Viral Video: ‘ಮಮ್ಮಾ ರುಚಿಯಾದ ಸ್ನ್ಯಾಕ್ಸ್ ಮಾಡಿಕೊಡು ಅಂದೆ, ಮುಂದೇನಾಯ್ತು?’

Home-made Fancy Meal : ‘ನಮಗೂ ನಮ್ ಫುಡ್ ತಿನ್ನೋದಕ್ಕೆ ಬೇಜಾರಾಗತ್ತೆ. ಆಗ ನಾನಂತೂ ಅಮ್ಮನಿಗೆ ಕೇಳೇಬಿಡ್ತೀನಿ. ಆಗವರು ನನಗೆ ಈ ‘ಮಜಾ’ ಮಾಡಿಕೊಡ್ತಾರೆ. ಅದು ಏನಂತ ನೋಡಿ, 82ಲಕ್ಷ ಜನ ಈ ವಿಡಿಯೋ ಇಷ್ಟಪಟ್ಟಿದಾರೆ.’

Viral Video: ‘ಮಮ್ಮಾ ರುಚಿಯಾದ ಸ್ನ್ಯಾಕ್ಸ್ ಮಾಡಿಕೊಡು ಅಂದೆ, ಮುಂದೇನಾಯ್ತು?’
ಒಳಗೆ ಆಲೂ ಟಿಕ್ಕಿ ತಯಾರಾಗ್ತಿದೆ!
Edited By: ಶ್ರೀದೇವಿ ಕಳಸದ

Updated on: Aug 23, 2022 | 2:17 PM

Dog : ದಿನಾದಿನಾ ಎಷ್ಟಂತ ಡಾಗ್​ ಫುಡ್​ ತಿನ್ನೋದು? ನೀವು ಮಾತ್ರ ರುಚಿರುಚಿಯಾಗಿ ಏನೇನೋ ಮಾಡಿಕೊಂಡು ತಿಂತೀರಿ. ನಮಗೂ ನೀವು ತಿನ್ನೋದೇ ಬೇಕು ಅಂತ ಹಟ ಹಿಡಿಯೋದು ಹೇಗೆ ಅಂತ ನಾಯಿಬೆಕ್ಕುಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕೆ ತಕ್ಕಹಾಗೆ ತಯಾರಿಸಿಕೊಡುವ ಕೆಲಸವಂತೂ ಪೋಷಕರಿಗೆ ಮತ್ತಷ್ಟು ಇಷ್ಟದ ಕೆಲಸ! ಚಟಪಟ ಅಂತ ಅವುಗಳಿಗೆ ಇಷ್ಟವಾದ ತಿಂಡಿ ಮಾಡಿ ತಿನ್ನಿಸಿದಾಗ ಸಾರ್ಥಕತೆಯಿಂದ ಅವರು ಬೀಗುತ್ತಾರೆ. ಈ ಮ್ಯಾಂಗೋ ಎಂಬ ಗೋಲ್ಡನ್ ರಿಟ್ರೈವರ್ ನಾಯಿಗೆ ಆಲೂಟಿಕ್ಕಿ ಎಂದರೆ ಭಾರೀ ಇಷ್ಟ. ನನಗೆ ಏನಾದರೂ ರುಚಿಯಾಗಿರುವಂಥದ್ದು ಮಾಡಿಕೊಡು ಅಂತ ಅಮ್ಮನಿಗೆ ಕೇಳಿದಾಗ ಏನಾಯ್ತು ಗೊತ್ತಾ ಎಂದು ಈ ವಿಡಿಯೋ ತೆರೆದುಕೊಳ್ಳುತ್ತದೆ. ಆಲೂ, ಜೀರಿಗೆ, ಕಡಲೆ, ಉಪ್ಪು ಇನ್ನೂ ಏನೆಲ್ಲ ಸಾಮಗ್ರಿಗಳಿಂದ ತಯಾರಿಸಲ್ಪಟ್ಟ ಆಲೂಟಿಕ್ಕಿ ತಯಾರಾಗುತ್ತಿದ್ದಂತೆ ಮುಂದೇನಾಗುತ್ತದೆ? ಕಾಯುತ್ತಿರುವವರ ಮೂಗು ಅರಳುತ್ತದೆ, ಬಾಯಲ್ಲಿ ನೀರೂರಲಾರಂಭಿಸುತ್ತದೆ. ಆಮೇಲೆ? ಗುಳುಂ ಗುಳುಂ ಗುಳುಂ!

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಳೆದವಾರ ಪೋಸ್ಟ್ ಆದ ಈ ವಿಡಿಯೋ ಅನ್ನು ಸುಮಾರು 82 ಲಕ್ಷ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ನಿಮ್ಮ ಮಗು ಕೇಳಿದರೆ ಅದಕ್ಕಿಷ್ಟವಾದ ತಿಂಡಿ ಮಾಡಿಕೊಡುತ್ತೀರಲ್ಲವೆ? ಹಾಗೆಯೇ ನಾಯಿಬೆಕ್ಕು ಸಾಕಿದವರು ಅವುಗಳಿಗೆ ಇಷ್ಟವಾದ ರುಚಿತಿನಿಸು ಮಾಡಿ, ತಿನ್ನಿಸಿ ಅವುಗಳ ಮೂಡ್​ ಉಲ್ಲಸಿತಗೊಳಿಸುತ್ತಾರೆ.

ಮಗು ಸಾಕಷ್ಟು ಪ್ರೊಟೀನ್​, ಕಾರ್ಬ್ಸ್​ ತಿನ್ನುತ್ತಿದೆ! ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:10 pm, Tue, 23 August 22

Web contact

TV9 Kannada

Read More
Follow Us