Video Viral: ಬೇಸಿಗೆಗೆ ಹೇಳಿ ಮಾಡಿಸಿದಂತಿದೆ ಈ ಫ್ಯಾನ್​​, ಬಿಗ್ ಬಿ ಅಮಿತಾಭ್ ಬಚ್ಚನ್ ಮೆಚ್ಚುಗೆ

ಸೋಲಾರ್​​ ಚಾಲಿತ ಫ್ಯಾನ್​​​ ತಲೆಯ ಮೇಲೆ ಸಿಕ್ಕಿಸಿಕೊಂಡು ವೃದ್ಧರೊಬ್ಬರು ಬೀದಿಯಲ್ಲಿ ಓಡಾಡುತ್ತಿದ್ದ ವಿಡಿಯೋ ಇದೀಗಾ ಭಾರೀ ವೈರಲ್​​. ಈ ವಿಡಿಯೋವನ್ನು ಮೆಚ್ಚಿ ಬಾಲಿವುಡ್‌ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ತಮ್ಮ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದಾರೆ.

Video Viral: ಬೇಸಿಗೆಗೆ ಹೇಳಿ ಮಾಡಿಸಿದಂತಿದೆ ಈ ಫ್ಯಾನ್​​, ಬಿಗ್ ಬಿ ಅಮಿತಾಭ್ ಬಚ್ಚನ್ ಮೆಚ್ಚುಗೆ
ಸೋಲಾರ್​​ ಚಾಲಿತ ಫ್ಯಾನ್​​​ ತಲೆಯ ಮೇಲೆ ಸಿಕ್ಕಿಸಿಕೊಂಡು ವೃದ್ಧImage Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:Apr 04, 2023 | 4:10 PM

ಸೋಲಾರ್​​ ಚಾಲಿತ ಫ್ಯಾನ್​​​ ತಲೆಯ ಮೇಲೆ ಸಿಕ್ಕಿಸಿಕೊಂಡು ವೃದ್ಧರೊಬ್ಬರು ಬೀದಿಯಲ್ಲಿ ಓಡಾಡುತ್ತಿದ್ದ ವಿಡಿಯೋ ಇದೀಗಾ ಭಾರೀ ವೈರಲ್​​. ಈ ವಿಡಿಯೋವನ್ನು ಮೆಚ್ಚಿ ಬಾಲಿವುಡ್‌ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ತಮ್ಮ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದಾರೆ. ಏಪ್ರಿಲ್​​ 3 ರಂದು ಅಮಿತಾಭ್​​​ರವರ ಅಧಿಕೃತ ಟ್ವಿಟರ್​​ ಖಾತೆಯಿಂದ ಪೋಸ್ಟ್​​​ ಮಾಡಲಾದ ಈ ವಿಡಿಯೋ ಇದೀಗಾಗಲೇ 7ಲಕ್ಷದ 17 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಭಾರತ ಹೊಸ ಆವಿಷ್ಕಾರಗಳಿಗೆ ತಾಯಿ, ಅಂದರೆ ಅವಿಷ್ಕಾರಗಳಿಗೆ ಮೂಲ ಸ್ಪೂರ್ತಿ, ಭಾರತ್ ಮಾತಾ ಕೀ ಎಂದು ಕ್ಯಾಪ್ಷನ್​ ಕೂಡ ಬರೆಯಲಾಗಿದೆ . ಆಪೋಸ್ಟ್​​​ ಇಲ್ಲಿದೆ ನೋಡಿ.

ಬೇಸಿಗೆಯ ಸೆಕೆ ಬೆವರಿನಿಂದಾಗಿ ಬಿಸಿಲಿಗೆ ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ವೃದ್ಧರೊಬ್ಬರು ಸೌರ ಶಕ್ತಿ ಚಾಲಿತ ಫ್ಯಾನ್​​ನ್ನು ತಲೆಗೆ ಸಿಕ್ಕಿಸಿಕೊಂಡು ಮಟ ಮಟ ಮಧ್ಯಾಹ್ನದ ಸುಡು ಬಿಸಿಲಿಗೂ ಬೀದಿ ಬೀದಿಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ತಲೆಯ ಮುಂಭಾಗದಲ್ಲಿ ಅಂದರೆ ಮುಖಕ್ಕೆ ಸರಿಯಾಗಿ ಗಾಳಿ ಬೀಸುವಂತೆ ಫ್ಯಾನ್​​​ ಫಿಕ್ಸ್​​ ಮಾಡಲಾಗಿದೆ. ಹಾಗೆಯೇ ತಲೆಯ ಹಿಂಭಾಗದಲ್ಲಿ ಸೋಲರ್​​ ಅಳವಡಿಸಲಾಗಿದೆ.

ಇದನ್ನೂ ಓದಿ: ಕೇವಲ 49 ರೂ. ಹೂಡಿಕೆ ಮಾಡಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ

ಅಮಿತಾಭ್ ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ ಸಾಕಷ್ಟು ಲೈಕ್​ ಹಾಗೂ ಕಾಮೆಂಟ್​​ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಬಳಕೆದಾರರು ಈ ವಿಡಿಯೋಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರರು ಭಾರತೀಯರಲ್ಲಿ ಸಾಮರ್ಥ್ಯ ಮತ್ತು ಕೌಶಲ್ಯದ ಕೊರತೆಯಿಲ್ಲ, ಸರ್ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:01 pm, Tue, 4 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್