ಆಕೆ ಧೈರ್ಯವಂತ ಯುವತಿಯಾಗಿದ್ದಳು: ಶ್ರುತಿಯನ್ನು ಸ್ಮರಿಸಿಕೊಂಡ ಚಿಕಿತ್ಸೆ ಕೊಡಿಸಿದ್ದ ವೈದ್ಯೆ, ಆನಂದ್ ಮಹೀಂದ್ರಾ

| Updated By: ganapathi bhat

Updated on: Aug 23, 2021 | 12:30 PM

ಆಕೆಯ ಸಾವಿನ ಬಗ್ಗೆ ಆನಂದ್ ಮಹೀಂದ್ರಾ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ಧಾರೆ. ಕೊವಿಡ್ ಮಹಾಮಾರಿ ಇಂಥವರನ್ನು ಕಳೆದುಕೊಳ್ಳುವಂತೆ ಮಾಡಿದೆ. ಆದರೆ, ಈ ಸಾವು ಮರೆಯುವುದಿಲ್ಲ. ನಾವು ಆಕೆಯನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆಕೆ ಧೈರ್ಯವಂತ ಯುವತಿಯಾಗಿದ್ದಳು: ಶ್ರುತಿಯನ್ನು ಸ್ಮರಿಸಿಕೊಂಡ ಚಿಕಿತ್ಸೆ ಕೊಡಿಸಿದ್ದ ವೈದ್ಯೆ, ಆನಂದ್ ಮಹೀಂದ್ರಾ
ವೈರಲ್​ ವಿಡಿಯೋದಲ್ಲಿದ್ದ ಯುವತಿ
Follow us on

ಎಮರ್ಜೆನ್ಸಿ ವಾರ್ಡ್​ನಲ್ಲಿ ಲವ್ ಯೂ ಜಿಂದಗಿ ಹಾಡು ಹಾಕಿ ಬದುಕಿನ ಭರವಸೆ ಮೂಡಿಸಿದ್ದ, ಕೊರೊನಾ ಸೋಂಕಿಗೆ ತುತ್ತಾಗಿದ್ದ 30 ವರ್ಷದ ಯುವತಿ ನಾನು ಭೇಟಿ ಮಾಡಿದ ಧೈರ್ಯವಂತ ಹೆಣ್ಣುಮಗಳು ಎಂದು ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದ ವೈದ್ಯೆ ಹೇಳಿದ್ದಾರೆ. ಕೊರೊನಾ ಕಾಲದಲ್ಲಿ ಹಲವು ವೈದ್ಯರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹಾಗೇ ಲವ್ ಯೂ ಜಿಂದಗಿ ಹಾಡಿನ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದ್ದ ಯುವತಿಯನ್ನು ನೋಡಿಕೊಳ್ಳುತ್ತಿದ್ದ ವೈದ್ಯೆ ಕೂಡ ತಮ್ಮ ಮನದ ಭಾವವನ್ನು ಹಂಚಿಕೊಂಡಿದ್ದಾರೆ.

ಆಕೆ ಬಹಳ ಧೈರ್ಯವಂತ ಹೆಣ್ಣುಮಗಳಾಗಿದ್ದಳು. ನಾನು ಅಂಥಾ ಪೇಷೆಂಟ್​ನ್ನು ಇದುವರೆಗೂ ನೋಡಿರಲಿಲ್ಲ ಎಂದು ಡಾ. ಮೋನಿಕಾ ಲಂಗ್ಡೆ ಹೇಳಿದ್ದಾರೆ. ಕೊವಿಡ್-19ಗೆ ತುತ್ತಾಗಿದ್ದ ಆಕೆಯ ಪರಿಸ್ಥಿತಿ ಹದಗೆಟ್ಟ ಬಳಿಕ ಐಸಿಯು ವಾರ್ಡ್​ಗೆ ಶಿಫ್ಟ್ ಮಾಡಲಾಗಿತ್ತು. ಎಲ್ಲಾ ಪ್ರಯತ್ನದ ಬಳಿಕವೂ ಆಕೆ ಉಳಿಸಲಾಗಲಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.

ಕೇವಲ ಆ ಯುವತಿ, ಶ್ರುತಿ ಮಾತ್ರ ಬದುಕಿನ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿರಲಿಲ್ಲ, ಬದಲಾಗಿ ಆಕೆಯ ಕುಟುಂಬ ಕೂಡ ಅದೇ ಮನಸ್ಥಿತಿ ಹೊಂದಿತ್ತು. ಐಸಿಯುವಿನಲ್ಲಿ ಇರುವಾಗ ಕೂಡ ಆಕೆಗಾಗಿ ಅವಳ ಕುಟುಂಬದವರು ಆಡಿಯೋ ಮೆಸೇಜ್ ಕಳಿಸುತ್ತಿದ್ದರು ಎಂಬುದನ್ನು ಮೋನಿಕಾ ಉಲ್ಲೇಖಿಸಿದ್ದಾರೆ. ನಾನು ಹಲವಾರು ಪೇಷೆಂಟ್​ಗಳನ್ನು ನೋಡಿದ್ದೇನೆ ಆದರೆ ವೈದ್ಯೆಯಾಗಿ ಶ್ರುತಿ ಕುಟುಂಬಕ್ಕೆ ಹೆಚ್ಚು ಆಪ್ತಳಾಗಿದ್ದೇನೆ ಎಂದು ಮೋನಿಕಾ ಹೇಳಿಕೊಂಡಿದ್ದಾರೆ.

ಆಕೆಯ ಸಾವಿನ ಬಗ್ಗೆ ಆನಂದ್ ಮಹೀಂದ್ರಾ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ಧಾರೆ. ಕೊವಿಡ್ ಮಹಾಮಾರಿ ಇಂಥವರನ್ನು ಕಳೆದುಕೊಳ್ಳುವಂತೆ ಮಾಡಿದೆ. ಆದರೆ, ಈ ಸಾವು ಮರೆಯುವುದಿಲ್ಲ. ನಾವು ಆಕೆಯನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ

ಸೋಂಕಿತರ ಸಾವನ್ನು ನೋಡಲು ಕಷ್ಟವಾಗುತ್ತಿದೆ; ಕೊರೊನಾ ಪರಿಸ್ಥಿತಿ ವಿವರಿಸುತ್ತಾ ಕಣ್ಣೀರು ಹಾಕಿದ ವೈದ್ಯ

Published On - 6:45 am, Sun, 16 May 21