ತಂತ್ರಜ್ಞಾನ (Technology) ಎಷ್ಟೇ ಮುಂದುವರೆದರೂ ಇನ್ನೂ ಸ್ಪಷ್ಟ ಉತ್ತರ ಕಂಡುಕೊಳ್ಳಲು ಸಾಧ್ಯವಾಗದ ವಿಚಾರವೆಂದರೆ ಮನುಷ್ಯನ ಸಾವು (Death). ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆ ಸಾವು ಹೇಗೆ ಸಂಭವಿಸುತ್ತದೆ. ಸಾಯುವ ಮುನ್ನ ಮಾನವ ಅನುಭವಿಸುವ ಅನುಭವಗಳೇನು ಇದ್ಯಾವ ಪ್ರಶ್ನೆಗೂ ಯಾವ ವಿಜ್ಞಾನಿಗಳೂ ಕೂಡ ಇನ್ನುವರೆಗೆ ಸರಿಯಾದ ಉತ್ತರ ಕಂಡುಕೊಂಡಿಲ್ಲ. ಇದೀಗ ವಿಜ್ಞಾನಿಗಳ ತಂಡವೊಂದು ಸಾಯುವ ವೇಳೆಯಲ್ಲಿ ಮನುಷ್ಯನ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ, ಯಾವ ರೀತಿಯ ಅನುಭವವನ್ನು ಆತ ಪಡೆಯುತ್ತಾನೆ ಎನ್ನುವುದನ್ನು ಯಶಸ್ವಿಯಾಗಿ ಪತ್ತೆ ಮಾಡಿದೆ. ಈ ಕುರಿತು ಡೈಲಿ ಮೇಲ್ (Daily Mail) ವರದಿ ಮಾಡಿದೆ.
Brain activity of dying man suggests our lives really do flash before our eyes as we die
Full story: https://t.co/ovy5rSZ49g pic.twitter.com/hEvP8Qvk5M
— Daily Mail Online (@MailOnline) February 23, 2022
ವಿಜ್ಞಾನಿಗಳು ಅಪಸ್ಮಾರ ಹೊಂದಿದ 87 ವರ್ಷದ ವ್ಯಕ್ತಿಯ ಮೆದುಳನ್ನು ಎಲೆಕ್ಟ್ರೋಎನ್ಸೆಫಾಲೋಗ್ರಫಿ ಮೂಲಕ ಅಧ್ಯಯನ ನಡೆಸುತ್ತಿದ್ದ ವೇಳೆ ವ್ಯಕ್ತಿ ಹೃದಾಯಾಘಾತದಿಂದ ಸಾವನ್ನಪ್ಪಿದ್ದು, ಈ ವೇಳೆ ಮೆದುಳು ಹೇಗೆ ಕಾರ್ಯಮಾಡುತ್ತಿತ್ತು ಎನ್ನುವುದನ್ನು ಕಂಡುಕೊಂಡಿದ್ದಾರೆ. ವಿಜ್ಞಾನಿಗಳ ಪ್ರಕಾರ ಇದೇ ಮೊದಲ ಬಾರಿಗೆ ಈ ರೀತಿಯ ಅಧ್ಯಯಯನ ನಡೆಸಲಾಗಿದೆ ಎಂದಿದ್ದಾರೆ.
ಸಾಯುವ ಕ್ಷಣಗಳಲ್ಲಿ ಮೆದುಳು ಹೇಗೆ ಪ್ರತಿಕ್ರಿಯಿಸುತ್ತದೆ?
ಏಜಿಂಗ್ ನ್ಯೂರೋಸೈನ್ಸ್ ಎನ್ನುವ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಾಯುವ ಮೊದಲು ಮನುಷ್ಯ ಮೆದುಳು ಇಡೀ ಜೀವನದಲ್ಲಿ ನಡೆದ ಘಟನೆಗಳನ್ನು ಮರುನೆನಪುಮಾಡಿಕೊಳ್ಳುತ್ತದೆ. ಕನಸಿನ ಮತ್ತು ಧ್ಯಾನದ ಸ್ಥಿತಿಯಲ್ಲಿ ಮೆದುಳು ಇರುತ್ತದೆ. ಕೆಲವೇ ಕ್ಷಣಗಳಲ್ಲಿ ಆ ವ್ಯಕ್ತಿಯ ಸಂಪೂರ್ಣ ಜೀವನ ಆತನ ಕಣ್ಣಬಂದೆ ಬಂದು ಹೋಗುತ್ತದೆ. ಇದನ್ನು ಲೈಫ್ ರಿಕಾಲ್ ಎಂದು ಕರೆಯಲಾಗುತ್ತದೆ. ಸಾಯುವ ವೇಳೆ ಮತ್ತು ಸತ್ತ ನಂತರ ಮೆದುಳು ಸಮನ್ವಯಗೊಳುತ್ತದೆ. ಈ ಕುರಿತು ಮಾಹಿತಿ ನೀಡಿದ ವಿಜ್ಞಾನಿಗಳು ನಾವು ಒಟ್ಟು 900 ಸೆಕೆಂಡುಗಳ ಕಾಲ ಮೆದುಳನ್ನು ಅಧ್ಯಯನ ಮಾಡಿದ್ದೇವೆ. ಹೃದಯ ಬಡಿತ ಸ್ಥಗಿತಗೊಳ್ಳುವ ಮೊದಲ 30 ಸೆಕೆಂಡುಗಳ ಕಾಲ ಮೆದುಳನ್ನು ಗಮನಿಸಿದ್ದೇವೆ, ಆಗ ನಿರ್ದಿಷ್ಟ ಬ್ಯಾಂಡ್ಗಳಲ್ಲಿ ಬದಲಾವಣೆಯನ್ನು ಕಂಡುಕೊಂಡಿದ್ದೇವೆ. ಗಾಮಾ, ಆಲ್ಪಾ, ಡೆಲ್ಟಾ ಮತ್ತು ಬೀಟಾ ಬ್ಯಾಂಡ್ಗಳ ಚಲನೆಯಲ್ಲಿ ಬದಲಾವಣೆಯನ್ನು ಕಂಡುಕೊಂಡಿದ್ದೇವೆ ಎಂದು , ಯುಎಸ್ನ ಲೂಯಿಸ್ವಿಲ್ಲೆ ವಿಶ್ವವಿದ್ಯಾಲಯದ ನರಶಸ್ತ್ರಚಿಕಿತ್ಸಕ ಡಾ ಅಜ್ಮಲ್ ಝೆಮ್ಮರ್ ತಿಳಸಿದ್ದಾರೆ.
ಹೆಚ್ಚಿನ ಅಧ್ಯಯನದ ಅಗತ್ಯ:
ಸಾಯುವ ಸಮಯದಲ್ಲಿ ಮೆದುಳಿನ ಕ್ರಿಯೆಯ ಬಗ್ಗೆ ನಡೆಸಿದ ಅಧ್ಯಯನ ಇದೇ ಮೊದಲನೆಯದಾಗಿದ್ದರೂ, ಸಾಯುತ್ತಿರುವ ವ್ಯಕ್ತಿಯ ಅನುಭವಗಳನ್ನು ಗಣನೆಗೆ ತೆಗೆದುಕೊಂಡಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ. ಆದರೆ ಒಂದು ಪ್ರಮುಖ ವಿಷಯವೆಂದರೆ ಸಾಯುವ ಹಂತದಲ್ಲಿ ಪ್ರತೀ ವ್ಯಕ್ತಿ ಕಣ್ಣು ಮುಚ್ಚಿದಾಗ ಆತನ ಜೀವನದಲ್ಲಾದ ಘಟನೆಗಳು ಆ ವ್ಯಕ್ತಿಯ ಕಣ್ಣಮುಂದೆ ಹಾದುಹೋಗುತ್ತವೆ ಎಂದು ಡಾ ಅಜ್ಮಲ್ ಝೆಮ್ಮರ್ ತಿಳಿಸಿದ್ದಾರೆ.
ಇದನ್ನೂ ಓದಿ: