ವೈರಲ್ ವಿಡಿಯೋ: ಪ್ರಾಣಿಗಳು ಯಾವುದೇ ಆಗಿರಲಿ ತುಂಬಾ ಜಾಗ್ರತೆ ವಹಿಸಬೇಕು. ಪ್ರೀತಿ ಇದ್ರೆ ಸರಿ ಇಲ್ಲಾ ಅಂದ್ರೆ ಅವು ಆಕಾಶದಲ್ಲಿನ ಚುಕ್ಕಿಗಳನ್ನು ಮುಫತ್ತಾಗಿ ತೋರಿಸ್ತಾವೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷಗಳು ಜಾಸ್ತಿಯಾಗುತ್ತಿದ್ದು, ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಅನೇಕ ಸನ್ನಿವೇಶಗಳನ್ನು ವಿಡಿಯೋಗಳಲ್ಲಿ ನಾವು ನೋಡುತ್ತೇವೆ. ಕೆಲವೊಮ್ಮೆ ಅವು ಅನಿರೀಕ್ಷಿತವಾಗಿ ದಾಳಿ ಮಾಡಿ ಘಾಸಿಗೊಳಿಸುತ್ತವೆ. ದಾಳಿಗಳು ಇಂತಹುದೇ ನಿರ್ದಿಷ್ಟ ಕಾರಣಗಳು ಅಂತೇನೂ ಇರುವುದಿಲ್ಲ. ಜಸ್ಟ್ ಲೈಕ್ ದಟ್ ಅಂತಾ ಥಟ್ ಅಂತಾ ಅವು ದಾಳಿ ಮಾಡಿಬಿಡಬಹುದು. ಅದಕ್ಕೇ ಜಾಗ್ರತೆಯಾಗಿರಿ.
ಕಾರಣವೇನು ಅಂದ್ರೆ ಬಹುಶಃ ರೆಡ್ ಶರ್ಟ್ ಅಂಡ್ ರೆಡ್ ಸ್ಕೂರಟ್ ಇರಬಹುದು:
ಇತ್ತೀಚಿನ ವೈರಲ್ ವಿಡಿಯೋ ಕೂಡ ಇದೇ ರೀತಿಯದ್ದಾಗಿದೆ. ನೀವು ಈ ವೀಡಿಯೊವನ್ನು ನೋಡಿದರೆ, ಪ್ರಾಣಿಗಳಿಂದ ದೂರವಿರುವುದು ಎಷ್ಟು ಕ್ಷೇಮಕರ ಎಂಬುದು ನಿಮಗೇ ಅರ್ಥವಾಗುತ್ತದೆ. ಈ ವೀಡಿಯೋ ನೋಡುವುದರಿಂದ ನಿಮ್ಮ ಬೆನ್ನುಮೂಳೆಯ ಬುಡದಿಂದ ನಡುಕ ಬರುವುದು ಗ್ಯಾರಂಟಿ. ಈ ವಿಡಿಯೋದಲ್ಲಿ ಗೂಳಿಯ ದಾಳಿ ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ.
ಈ ವೈರಲ್ ವೀಡಿಯೊದಲ್ಲಿ, ರಸ್ತೆಯಲ್ಲಿ ಗೂಳಿಯೊಂದು ತನ್ನ ಪಾಡಿಗೆ ತಾನು ಹೋಗುತ್ತಿರುತ್ತದೆ. ಅದೇ ವೇಳೆಗೆ ವ್ಯಕ್ತಿಯೊಬ್ಬರು ಮನೆ ಗೇಟ್ ತೆಗೆದು ರಸ್ತೆಗೆ ಬರುತ್ತಯಾರೆ. ಅಷ್ಟೇ… ಆ ವ್ಯಕ್ತಿಯ ಮೇಲೆ ರಸ್ತೆಯಲ್ಲಿ ಸಾವಕಾಶವಾಗಿ ನಡೆದು ಹೋಗುತ್ತಿದ್ದ ಗೂಳಿಯೊಂದು ಇದ್ದಕ್ಕಿಂದ್ದಂತೆ ಮೈಮೇಲೆ ದೆವ್ವ ಬಂದಂತೆ, ಆ ಬಡಪಾಯಿ ವ್ಯಕ್ತಿಯ ಮೇಲೆ ತೀವ್ರವಾಗಿ ದಾಳಿ ಮಾಡಿಬಿಡುತ್ತದೆ. ಗೂಳಿಯ ಅನಿರೀಕ್ಷಿತ ದಾಳಿಯಿಂದ ವ್ಯಕ್ತಿ ಕಂಗೆಟ್ಟು ಹೋಗುತ್ತಾರೆ. ಅದರಿಂದ ಬಿಡಿಸಿಕೊಳ್ಳಲು ಅವರಿಗೆ ಅವಕಾಶವೇ ನೀಡುವುದಿಲ್ಲ. ಆ ವ್ಯಕ್ತಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಮೇಲೆ ದಾಳಿ ನಡೆಸಿದೆ ಗೂಳಿ ನಂತರ ತನ್ನ ಟಾರ್ಗೆಟ್ ಯಾವುದು ಎಂಬುದು ಸ್ಥಳದಲ್ಲೇ ನಿರ್ಧರಿಸಿಬಿಡುತ್ತದೆ. ಒಬ್ಬ ಮಹಿಳೆಯನ್ನು ಕೆಳಕ್ಕೆ ಕೆಡವಿಬಿಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ರೊಚ್ಚಿಗೆದ್ದ ಗೂಳಿಯನ್ನು ಬೆದರಿಸಿ, ತಹಬಂದಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗುಂಡಿಗೆ ಗಟ್ಟಿ ಮಾಡಿಕೊಂಡು ನೀವೂ ಈ ವಿಡಿಯೋ ನೋಡಿ
Nuisance of Stray animals in India … Govt doesn’t care about them .. vigilantes use them for their politico religious purpose.. and people suffer like this pic.twitter.com/R7bcrCGJIQ
— ਅਦਨਾਨ ਅਲੀ ਖਾਨ ( عدنان علی خان ) (@AdnanAliKhan555) August 19, 2022
ಗೂಳಿ ದಾಳಿ ಪ್ರಕರಣ ಇನ್ನೂ ಒಂದಿದೆ ನೋಡಿಬಿಡಿ:
Now, stray bovines are killing people.#Khandwa #MP pic.twitter.com/PFlsFD4TcX
— काश/if Kakvi (@KashifKakvi) August 11, 2022
To read more in Telugu click here