Monkey: Mammal ಎಂಬ ಪದ ಪುರಾತನ ಗ್ರೀಕ್ ಭಾಷೆಯ ಮ್ಯಾಮೆ (mamme) ಪದದಿಂದ ಲ್ಯಾಟಿನ್ ಭಾಷೆಯ ಮಾಮ್ಮಾ (mamma) ಮೂಲಕ ಬಂದದ್ದು. ಕನ್ನಡದಲ್ಲಿ ಇದು ಸಸ್ತನಿ. ತಮ್ಮ ಮರಿಗಳಿಗೆ ಎದೆಹಾಲೂಡಿಸುವ ಪ್ರಾಣಿಗಳು ಸಸ್ತನಿಗಳು. ಜಗತ್ತಿನ ಬಹುತೇಕ ಭಾಷೆಗಳಲ್ಲಿ ತಾಯಿಯನ್ನು ಕರೆಯಲು ಬಳಸುವ ಪದಗಳು, ಉದಾಹರಣೆಗೆ “ಮಾ” / “ಅಮ್ಮಾ” / “mummy” ಇವೆಲ್ಲ ಅದೇ ರೀತಿ ಕೇಳಿಸುವುದು ಅಚ್ಚರಿಯ ವಿಷಯವೇನಲ್ಲ. ನಮ್ಮಲ್ಲಿ ಮೊಲೆ ಕುಡಿಸುವುದಕ್ಕೆ ಅಮ್ಮೀ ಕುಡಿಸುವುದು ಎಂಬ ಬಳಕೆಯಿದೆ. ತಾಯಿಗೂ ಮೊಲೆಹಾಲಿಗೂ ಅಂಥ ಅನ್ಯೋನ್ಯ ಸಂಬಂಧ.
ತಾಯ ಮೊಲೆಹಾಲು ಬಯಸಿ ಅದನ್ನು ಗಟ್ಟಿಯಾಗಿ ಅವುಚಿಕೊಳ್ಳಲೆಳಸುವ ಕೋತಿಮರಿಯ ವಿಡಿಯೋವೊಂದನ್ನು ಇಲ್ಲಿ ಕಾಣಬಹುದು. ಇಲ್ಲಿ ಅದು ಹೃದಯವಿದ್ರಾವಕವಾಗಿರುವುದಕ್ಕೆ ಕಾರಣ ಅದರ ತಾಯಿ ತೀರಿಹೋಗಿದೆ. ಸತ್ತುಹೋಗಿದೆ ಮತ್ತು ಅದರ ಅರಿವು ಮರಿಗೆ ಇಲ್ಲ. ಅದು ಎಂದಿನಂತೆ ತಾಯಿಯ ಮಡಿಲೇರಿ ಮೊಲೆಗೆ ಬಾಯಿ ಹಾಕಿ ಚೀಪುತ್ತಿದೆ. ಆದರೆ ತಾಯಿಯಿಂದ ಯಾವ ಪ್ರತಿಕ್ರಿಯೆಯೂ ಇಲ್ಲ.
ಇದನ್ನೂ ಓದಿ : Viral:ಪ್ರೀತಿಗೆ ಜಯವಾಗಲಿ!; ದೆಹಲಿ ಮೆಟ್ರೋದ ಈ ಜೋಡಿಯನ್ನು ಹುರಿದುಂಬಿಸುತ್ತಿರುವ ನೆಟ್ಟಿಗರು
ತೀರಿದ ತಾಯಿಯಿಂದ ಅದನ್ನು ದೂರಗೊಳಿಸುವಾಗ ಅದು ಪ್ರತಿಭಟಿಸುತ್ತ ಮತ್ತೆ ತಾಯಿಯ ಬಳಿ ಬರುತ್ತಿರುವುದನ್ನು ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರೂರಬೇಕು. ಮಣ್ಣುಮಾಡಲು ಗುಂಡಿ ತೆಗೆದು ಅದರಲ್ಲಿ ಸತ್ತ ಹೆಣ್ಣುಮಂಗವನ್ನು ಮಲಗಿಸಿದಾಗಲೂ ಮರಿ ತಪ್ಪಿಸಿಕೊಂಡು ಹೋಗಿ ತಾಯಿಯ ಪಕ್ಕವೇ ಮಲಗುತ್ತಿದೆ.
ಸಾವು ಎಂಥ ಕ್ರೂರಿಯಲ್ಲವೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:00 pm, Wed, 21 June 23