AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಈ ಅಪ್ಪ ಎಷ್ಟು ಖತರ್ನಾಕ್ ನೋಡಿ; ಉಪಾಯದಿಂದ ಪುಟಾಣಿಯನ್ನು ಶಾಲಾ ಬಸ್‌ ಹತ್ತಿಸಿದ ತಂದೆ

ಬೆಳಗ್ಗೆ ಮಕ್ಕಳನ್ನು ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳುಹಿಸುವಷ್ಟರಲ್ಲಿ ಹೆತ್ತವರಿಗೆ ಸಾಕಾಗಿ ಹೋಗಿರುತ್ತದೆ. ಆದರೆ ಈ ವಿಡಿಯೋ ನೋಡಿದ ಮೇಲಂತೂ ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತರೆ ಈ ರೀತಿ ಮಾಡಿ ನೀವು ಮಾಡಬಹುದು. ತಂದೆಯೊಬ್ಬ ಉಪಾಯ ಮಾಡಿ ತನ್ನ ಮುದ್ದಿನ ಮಗನನ್ನು ಶಾಲಾ ಬಸ್ ಹತ್ತಿಸಿದ್ದಾನೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಅಪ್ಪನ ಬುದ್ಧಿವಂತಿಕೆ ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ಈ ಅಪ್ಪ ಎಷ್ಟು ಖತರ್ನಾಕ್ ನೋಡಿ; ಉಪಾಯದಿಂದ ಪುಟಾಣಿಯನ್ನು ಶಾಲಾ ಬಸ್‌ ಹತ್ತಿಸಿದ ತಂದೆ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 04, 2025 | 3:36 PM

Share

ಈ ಮಕ್ಕಳಿಗೆ ಹೋಮ್ ವರ್ಕ್ (Homework) ಮಾಡಿಸುವುದು, ಬೆಳಗ್ಗೆ ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳುಹಿಸುವುದು ಅಮ್ಮಂದಿರ ಕಷ್ಟದ ಕೆಲಸ. ಈ ಪುಟಾಣಿಗಳು ಶಾಲೆಗೆ ಹೋಗಲ್ಲ ಎಂದು ಬೆಳ್ಳಗೆ ಅಳುತ್ತಾ ಕುಳಿತುಕೊಂಡರೆ ಹೆತ್ತವರ ಕಥೆ ಮುಗಿದೇ ಹೋಯ್ತು. ಅಮ್ಮಂದಿರಂತೂ ಸಮಾಧಾನ ಪಡಿಸಿ, ಟಿಫನ್ ಬಾಕ್ಸ್ ಗೆ ಫೇವರಿಟ್ ತಿಂಡಿಯನ್ನೇ ಮಾಡಿ ಶಾಲೆಗೆ ಕಳಿಸುತ್ತಾರೆ. ಆದರೆ ಇಲ್ಲೊಬ್ಬ ತಂದೆ (father) ಮಾತ್ರ ತಮ್ಮ ಮಗನನ್ನು ಶಾಲೆಗೆ ಕಳುಹಿಸಿದ ರೀತಿ ಮಾತ್ರ ವಿಭಿನ್ನ. ಅದೇಗೋ ಉಪಾಯ ಮಾಡಿ ಮಗನನ್ನು ಶಾಲಾ ಬಸ್ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ.

internetgoldcomments ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಅಪ್ಪ ಹಾಗೂ ಮಗ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವುದನ್ನು ನೀವು ನೋಡಬಹುದು. ಆದರೆ ತಂದೆಯೂ ತನ್ನ ಮುದ್ದಿನ ಮಗನನ್ನು ಶಾಲೆಗೆ ಕಳುಹಿಸಲು ಉಪಾಯದಿಂದ ಮಾಡಿದ ಪ್ಲ್ಯಾನ್ ಇದಾಗಿದೆ. ಪ್ರಾರಂಭದಲ್ಲಿ ತಂದೆಯು ಪಾದಚಾರಿ ಮಾರ್ಗದಲ್ಲಿ ಸುಮ್ಮನೆ ನಡೆದುಕೊಂಡು ಹೋಗಿದ್ದು, ಮಗನು ತನ್ನ ಅಪ್ಪನನ್ನು ಹಿಂಬಾಲಿಸಿಕೊಂಡು ಹೋಗುವುದನ್ನು ಕಾಣಬಹುದು.

ಇದನ್ನೂ ಓದಿ
Image
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
Image
ಅಪ್ಪನ ವರ್ಕ್ ಫ್ರಮ್ ಹೋಮ್ ಸ್ಥಿತಿಗತಿಯನ್ನು ಅನುಕರಣೆ ಮಾಡಿದ ಪುಟಾಣಿ
Image
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
Image
ಚೋಟ ಮಾಸ್ಕ್ ಮ್ಯಾನ್, ಪತ್ತೆಯಾಗದ ಹೊಸ ತಲೆಬುರುಡೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆದರೆ ಕೆಲವು ಕೆಲವು ಕ್ಷಣಗಳಲ್ಲಿ ತಂದೆ ದಾರಿಯನ್ನು ಬದಲಾಯಿಸುತ್ತಾ ರಸ್ತೆಯ ಕಡೆಗೆ ಹೋಗಿದ್ದು, ಮಗನು ತಂದೆಯ ಹಿಂದೆಯೇ ಹೋಗಿದ್ದಾನೆ. ಆ ವೇಳೆಯೇ ಶಾಲಾ ಬಸ್ ಬಂದಿದ್ದು, ತಕ್ಷಣವೇ ತನ್ನ ಮಗನನ್ನು ಬಸ್ಸಿನೊಳಗೆ ಕೂರಿಸಿದ್ದಾನೆ. ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳುವುದರಲ್ಲಿ ಪುಟಾಣಿ ಶಾಲಾ ಬಸ್ ನಲ್ಲಿ ಕುಳಿತಾಗಿದೆ.

ಇದನ್ನೂ ಓದಿ:Video: ರಾಯಲ್ ಟ್ರೀಟ್ಮೆಂಟ್ ಅಂದ್ರೆ ಇದೆ ಇರ್ಬೇಕು; ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ಈ ವಿಡಿಯೋ ಸದ್ಯಕ್ಕೆ ವೈರಲ್ ಆಗುತ್ತಿದ್ದಂತೆ ಇದುವರೆಗೆ 3.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಇಂತಹ ಐಡಿಯಾಗಳು ಖತರ್ನಾಕ್ ಅಪ್ಪಂದಿರಿಗೆ ಮಾತ್ರ ಹೊಳೆಯೋದು ಎಂದಿದ್ದಾರೆ. ಇನ್ನೊಬ್ಬರು, ನಾವೆಲ್ಲಾ ಅಪ್ಪಂದಿರಿಗೆ ಭಯ ಪಡುತ್ತಿದ್ದೆವು, ಆದರೆ ಇಗ ಕಾಲ ಬದಲಾಗಿದೆ. ಅಪ್ಪ ಹಾಗೂ ಮಕ್ಕಳು ಸ್ನೇಹಿತರಂತೆ ಇರುವುದನ್ನು ಕಾಣಬಹುದು ಎಂದು ಹೇಳಿದ್ದಾರೆ. ಅಯ್ಯೋ ದೇವ್ರೇ, ಇದನ್ನೂ ಮಾತ್ರ ಊಹಿಸಿರಲಿಲ್ಲ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ