
News Anchor : ನೀವು ನೋಡುತ್ತಿದ್ದೀರಿ, ನೀವು ನೋಡ್ತಾ ಇದ್ದೀರಿ, ನೀವು ನೋಡ್ತಾ ಇರ್ರಿ, ನೀವು ನೋಡಿದಿರಿ… ಹೀಗೆ ಪ್ರತಿಯೊಬ್ಬ ನ್ಯೂಸ್ ಆ್ಯಂಕರ್ಗಳು ವೀಕ್ಷಕರನ್ನು ಉದ್ದೇಶಿಸಿ ಲೈವ್ ನ್ಯೂಸ್ನ ಆರಂಭದಲ್ಲಿಯೋ ಅಂತ್ಯದಲ್ಲಿಯೋ ಅಥವಾ ಮಧ್ಯದಲ್ಲಿಯೋ ಹೇಳುವುದನ್ನು ಗಮನಿಸಿದ್ದೀರಿ. ಆದರೆ ಬಿಬಿಸಿ (BBC) ನ್ಯೂಸ್ ಆ್ಯಂಕರ್ ಗ್ಯಾರೆಥ್ ಬಾರ್ಲೋ (Gareth Barlow) ‘ನೀವು ನೋಡುತ್ತಿದ್ದೀರಿ’ ಎನ್ನುವ ಬದಲಾಗಿ ‘ನಾನು ನೋಡುತ್ತಿದ್ದೇನೆ’ ಎಂದು ಲೈವ್ನಲ್ಲಿ ಹೇಳಿ ತಡವರಿಸಿದ್ದಾರೆ. ಈ ತಮಾಷೆಯ ವಿಡಿಯೋ ಅನ್ನು ಅವರೇ ತಮ್ಮ X (Twitter) ಖಾತೆಯಲ್ಲಿ ಪೋಸ್ಟ್ ಮಾಡಿ, ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ.
ಇದನ್ನೂ ಓದಿ : Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ ‘ಭಾರತದ ನಕ್ಷೆ’ ಗುರುತಿಸಿದ ಈ ವ್ಯಕ್ತಿ
‘ಸುದ್ದಿಯನ್ನು ಯಾರು ನೋಡುತ್ತಿದ್ದಾರೆಂದು ದಯವಿಟ್ಟು ಯಾರಾದರೂ ನನಗೆ ನೆನಪಿಸಬಹುದೇ?’ ಎಂಬ ಒಕ್ಕಣೆ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಗ್ಯಾರೆಥ್. ಆ. 21ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 8.8 ಲಕ್ಷ ಜನರು ನೋಡಿದ್ದಾರೆ. 6,900 ಜನರು ಲೈಕ್ ಮಾಡಿದ್ದಾರೆ. 300ಕ್ಕೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಲಂಡನ್; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?
ನನ್ನನ್ನೂ ನೋಡುತ್ತಿದ್ದೇನೆ, ನಿಮ್ಮನ್ನೂ ನೋಡುತ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ನೀವು ತಾಂತ್ರಿಕವಾಗಿ ಸುದ್ದಿಯನ್ನು ನೋಡುತ್ತಿದ್ದೀರಿ. ಪ್ಯಾಕೇಜುಗಳನ್ನು ನೋಡುತ್ತಿದ್ದೀರಿ, ಔಟ್ಪುಟ್ಗೆ ಪ್ರತಿಕ್ರಿಯೆ ನೀಡುತ್ತಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ಇದು ಅದ್ಭುತ! ಮತ್ತಿದನ್ನು ನೀವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಿಮ್ಮ ಸಹಜ ನಡೆಗೆ ಸಾಕ್ಷಿ ಎಂದಿದ್ದಾರೆ ಮತ್ತೊಬ್ಬರು. ತಡವಿರಿಸಿದ್ದು ಮುಖದಲ್ಲಿ ವ್ಯಕ್ತವಾಗದಂತೆ ಲೈವ್ ನಿಭಾಯಿಸಿದ್ದಾರೆ ಎಂದು ಮಗದೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ