ಪುಷ್ಪ (Pushpa) ಚಿತ್ರ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದೆ. ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಅಲ್ಲು ಅರ್ಜುನ್ (Allu Arjun) ಜೋಡಿ ಸಖತ್ ಹಿಟ್ ಆಗಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಆದರೂ ಚಿತ್ರದ ಹಾಡು, ಡೈಲಾಗ್ಗಳ ಕ್ರೇಜ್ ಇನ್ನೂ ಮುಗಿದಿಲ್ಲ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಹಾಡಿನ ಕ್ರೇಜ್ ಮುಂದುವರೆದಿದೆ. ಇದೀಗ ಡಚ್ ಮಹಿಳೆ ಎಮ್ಮಾ ಹೀಸ್ಟರ್ಸ್ ಪುಚ್ಪ ಚಿತ್ರದ ಓ ಅಂಟವಾ ಹಾಡನ್ನು ಹಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಹಿಂದೆ ಶ್ರೀವಲ್ಲಿ ಹಾಡಿಗೆ ಧನಿಯಾಗಿದ್ದ ಡಚ್ ಮಹಿಳೆ ಇದೀಗ ಓ ಅಂಟವಾ ಹಾಡನ್ನು ಮೂಲಕ ಭಾರತೀಯರ ಮನಗೆದ್ದಿದ್ದಾರೆ. ಇನ್ಸ್ಟಾಗ್ರಾಮನ್ನಲ್ಲಿ ಹಾಡನ್ನು ಹಂಚಿಕೊಳ್ಳುವ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಎಮ್ಮಾ ಹೀಸ್ಟರ್ಸ್ ಈ ಹಿಂದೆ ಬಾಲಿವುಡ್ನ ಬಿಜಲಿ ಸೇರಿದಂತೆ ಹಲವು ಹಾಡನ್ನು ಹಾಡಿದ್ದಾರೆ. ವಿದೇಶಿ ಮಹಿಳೆಯಾಗಿದ್ದರೂ ಭಾರತದ ಹಾಡುಗಳ ಮೇಲಿನ ಪ್ರೀತಿ ನೋಡಿ ಭಾರತೀಯರೂ ಕೂಡ ಅಚ್ಚರಿಗೊಂಡಿದ್ದಾರೆ. ಎಮ್ಮಾ ಹೀಸ್ಟರ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಎಮ್ಮಾ ಅವರ ಸಾಂಗ್ ಕೇಳಿ ನೆಟ್ಟಿಗರು ಅಚ್ಚರಿಗೊಂಡಿದ್ದು, ವಾವ್ ಎಂದು ಉದ್ಘರಿಸಿದ್ದಾರೆ.
ಇದನ್ನೂ ಓದಿ:
5 ಭಾಷೆಗಳಲ್ಲಿ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡನ್ನು ಹಾಡಿದ ವ್ಯಕ್ತಿ: ಇಲ್ಲಿದೆ ನೋಡಿ ವಿಡಿಯೋ
Published On - 10:16 am, Thu, 24 February 22