
ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಸಾಲಾಗಿ ವಾಹನಗಳು ಬಂದು ಬಿಟ್ಟರೆ ಮುಗಿದೇ ಹೋಯ್ತು. ಯಾರೇ ಆದ್ರೂ ಒಂದು ಕ್ಷಣ ಹೇಗೆ ರಸ್ತೆ ದಾಟುವುದು ಎಂದು ಯೋಚಿಸುತ್ತಾರೆ. ಆದರೆ ಇದೀಗ ಥೈಲ್ಯಾಂಡ್‌ನ (Thailand) ಟೆಸ್ಲಾ ಕಾರು ಚಾಲಕನೊಬ್ಬ ರಸ್ತೆ ದಾಟಲು ಕಾಯುತ್ತಿರುವ ಪಾದಚಾರಿಗೆ ಕಂಡೊಡನೆ ತನ್ನ ಕಾರನ್ನು ನಿಲ್ಲಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ನಗರದಲ್ಲಿ ನಡೆದಿದೆ. ಟೆಸ್ಲಾ ಕಾರಿನ ಹಿಂದೆ ಉಳಿದ ವಾಹನಗಳು ಸಾಲಾಗಿ ನಿಂತಿವೆ. ಕಾರು ನಿಂತೊಡನೆ ಪಾದಚಾರಿ ರಸ್ತೆ ದಾಟಿದ್ದಾನೆ. ಈ ದೃಶ್ಯವನ್ನು ಭಾರತೀಯ ಕಂಟೆಂಟ್ ಕ್ರಿಯೇಟರ್ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಭಾರತದ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಭಾರತೀಯ ಕಂಟೆಂಟ್ ಕ್ರಿಯೇಟರ್ ಅಕ್ಷತ್ ಶ್ರೀವಾಸ್ತವ (Akshat Shrivastava) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಟೆಸ್ಲಾ ಕಾರು ಚಾಲಕನೊಬ್ಬ ರಸ್ತೆ ದಾಟಲು ಕಾಯುತ್ತಿರುವ ಪಾದಚಾರಿಯನ್ನು ಕಂಡೊಡನೆ ತನ್ನ ಕಾರನ್ನು ನಿಲ್ಲಿಸುತ್ತಿರುವುದನ್ನು ಕಾಣಬಹುದು. ಚಾಲಕನ ಕಾರಿನ ಹಿಂದೆ ಸಾಲು ಸಾಲು ವಾಹನಗಳು ನಿಂತಿವೆ. ಭಾರತೀಯ ವ್ಯಕ್ತಿ ಥೈಲ್ಯಾಂಡ್‌ನ ರಸ್ತೆ ವ್ಯವಸ್ಥೆಯನ್ನು ಶ್ಲಾಘಿಸಿದ್ದು, ಭಾರತೀಯ ನಗರಗಳಲ್ಲಿ ಇದೇ ರೀತಿಯ ಸಂಚಾರ ಸಂಸ್ಕೃತಿಯನ್ನು ಏಕೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಆಕಾಶದಿಂದ ಬಿತ್ತಾ ಟೈರ್? ‘ಫೈನಲ್ ಡೆಸ್ಟಿನೇಷನ್’ ಸಿನಿಮಾವನ್ನೇ ನೆನಪಿಸಿದ ಘಟನೆ: ಯುವಕನಿಗೆ ಡಿಕ್ಕಿ ಹೊಡೆದ ಟೈರ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದ ರಸ್ತೆಗಳಲ್ಲಿ ಇಂತಹ ನಡವಳಿಕೆಗಳು ಕಾಣಸಿಗುವುದೇ ಕಡಿಮೆ ಎಂದಿದ್ದಾರೆ. ಮತ್ತೊಬ್ಬರು, ಅಭಿವೃದ್ಧಿ ಹೊಂದಿದ ರಸ್ತೆ ಹಾಗೂ ದುಬಾರಿ ಬೆಲೆಯ ಕಾರುಗಳು ಮಾತ್ರವಲ್ಲ, ಸಾರ್ವಜನಿಕ ನಡವಳಿಕೆಯು ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ, ದಟ್ಟಣೆ ಹಾಗೂ ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ