AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸಕ್ಕತ್ತ್​​ ಸ್ಟೆಪ್​​ ಹಾಕಿದ ಮಹಿಳೆ

ಈ ವಿಡಿಯೋದಲ್ಲಿ ಮಹಿಳೆ ಕೆಂಪು ಸೀರೆಯುಟ್ಟು ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಡ್ಯಾನ್ಸ್​​​ ಮಾಡುತ್ತಿರುವುದನ್ನು ಕಾಣಬಹುದು.

Viral Video: ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸಕ್ಕತ್ತ್​​ ಸ್ಟೆಪ್​​ ಹಾಕಿದ ಮಹಿಳೆ
ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಡ್ಯಾನ್ಸ್Image Credit source: Instagram
Follow us
ಅಕ್ಷತಾ ವರ್ಕಾಡಿ
|

Updated on: Apr 06, 2023 | 2:09 PM

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್​ ಮಾಡಿ ಪೋಸ್ಟ್​​ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇತ್ತೀಚೆಗಷ್ಟೇ ಉತ್ತರಪ್ರದೇಶದ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಇನ್‌ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​​​​ ಮಾಡಲು ರಾಜಾರೋಷವಾಗಿ ಕಾರು ಓಡಿಸಿ, ಪೋಲಿಸರಿಗೆ ಅತಿಥಿಯಾಗಿದ್ದ. ಇಂತಹ ಸಾಕಷ್ಟು ವಿಚಾರಗಳು ಪ್ರತೀ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಇದೀಗಾ ಅಂತದ್ದೇ ವಿಡಿಯೋ ಭಾರೀ ವೈರಲ್​ ಆಗಿದೆ. ಮಹಿಳೆಯೊಬ್ಬಳು ದೆಹಲಿನ ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸ್ಟೆಪ್​​ ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರ ಅವ್ನಿಕರಿಶ್ ಮಹಿಳೆಯ ನೃತ್ಯದ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಹಿಳೆ ಕೆಂಪು ಸೀರೆಯುಟ್ಟು ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಡ್ಯಾನ್ಸ್​​​ ಮಾಡುತ್ತಿರುವುದನ್ನು ಕಾಣಬಹುದು. ಯಾರ್ ಬೋಟ್ ಹಿಮ್ಮತ್ ಚಿಯೆ ಮೆಟ್ರೋ ಮೇ ಡ್ಯಾನ್ಸ್ ಕ್ರನೇ ಕಿ (ಮೆಟ್ರೋದಲ್ಲಿ ಈ ತರ ಎನರ್ಜಿಟಿಕ್ಕ್ ಆಗಿ ಡ್ಯಾನ್ಸ್​​ ಮಾಡಲು ಧೈರ್ಯ ಬೇಕು.) ಎಂದು ಕೂಡ ಪೋಸ್ಟ್​​​​​ನಲ್ಲಿ ಕ್ಯಾಪ್ಷನ್​​ ಕೂಡ ಬರೆಯಲಾಗಿದೆ.

ಇದನ್ನೂ ಓದಿ: ಟಿಂಡರ್ ಮ್ಯಾಚ್‌ನಲ್ಲಿ ಪ್ರೀತಿಯ ಬಲೆಗೆ ಬಿದ್ದ ಹಣಕಾಸು ಸಲಹೆಗಾರ; ಲವ್ ಸ್ಕ್ಯಾಮ್​ನಲ್ಲಿ ರೂ.14.8 ಕೋಟಿ ಕಳೆದುಕೊಂಡ!

ಈ ವೀಡಿಯೊವನ್ನು ಫೆಬ್ರವರಿ 16 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು 12,000 ಕ್ಕೂ ಹೆಚ್ಚು ಲೈಕ್​​ ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಕಾಣಬಹುದು. ಕೆಲವೊಂದಿಷ್ಟು ಬಳಕೆದಾರರು ಚೆನ್ನಾಗಿ ಸ್ಟೆಪ್ ಹಾಕಿದ್ದೀರಿ ಎಂದು ಕಾಮೆಂಟ್​ ಮಾಡಿದರೆ, ಇನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಇಂತವುಗಳಿಗೆ ಅವಕಾಶ ಕೊಡಬಾರದು. ಇದು ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರ ಜೊತೆಗೆ ದಂಡ ವಿಧಿಸಬೇಕು ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ