇಲ್ಮುರಿ ಮುತ್ತಿಪ್ಪಾಡಿ ಸರ್ಕಾರಿ ಎಲ್‌ಪಿ ಶಾಲೆಯೂ (Melmuri Muttipadi Govt LP School) ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಸರಿಸುಮಾರು 100 ವರ್ಷ ಹಳೆಯದಾದ ಈ ಕಟ್ಟಡವು ತುಂಬಾ ಶಿಥಿಲಾವಸ್ಥೆಯಲ್ಲಿತ್ತು. ತರುವಾಯ, ಶಿಕ್ಷಣ ಇಲಾಖೆ ಈ ಶಾಲೆಗೆ ಪ್ರವೇಶ ಅನುಮತಿ ನೀಡಲಿಲ್ಲ. ಆದರೆ ಇದೀಗ ಆಧುನಿಕ ಹೈಟೆಕ್ ಶಾಲೆಯಾಗಿ (modern hi-tech school) ನಿರ್ಮಾಣಗೊಂಡಿದೆ.
ಅಕ್ಟೋಬರ್ 19 ಉದ್ಘಾಟನೆಗೆ ಸಜ್ಜಾದ ಸರ್ಕಾರಿ ಶಾಲೆ
ಮುತ್ತಿಪಾಡಿಯಲ್ಲಿ ಆಧುನಿಕ ಹೈಟೆಕ್ ಶಾಲೆಯ ನಿರ್ಮಾಣ ಪೂರ್ಣಗೊಂಡಿದೆ. ಅಕ್ಟೋಬರ್ 19 ರಂದು ಉದ್ಘಾಟನೆ ನಡೆಯಲಿದ್ದು, ಸಂಸದ ಇ ಟಿ ಮುಹಮ್ಮದ್ ಬಶೀರ್ ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಶಾಲೆಯಲ್ಲಿ ಎಂಟು ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್, ಹೆಚ್ ಎಂ ಕಚೇರಿ ಮತ್ತು ಗ್ರಂಥಾಲಯವನ್ನು ಒಳಗೊಂಡಿದ್ದು, ಇಡೀ ಶಾಲೆಯನ್ನು ಹವಾನಿಯಂತ್ರಣಗೊಳಿಸಲಾಗಿದೆ. ನೆಲ ಮಹಡಿ ಸುಮಾರು 10,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರ ಜೊತೆಗೆ ಎರಡು ಮಹಡಿಗಳಲ್ಲಿ ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳನ್ನು ಜೋಡಿಸಲಾಗಿದೆ.
ಇದನ್ನೂ ಓದಿ: Viral: ನರ್ಸರಿ ಸ್ಕೂಲ್ ಫೀಸ್ 2.5 ಲಕ್ಷ ರೂ: ಇದು ವಿದ್ಯಾದೇಗುಲವೋ, ವ್ಯಾಪಾರ ಕೇಂದ್ರವೋ?
ಏನೆಲ್ಲಾ ವಿಶೇಷತೆಗಳಿವೆ?
ಶಾಲೆಯ ಬೆಂಚುಗಳು ಮತ್ತು ಮೇಜುಗಳು ಸಹ ವಿಶೇಷವಾಗಿದ್ದು, ಸಾಮಾನ್ಯ ಬೆಂಚುಗಳ ಬದಲಿಗೆ, ಆಧುನಿಕ FRP ಬೆಂಚುಗಳು ಮತ್ತು ಮೇಜುಗಳಿವೆ. ಇದಲ್ಲದೆ, ಎಲ್ಲಾ ತರಗತಿಗಳು ಡಿಜಿಟಲ್ ಪರದೆಗಳು, ಪ್ರತಿ ಮಹಡಿಯಲ್ಲಿ ಶುದ್ಧೀಕರಿಸಿದ ನೀರಿನ ಕಿಯೋಸ್ಕ್‌ಗಳನ್ನು ಒಳಗೊಂಡಿದೆ. ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಸಂಯೋಜಿತ ಧ್ವನಿ ವ್ಯವಸ್ಥೆ. ಇನ್ನು, ತರಗತಿ ಕೋಣೆಗಳಲ್ಲಿ ಪ್ರತ್ಯೇಕ ಗ್ರಂಥಾಲಯಗಳು ಮತ್ತು ಮಕ್ಕಳಿಗಾಗಿ ಪಾದರಕ್ಷೆಗಳನ್ನು ಇಡಲು ವಿಶೇಷ ಶೂ ರ್ಯಾಕ್ ಗಳಿವೆ. ಪುರಸಭೆಯು 5 ಕೋಟಿ ರೂ.ಗಳನ್ನು ಖರ್ಚು ನೀಡಿದೆ. ಶಾಸಕ ಪಿ. ಉಬೈದುಲ್ಲಾ ಅವರ ಆಸ್ತಿ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ.ಗಳನ್ನು ದೇಣಿಗೆಯನ್ನು ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Mon, 13 October 25








