Viral Video: ಬೈಕ್ ಸವಾರನ ತಲೆ ಮೇಲೆ ಏಕಾಏಕಿ ಬಿತ್ತು ತೆಂಗಿನಕಾಯಿ, ಹೆಲ್ಮೆಟ್​ ಹಾಕಿರ್ಲಿಲ್ಲ ಏನಾಯ್ತು ನೋಡಿ

|

Updated on: May 17, 2023 | 3:25 PM

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೂರಾರು ಅಪಘಾತದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಹೆಚ್ಚಿನ ಅಪಘಾತಗಳು ಚಾಲನೆ ವೇಳೆ ನಿರ್ಲಕ್ಷ್ಯ, ನಿಯಮಗಳ ಪಾಲನೆ ಮಾಡದಿರುವುದರಿಂದ ಸಂಭವಿಸುತ್ತದೆ.

Viral Video: ಬೈಕ್ ಸವಾರನ ತಲೆ ಮೇಲೆ ಏಕಾಏಕಿ ಬಿತ್ತು ತೆಂಗಿನಕಾಯಿ, ಹೆಲ್ಮೆಟ್​ ಹಾಕಿರ್ಲಿಲ್ಲ ಏನಾಯ್ತು ನೋಡಿ
ವೈರಲ್
Image Credit source: ABP Live
Follow us on

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೂರಾರು ಅಪಘಾತದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಹೆಚ್ಚಿನ ಅಪಘಾತಗಳು ಚಾಲನೆ ವೇಳೆ ನಿರ್ಲಕ್ಷ್ಯ, ನಿಯಮಗಳ ಪಾಲನೆ ಮಾಡದಿರುವುದರಿಂದ ಸಂಭವಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಸಂದರ್ಭಗಳಲ್ಲಿ ನೈಸರ್ಗಿಕ ಕಾರಣಗಳಿಂದಲೂ ಅಪಘಾತಗಳು ಸಂಭವಿಸಬಹುದು. ಇದನ್ನು ತಪ್ಪಿಸಲು ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು ಎಂಬುದು ನಿಮಗೆ ಮನದಟ್ಟಾಗುತ್ತದೆ.

ಸಾಮಾನ್ಯವಾಗಿ, ರಸ್ತೆಯಲ್ಲಿ ನಡೆಯಲು ಹಲವು ರೀತಿಯ ನಿಯಮಗಳನ್ನು ಮಾಡಲಾಗುತ್ತದೆ. ಇದರಲ್ಲಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರು ಒಂದೊಮ್ಮೆ ಅಪಘಾತ ಸಂಭವಿಸಿದರೆ ತಮ್ಮ ತಲೆಯನ್ನು ಸುರಕ್ಷಿತವಾಗಿ ಕಾಪಾಡಲು ಹೆಲ್ಮೆಟ್ ಧರಿಸುವಂತೆ ಸೂಚಿಸಲಾಗುತ್ತದೆ.

ಆದರೆ ಜನರು ನಿರ್ಲಕ್ಷ್ಯವಹಿಸಿದರೆ ಏನಾಗುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇತ್ತೀಚೆಗಷ್ಟೇ ಬಂದಿರುವ ವೀಡಿಯೋ ನೋಡಿದರೆ ಹೆಲ್ಮೆಟ್ ಹೇಗೆ ನಮ್ಮನ್ನು ಅಪಘಾತದಿಂದ ಪಾರು ಮಾಡುತ್ತದೆ ಎಂಬುದು ಅರ್ಥವಾಗುತ್ತದೆ.

ಹೆಲ್ಮೆಟ್ ಧರಿಸುವುದು ಅವಶ್ಯಕ
ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಬೈಕ್​ಲ್ಲಿ ಹೋಗುವಾಗ ಎದುರಿನಿಂದ ಬರುವ ವಾಹನಗಳನ್ನು ಚಿತ್ರೀಕರಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಬೈಕ್ ಸವಾರರೊಬ್ಬರು ಅವರ ಎದುರಿನಿಂದ ಬರುತ್ತಿರುತ್ತಾರೆ ಆಗ ಅದೇ ಸಮಯದಲ್ಲಿ ಬೈಕ್ ಸವಾರನ ತಲೆ ಮೇಲೆ ತೆಂಗಿನ ಕಾಯಿ ಬೀಳುತ್ತದೆ. ಇದರಿಂದ ಬೈಕ್ ಸವಾರನ ತಲೆಗೆ ಪೆಟ್ಟಾಗಿದ್ದು, ನಿಯಂತ್ರಣ ತಪ್ಪಿ ಅಪಘಾತಕ್ಕೆ ಬಲಿಯಾಗಿದ್ದಾನೆ.

ಮತ್ತಷ್ಟು ಓದಿ: Viral News: ಒಂದೇ ಬಾವಿಯಲ್ಲಿ ಸಹಬಾಳ್ವೆಯಲ್ಲಿದ್ದ ನರಿ, ನಾಗರ ಹಾವು

ತಲೆಗೆ ಹೆಲ್ಮೆಟ್ ಹಾಕದ ಕಾರಣ ಬೈಕ್ ಸವಾರ ಅಪಘಾತಕ್ಕೀಡಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ 2 ಲಕ್ಷ 20 ಸಾವಿರಕ್ಕೂ ಹೆಚ್ಚು ಬಳಕೆದಾರರು ಅದನ್ನು ಇಷ್ಟಪಟ್ಟಿದ್ದಾರೆ ಮತ್ತು 4.6 ಮಿಲಿಯನ್‌ಗಿಂತಲೂ ಹೆಚ್ಚು ಸುಮಾರು 46 ಲಕ್ಷ ಬಳಕೆದಾರರು ಅದನ್ನು ವೀಕ್ಷಿಸಿದ್ದಾರೆ.
ವೀಡಿಯೋ ನೋಡಿದ ಬಳಕೆದಾರರು ಅಚ್ಚರಿಗೊಂಡಿದ್ದಾರೆ. ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ನಮಗೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ