AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಿಸ್ತೂಲಿನಿಂದ ಕೇಕ್ ಕಟ್​​ ಮಾಡಿ ಹುಟ್ಟು ಹಬ್ಬದಂದೇ ಜೈಲು ಸೇರಿದ ವ್ಯಕ್ತಿ

ವ್ಯಕ್ತಿಯೊಬ್ಬ ತನ್ನ ಹುಟ್ಟು ಹಬ್ಬದಂದು ಪೊಲೀಸರ ಕೈಯಿಂದ ಭರ್ಜರಿ ಗಿಫ್ಟ್​​ ಪಡೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Viral Video: ಪಿಸ್ತೂಲಿನಿಂದ ಕೇಕ್ ಕಟ್​​ ಮಾಡಿ ಹುಟ್ಟು ಹಬ್ಬದಂದೇ ಜೈಲು ಸೇರಿದ ವ್ಯಕ್ತಿ
Image Credit source: iStock
ಅಕ್ಷತಾ ವರ್ಕಾಡಿ
|

Updated on:Apr 02, 2023 | 6:32 PM

Share

ಮುಖ್ಯಾಂಶಗಳು

  • ವ್ಯಕ್ತಿಯೊಬ್ಬ ತನ್ನ ಹುಟ್ಟು ಹಬ್ಬದಂದು ಪೊಲೀಸರ ಕೈಯಿಂದ ಭರ್ಜರಿ ಗಿಫ್ಟ್​​ ಪಡೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
  • ಹುಟ್ಟು ಹಬ್ಬದಂದು ಸಾಮಾನ್ಯವಾಗಿ ಚಾಕುವಿನಿಂದ ಕೇಕ್​​ ಕಟ್​​ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸ್ವಲ್ಪ ಢಿಪರೆಂಟ್​​ ಆಗಿರಲಿ ಎಂದು ಪಿಸ್ತೂಲ್‌ನಿಂದ ಕೇಕ್​​ ಕಟ್ ಮಾಡಿದ್ದಾನೆ.
  • ರಾಷ್ಟ್ರ ರಾಜಧಾನಿಯ ನೆಬ್ ಸರೈ ಪ್ರದೇಶದಿಂದ ಆರೋಪಿಯನ್ನು ಬಂಧಿಸಿ, ಆತ ಬಳಸಿದ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಹುಟ್ಟು ಹಬ್ಬದಂದು ಪೊಲೀಸರ ಕೈಯಿಂದ ಭರ್ಜರಿ ಗಿಫ್ಟ್​​ ಪಡೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹುಟ್ಟು ಹಬ್ಬದಂದು ಸಾಮಾನ್ಯವಾಗಿ ಚಾಕುವಿನಿಂದ ಕೇಕ್​​ ಕಟ್​​ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸ್ವಲ್ಪ ಢಿಪರೆಂಟ್​​ ಆಗಿರಲಿ ಎಂದು ಪಿಸ್ತೂಲ್‌ನಿಂದ ಕೇಕ್​​ ಕಟ್ ಮಾಡಿದ್ದಾನೆ. ಇದಲ್ಲದೇ ತನ್ನ ಸಾಹಸವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆತ ಪಿಸ್ತೂಲ್‌ನಿಂದ ಕೇಕ್​​ ಕಟ್ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್​​ ಟ್ವಿಟರ್​​​ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಭಾರೀ ವೈರಲ್​ ಆಗಿದೆ. ಆ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಕೊರಿಯನ್ Vs ಭಾರತೀಯ ಆಫೀಸ್ ಡಿನ್ನರ್: ಯಾವುದು ಉತ್ತಮ; ಕೋರಿಯನ್ ಮಹಿಳೆ ಹೇಳಿದ್ದೇನು?

ರಾಷ್ಟ್ರ ರಾಜಧಾನಿಯ ನೆಬ್ ಸರೈ ಪ್ರದೇಶದಿಂದ ಆರೋಪಿಯನ್ನು ಬಂಧಿಸಿ, ಆತ ಬಳಸಿದ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಪೊಲೀಸರು ಹಂಚಿಕೊಂಡ ವೀಡಿಯೊವು 35 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಭದ್ರತಾ ಪಡೆಗಳ ಕ್ರಮವನ್ನು ಸಾಕಷ್ಟು ಬಳಕೆದಾರರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:32 pm, Sun, 2 April 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More