Viral Video : ಅಪ್ಪಂದಿರು ಎಂದರೆ ಮಕ್ಕಳ ವಿಷಯದಲ್ಲಿ ದೊಡ್ಡ ಶಕ್ತಿ. ಕೇಳಿದ್ದನ್ನು ದಯಪಾಲಿಸುವ ದೈವ. ಎಂಥ ಸಂದರ್ಭದಲ್ಲಿಯೂ ಕಾಯುವ ಕರುಣಾಳು. ಎಂಥ ಕಷ್ಟದಲ್ಲಿಯೂ ಸಾಹಸಿಗನಂತೆ ರಕ್ಷಿಸುವ ಸೂಪರ್ ಹೀರೋ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ದ್ವಿಚಕ್ರವಾಹನ ಓಡಿಸುತ್ತ, ಹಿಂದಿನ ಸೀಟಿನಲ್ಲಿ ಕುಳಿತು ನಿದ್ದೆ ಮಾಡುತ್ತಿರುವ ಮಗುವನ್ನು ಈ ಅಪ್ಪ ಸಂಭಾಳಿಸುತ್ತ ಗಾಡಿ ಓಡಿಸುತ್ತಿದ್ದಾರೆ.
ಅಪ್ಪನ ಸಾಮರ್ಥ್ಯಗಳು ಏನೆಂದು ಒಮ್ಮೆಲೇ ಪ್ರಕಟಗೊಳ್ಳುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅಪ್ಪನೊಳಗಿನ ಸೂಪರ್ಮ್ಯಾನ್ ಜಾಗೃತಗೊಳ್ಳುತ್ತಾ ಹೋಗುತ್ತಾನೆ. ಅದಕ್ಕೆ ಅಪ್ಪನೆಂದರೆ ಆನೆಯ ಬಲವೇ! ನವೆಂಬರ್ 14ರಂದು ಅಭಿಷೇಕ್ ಥಾಪಾ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ಮಗು ಅಪ್ಪನ ಹಿಂದೆ ಕುಳಿತಿದೆ. ಹಾಗೇ ನಿದ್ದೆ ಬಂದಿದೆ. ಎಡಗೈಯಿಂದ ಅಪ್ಪ ಮಗುವನ್ನು ಹಿಡಿದುಕೊಂಡು ಒಂದೇ ಕೈಯಿಂದ ಗಾಡಿ ಓಡಿಸಿದ್ದಾನೆ.
ಇದನ್ನೂ ಓದಿ : ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?
ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಅಪ್ಪನ ಕೈ ನಿಮ್ಮ ಬೆನ್ನಿಗಿರುವ ತನಕ ನೀವು ಸುರಕ್ಷಿತರು ಎಂದಿದ್ದಾರೆ ಒಬ್ಬರು. ಅಪ್ಪನೆಂದರೆ ಅಪ್ಪನೇ ಎಂದಿದ್ಧಾರೆ ಇನ್ನೊಬ್ಬರು. ನನಗಿನ್ನೂ ನೆನಪಿದೆ ಶಾಲೆಗೆ ಹೋಗುವಾಗ ಮಳೆ ಬಂದಿತು. ಅಪ್ಪ ತನ್ನ ರೇನ್ಕೋಟ್ ಅನ್ನು ನನಗೆ ಕೊಟ್ಟರು ಎಂದು ಹೇಳಿದ್ದಾರೆ ಮತ್ತೊಬ್ಬರು. ಪ್ರತಿಯೊಬ್ಬರ ಜೀವನದ ನಿಜವಾದ ಹೀರೋ ಎಂದಿದ್ದಾರೆ ಮಗದೊಬ್ಬರು. ಅಪ್ಪ ಇರುವ ತನಕ ಎಲ್ಲವೂ ಸಾಧ್ಯ! ಎಂದಿದ್ದಾರೆ ಇನ್ನೊಬ್ಬರು. ಎಲ್ಲ ಅಪ್ಪಂದಿರೂ ಈ ಅಪ್ಪನಂತೆ ಒಳ್ಳೆಯವರಾಗಿರುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಈ ವಿಡಿಯೋ ನೋಡಿ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:40 am, Tue, 6 December 22