
ಹಾವು ಕಚ್ಚಿತೆಂದು ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಹಾವನ್ನು ಹಿಡಿದು ಅದರ ತಲೆಗೆ ಕಚ್ಚಿ ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹಾವನ್ನು ಹಿಂಸಿಸಿ ಕೊಂದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಹಾವನ್ನು ಕೊಂದ ವ್ಯಕ್ತಿ ಹಾಗೂ ಆತನೊಂದಿಗೆ ಇದ್ದ ಇಬ್ಬರನ್ನು ಪೋಲಿಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಲಿಸರು ಆರೋಪಿಗಳಾದ ತಮಿಳುನಾಡಿನ ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ
ಮೋಹನ್ ಹಾವನ್ನು ಹಿಡಿದುಕೊಂಡು ಕೈಗೆ ಕಚ್ಚಿದ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಮೋಹನ್ ಜೊತೆಗಿರುವವರು ಹಾವನ್ನು ಬಿಡುವಂತೆ ಹೇಳುತ್ತಿರುವುದು ವಿಡಿಯೋವನ್ನು ಕೇಳುತ್ತಿದೆ. ಆದರೂ ಕೂಡ ಹಾವಿನ ಮೋಹನ್ ಹಾವಿನ ತಲೆಗೆ ಕಚ್ಚಿ ಅದನ್ನು ಹಿಂಸಿಸಿ ಕೊಂದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಪರಿಸರ ಕಾರ್ಯಕರ್ತರು ವನ್ಯಜೀವಿ ಅಪರಾಧ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಹಾವನ್ನು ಹಿಡಿದು ಅದರ ತಲೆಯನ್ನು ಕಚ್ಚಿ ಮೊಬೈಲ್ನಲ್ಲಿ ಚಿತ್ರೀಕರಿಸಿದ ಮೂವರನ್ನು ಬಂಧಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
Published On - 6:22 pm, Sun, 9 April 23