Swimwear Fashion Show: ಬುರ್ಖಾ ಸಂಪ್ರದಾಯ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಿಕಿನಿ ತೊಟ್ಟು ಕ್ಯಾಟ್​ ವಾಕ್​​ ಮಾಡಿದ ಯುವತಿಯರು

ಶುಕ್ರವಾರ(ಮೇ.17) ಮೊಟ್ಟಮೊದಲ ಬಾರಿಗೆ ಸೌದಿ ಅರೇಬಿಯಾದ ಮಣ್ಣಿನಲ್ಲಿ ಸ್ವಿಮ್‌ವೇರ್‌ ಫ್ಯಾಶನ್‌ ಶೋ ನಡೆದಿದೆ. ಯುವತಿಯರು ಬಿಕಿನಿ ತೊಟ್ಟು ಕ್ಯಾಟ್​​ ವಾಕ್​ ಮಾಡಿದ್ದು, ಈ ಫ್ಯಾಶನ್​​ ಶೋ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.

Swimwear Fashion Show: ಬುರ್ಖಾ ಸಂಪ್ರದಾಯ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಿಕಿನಿ ತೊಟ್ಟು ಕ್ಯಾಟ್​ ವಾಕ್​​ ಮಾಡಿದ ಯುವತಿಯರು
ಸ್ವಿಮ್ ವೇರ್ ಶೋ

Updated on: May 18, 2024 | 1:25 PM

ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳಲ್ಲಿ ದಶಕದ ಹಿಂದೆ ಮಹಿಳೆಯರು ಸಂಪೂರ್ಣ ದೇಹವನ್ನು ಮುಚ್ಚುವಂತಹ ಬುರ್ಖಾ ಧರಿಸುವ ಸಂಪ್ರದಾಯವಿತ್ತು. ಆದರೆ ಇದೀಗ ಸ್ವಿಮ್ ವೇರ್ ಶೋ ಆಯೋಜನೆಯ ಮೂಲಕ ಪ್ರಪಂಚದಾದ್ಯಂತ ಅರಬ್​​ ರಾಷ್ಟ್ರ ಸಂಚಲನ ಸೃಷ್ಟಿಸಿದೆ. ಹೌದು ಶುಕ್ರವಾರ(ಮೇ.17) ಮೊಟ್ಟಮೊದಲ ಬಾರಿಗೆ ಸೌದಿ ಅರೇಬಿಯಾದ ಮಣ್ಣಿನಲ್ಲಿ ಸ್ವಿಮ್‌ವೇರ್‌ ಫ್ಯಾಶನ್‌ ಶೋ ನಡೆದಿದೆ. ಯುವತಿಯರು ಬಿಕಿನಿ ತೊಟ್ಟು ಕ್ಯಾಟ್​​ ವಾಕ್​ ಮಾಡಿದ್ದು, ಈ ಫ್ಯಾಶನ್​​ ಶೋ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿರುವ ಸೇಂಟ್ ರೆಗಿಸ್ ರೆಡ್ ಸೀ ರೆಸಾರ್ಟ್‌ನಲ್ಲಿ ಉದ್ಘಾಟನಾ ರೆಡ್ ಸೀ ಫ್ಯಾಶನ್ ವೀಕ್‌ನ ಎರಡನೇ ದಿನದಂದು ಪ್ರದರ್ಶನವು ನಡೆಯಿತು. ಮೊರಾಕ್ಕೊದ ಡಿಸೈನರ್‌ ಯಾಸ್ಮಿನಾ ಕನ್ಜಾಲ್ ಅವರು ವಿನ್ಯಾಸಗೊಳಿಸಿದ ಸ್ವಿಮ್ ವೇರ್ ಸೂಟ್​​ನಲ್ಲಿ ಮಾಡೆಲ್​​​ಗಳು ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದೆ.

ಇದನ್ನೂ ಓದಿ: ನೀನು ದೇವತೆ ತಾಯಿ, ಕೊಚ್ಚಿ ಹೋಗುತ್ತಿದ್ದ ಶ್ವಾನವನ್ನು ಕಾಪಾಡಿದ ಯುವತಿ

ಇದಲ್ಲದೇ ಮೊಟ್ಟಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಸೌದಿ ಅರೇಬಿಯಾ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. 27 ವರ್ಷದ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ