
ಇನ್ನೇನು ಒಲಂಪಿಕ್ಸ್ ಮುಗಿಯಿತು, ಯಾವ ಕ್ರೀಡೆ ನೋಡಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಉತ್ತರ. ಮನುಷ್ಯರಿಗಿಂತ ತಾವೇನು ಕಡಿಮೆ ಇಲ್ಲ ಎಂಬಂತೆ ಗಾಲ್ಫ್ ಕೋರ್ಟ್ನಲ್ಲಿ ಆಟವಾಡುತ್ತಿರುವ ಈ ಕರಡಿ ಮರಿಗಳನ್ನು ನೋಡಿ. ಇಡೀ ಕ್ರೀಡಾಂಗಣದಲ್ಲಿ ಯಾರ ಹಂಗೂ ಇಲ್ಲದೇ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ಆಡಿಕೊಂಡಿವೆ; ಆದರೆ ಗಾಲ್ಫ್ ಅಲ್ಲ. ತಮಗೆ ತೋಚಿದ, ತಮ್ಮದೇ ‘ಬೇಟೆ’ಯ ಆಟವನ್ನು. ಹೌದು. ಗಾಲ್ಫ್ ಕೋರ್ಟ್ ಒಂದಕ್ಕೆ ನುಗ್ಗಿದ ಮೂರು ಕರಡಿ ಮರಿಗಳು ಅಲ್ಲಿದ್ದ ಧ್ವಜದೊಂದಿಗೆ ಆಟವಾಡುತ್ತಿವೆ. ಒಂದು ಕರಡಿ ಮರಿಯಂತೂ ಆ ಧ್ವಜದ ಕಂಬದ ಮೇಲೆ ಹತ್ತುತ್ತಾ, ಇಳಿಯುತ್ತಾ, ಕಚ್ಚುತ್ತಾ ಆಟವಾಡುತ್ತಿದ್ದರೆ, ಮತ್ತೆರಡು ಮರಿಗಳು ಇದರ ಪರಿವೆಯೇ ಇಲ್ಲದೇ ತಮ್ಮಷ್ಟಕ್ಕೆ ತಾವೇ ಆಟವಾಡುತ್ತಿವೆ.
ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವಿಡಿಯೊಕ್ಕೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಡ್ಯಾನಿ ಡೆರೆನಿ ಎಂಬುವವರು ಹಂಚಿಕೊಂಡ ಈ ವಿಡಿಯೊ ಈಗ ವೈರಲ್ ಆಗಿದೆ.
ಮರಿಗಳು ಆಟವಾಡುತ್ತಿರುವ ವಿಡಿಯೊ ಇಲ್ಲಿದೆ.
ನಿನ್ನೆ(ಆಗಸ್ಟ್ 9)ರಂದು ಹಂಚಿಕೊಳ್ಳಲಾದ ಈ ವಿಡಿಯೊಕ್ಕೆ ಈಗಾಗಲೇ 1.5ಲಕ್ಷಕ್ಕೂ ಅಧಿಕ ವೀಕ್ಷಣೆ ದೊರಕಿದೆ. ಹಲವು ಪ್ರಾಣಿ ಪ್ರಿಯರು ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ. ‘‘ನಾವೂ ಅದರೊಂದಿಗೆ ಆಟವಾಡಬೇಕು, ಆದರೆ ಬಹುಶಃ ಅದರ ಅಮ್ಮ ಹತ್ತಿರದಲ್ಲಿರಬಹುದು’’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘‘ಆ ಧ್ವಜದೊಂದಿಗೆ ಆಟವಾಡುತ್ತಿರುವ ಮರಿ ಕರಡಿಗೆ ನಾನು ನೋಡಿದ್ದೇನೆಂದು ತಿಳಿದೇ ಇಲ್ಲ’’ ಎಂದು ನಕ್ಕಿದ್ದಾರೆ. ‘‘ಬಹಳ ಮುದ್ದಾಗಿದೆ. ನಾನೂ ಆ ಮರಿಯಂತೆ ಸ್ವಚ್ಛಂದವಾಗಿ ಮೈದಾನದಲ್ಲಿ ಆಟ ಆಡಬೇಕಿತ್ತು’’ ಎಂದು ಮತ್ತೋರ್ವರು ಬರೆದಿದ್ದಾರೆ.
ಇದನ್ನೂ ಓದಿ:
WhatsApp: ಹೊಸ ಟ್ರಿಕ್: ನಿಮ್ಮ ವಾಟ್ಸ್ಆ್ಯಪ್ ಡಿಪಿಯನ್ನು ಯಾರು ನೋಡಿದ್ದಾರೆಂದು ಹೀಗೂ ತಿಳಿಯಬಹುದು!
ಕರಾಟೆ ಬೆಲ್ಟ್ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಮಗಳು; ಪೊಲೀಸರಿಗೆ ಫೋನ್ ಮಾಡಿ ಸುಳ್ಳು ಹೇಳಿ, ಸಿಕ್ಕಿಬಿದ್ದಳು
(Three baby Bears spotted on Playing in Golf Course)