ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತ ಕೋರಿದ ಅತ್ತೆ-ಮಾವ! ವೈರಲ್ ವಿಡಿಯೋ ಇಲ್ಲಿದೆ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಅದನ್ನು ಸಂಪೂರ್ಣವಾಗಿ ಅರ್ಥಹೀನವೆಂದು ಹೇಳುತ್ತಿದ್ದಾರೆ.

ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತ ಕೋರಿದ ಅತ್ತೆ-ಮಾವ! ವೈರಲ್ ವಿಡಿಯೋ ಇಲ್ಲಿದೆ
ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತ ಕೋರಿದ ಅತ್ತೆ-ಮಾವ!
Edited By: ಸಾಧು ಶ್ರೀನಾಥ್​

Updated on: Feb 17, 2023 | 3:14 PM

ಭಾರತವು ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದೆ. ಭಾರತದ ವಿವಿಧ ಪ್ರದೇಶಗಳು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ವಿವಿಧ ಸಮುದಾಯಗಳು ವಿಶೇಷವಾಗಿ ವಿವಾಹಗಳಿಗೆ (Wedding) ಸಂಬಂಧಿಸಿದ ವಿವಿಧ ಪದ್ಧತಿಗಳನ್ನು ಅನುಸರಿಸುತ್ತವೆ. ಇಲ್ಲಿಯೂ ಅಂತಹ ಒಂದು ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗಿದೆ. ಅತ್ತೆ-ಮಾವ ತಮ್ಮ ವರನಿಗೆ ಬಾಯಲ್ಲಿ ಸಿಗರೇಟ್ (Cigarette) ಇಟ್ಟು, ಅದನ್ನು ಹಚ್ಚಿ ಸ್ವಾಗತಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲವೆಡೆ ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಎಂದು ಹಲವರು ಸೂಚಿಸಿದರೆ, ಇನ್ನು ಕೆಲವರು ಇಂತಹ ನೀತಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ. ಇಷ್ಟೆಲ್ಲಾ ಮಾಡಲು ಅತ್ತೆ ಹೇಗೆ ತಯಾರಾಗಿದ್ದರು ಎಂದು ವಿಡಿಯೋ (Viral Video) ನೋಡುತ್ತಿರುವ ಜನರು ಆಶ್ಚರ್ಯ ಪಡುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ವರನು ಸೋಫಾದಲ್ಲಿ ಕುಳಿತಿದ್ದಾನೆ. ಆಗ ಅತ್ತೆ ಸಿಗರೇಟನ್ನು ಹೊಸ ಅಳಿಯನ ಬಾಯಿಗೆ ನೀಡುತ್ತಾಳೆ. ಆಗ ಮಾವ ವಿನಯ, ಸಂಕೋಚದಿಂದಲೇ ಸಿಗರೇಟು ಹಚ್ಚುತ್ತಾರೆ. ಅದಕ್ಕೆ ಅಳಿಯ ಒಂದು ದಮ್​ ಎಳೆದು, ತಕ್ಷಣ ಅದನ್ನು ತನ್ನ ಮಾವನಿಗೆ ಹಿಂತಿರುಗಿಸುತ್ತಾನೆ. ನಂತರ ಸಂಪ್ರದಾಯದ ಪ್ರಕಾರ ವರ ಇಬ್ಬರಿಗೂ ಸ್ವಲ್ಪ ಹಣ ಕೊಡುತ್ತಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ವಿಭಿನ್ನ ಜನರು ಈ ಸಂಪ್ರದಾಯದ ಬಗ್ಗೆ ವಿಭಿನ್ನ ರೀತಿಯಲ್ಲಿ ಮಾತನಾಡುತ್ತಾರೆ. ಘಟನೆಯ ಸ್ಥಳ ತಿಳಿದಿಲ್ಲವಾದರೂ, ಈ ಆಚರಣೆಯು ಗುಜರಾತ್‌ನಲ್ಲಿ ನಡೆದಿರಬಹುದು ಎಂದು ಹಲವರು ಊಹಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣ ಅಸಂಬದ್ಧ ಎಂದು ಕೆಲವರು ಹೇಳುತ್ತಾರೆ. ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ, ಅಷ್ಟು ಮಾತ್ರ ಗೊತ್ತಾಗಲ್ಲವಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಕೆಲವರು ಈ ರೀತಿ ಮಾಡುತ್ತಾರೆ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:56 pm, Fri, 17 February 23

TV9 Web

TV9 Kannada

Read More
Loading...
Unable to load recommendations.
Follow Us