ಟ್ರಾಫಿಕ್ ಜಾಮ್ನಿಂದ ಪಾರಾಗಲು ತಲೆ ಮೇಲೆ ಸ್ಕೂಟರ್ ಹೊತ್ತು ನಡೆದ ಯುವಕ!
ಗುರುಗ್ರಾಮದಲ್ಲಿ ಇತ್ತೀಚೆಗೆ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದು, ಮಳೆ ಬಂದರಂತೂ 10-20 ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ರಾತ್ರಿ ವೇಳೆ ಆಫೀಸಿನಿಂದ ಮನೆಗೆ ಹೋಗುವಾಗ ಇದೇ ರೀತಿಯ ಟ್ರಾಫಿಕ್ ಜಾಮ್ನಿಂದ ಬೇಸತ್ತ ಯುವಕನೊಬ್ಬ ತನ್ನ ಸ್ಕೂಟರನ್ನೇ ತಲೆ ಮೇಲೆ ಹೊತ್ತು ಕಾರುಗಳ ನಡುವೆ ದಾಟುತ್ತಾ ಟ್ರಾಫಿಕ್‌ನಲ್ಲಿ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಗುರುಗ್ರಾಮ, ಸೆಪ್ಟೆಂಬರ್ 4: ನಿರಂತರ ಮಳೆಯ ನಡುವೆ ಗುರುಗ್ರಾಮದ (Gurugram Traffic) ಜನದಟ್ಟಣೆಯಿಂದ ತುಂಬಿದ ರಸ್ತೆಗಳಲ್ಲಿ ಸಂಚರಿಸುವಾಗ ಟ್ರಾಫಿಕ್ ಜಾಮ್ನಿಂದ ಯುವಕನೊಬ್ಬ ಬೇಸತ್ತಿದ್ದಾನೆ. ಇದರಿಂದ ಆತ ಇನ್ನು ಕಾಯಲಾರೆ ಎಂಬಂತೆ ತನ್ನ ಸ್ಕೂಟರ್ ಅನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚರಿಸುವುದು ಕಷ್ಟವಾಗಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. 7 ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ಉಂಟಾಗಿತ್ತು.
ಟ್ರಾಫಿಕ್ ಜಾಮ್ ಅನ್ನು ತಪ್ಪಿಸುವ ಪ್ರಯತ್ನದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬನ ಸಹಾಯದಿಂದ, ಸ್ಕೂಟರ್ ಅನ್ನು ತಲೆಯ ಮೇಲೆ ಎತ್ತಿ ಕಾರು, ಬೈಕ್ಗಳ ನಡುವೆ ಜಾಗ ಮಾಡಿಕೊಂಡು ಮುಂದೆ ಹೋಗಿದ್ದಾನೆ. 12 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಇಬ್ಬರೂ ಎಚ್ಚರಿಕೆಯಿಂದ ಸ್ಕೂಟರ್ ಅನ್ನು ತಲೆಯ ಮೇಲೆ ಎತ್ತಿ ವಾಹನಗಳ ನಡುವೆ ಚಲಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಈ ವೀಡಿಯೊವನ್ನು “gurgaon_locals” ಪುಟವು Instagramನಲ್ಲಿ ಪೋಸ್ಟ್ ಮಾಡಿದೆ. ಈ ಘಟನೆ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
When traffic drowns in chaos, heroes rise in the most unexpected ways. In Gurugram, even Baahubali lifts scooters to conquer the flood pic.twitter.com/iMjSsC03cT
— Rajneeti Tadka 🌶️ (@RajneetiTadka) September 4, 2025
ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಪ್ರವಾಹದಿಂದ ಟ್ರಾಫಿಕ್ ಜಾಮ್, ಸಂಚಾರ ಅಸ್ತವ್ಯಸ್ತ
ಈ ವೀಡಿಯೊ ನೆಟಿಜನ್‌ಗಳಿಂದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬಳಕೆದಾರರಲ್ಲಿ ಒಬ್ಬರು, “ಪ್ರತಿದಿನ ಸ್ಕೂಟಿ ನನ್ನನ್ನು ಮನೆಗೆ ಒಯ್ಯುತ್ತದೆ, ಇಂದು ನಾನು ಅದನ್ನು ಟ್ರಾಫಿಕ್‌ನಲ್ಲಿ ಸಿಲುಕಿಸಲು ಬಿಡುವುದಿಲ್ಲ. ಇಂದು ನಾನು ಸ್ಕೂಟಿಯನ್ನು ಮನೆಗೆ ಒಯ್ಯುತ್ತೇನೆ” ಎಂದು ಆ ಯುವಕನಿಗೆ ಶಹಬ್ಬಾಸ್ ಹೇಳಿದ್ದಾರೆ. ಇನ್ನೊಬ್ಬರು ಈ ರೀತಿ ಟ್ರಾಫಿಕ್‌ನಲ್ಲಿ ಸಿಲುಕಿದ ವಾಹನವನ್ನು ಹೊರತರುವ ಹೊಸ ಬಿಸಿನೆಸ್ ಆರಂಭಿಸಬಹುದು ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




