ಸಾಬೂನಿನ ನೊರೆಯಿಂದ ತಯಾರಿಸಿದಂತಿರುವ ವಿಶೇಷ ಡೆಸಾರ್ಟ್ ವೈರಲ್​​

ಈ ವಿಶೇಷ ಡೆಸಾರ್ಟ್ ಮಾರ್ಚ್​ 17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಲಾಗಿದ್ದು, ಇದೀಗಾಗಲೇ 20ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ.

ಸಾಬೂನಿನ ನೊರೆಯಿಂದ ತಯಾರಿಸಿದಂತಿರುವ ವಿಶೇಷ ಡೆಸಾರ್ಟ್ ವೈರಲ್​​
Viral VideoImage Credit source: Facebook
Follow us
ಅಕ್ಷತಾ ವರ್ಕಾಡಿ
|

Updated on:Mar 19, 2023 | 3:10 PM

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್​​ ವಿಡಿಯೋ​​​ ಕಂಡುಬರುತ್ತಿದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವು ವಿಡಿಯೋಗಳು ಜನರಿಗೆ ಇಷ್ಟವೆಂದೆನಿಸಿದರೂ ಕೂಡ, ಇನ್ನು ಕೆಲವು ಹಾಸ್ಯಸ್ಪದವಾಗಿ ಕಂಡುಬರುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ತಯಾರಿಸಲಾದ ವಿಶೇಷ ಡೆಸರ್ಟ್ ಸಾಬೂನಿನ ನೊರೆಯಿಂದ ತಯಾರಿಸಿದಂತಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಈ ವಿಶೇಷ ಡೆಸರ್ಟ್ ಮಾರ್ಚ್​ 17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಲಾಗಿದ್ದು, ಇದೀಗಾಗಲೇ 20ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.

ಈ ವಿಡಿಯೋದಲ್ಲಿ ದುಬಾರಿ ಹೋಟೆಲ್​​ ಒಂದರ ಬಾಣಸಿಗರೊಬ್ಬರು ಸಕ್ಕರೆಯ ಪಾಕದಂತಿರುವ ನೊರೆಗಳನ್ನು ತಂದು ಪ್ಲೇಟಿನ ಮೇಲೆ ತೇಲಿಸಿದಂತೆ ಇಡುವುದನ್ನು ಕಾಣಬಹುದು. ಆದರೆ ಈ ವಿಭಿನ್ನ ಡೆಸರ್ಟ್ ಏನು ಎಂಬುದು ತಿಳಿದಿಬಂದಿಲ್ಲ. ಆದರೆ ಇದರ ಬೆಲೆಯಂತೂ ದುಬಾರಿಯಾಗಿರುವುದು ಖಂಡಿತಾ.

ಇದನ್ನೂ ಓದಿ: ಮಟ್ಕಾ ಟೀ ಕುಡಿದಿರುತ್ತೀರಿ, ಆದ್ರೆ ಮಟ್ಕಾ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ

ವೀಡಿಯೊವನ್ನು ಫೇಸ್​​ ಬುಕ್​ನ LADbibleAustralia ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್​ 17ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 20 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಜೊತೆಗೆ 8.8ಸಾವಿರ ಲೈಕುಗಳು ಹಾಗೂ 1.3ಸಾವಿರಕ್ಕಿಂತಲೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಫೇಸ್​​ ಬುಕ್​​ ಬಳಕೆದಾರರೊಬ್ಬರು ಈ ಸಿಹಿಭಕ್ಷ್ಯದ ವಿನ್ಯಾಸವನ್ನು ಸೋಪ್ ಗುಳ್ಳೆಗಳಿಗೆ ಹೋಲಿಸಿದ್ದಾರೆ. ಮತ್ತೊಬ್ಬ ಬಳಕೆದಾರ ನಾನು ಬಾಲ್ಯದಲ್ಲಿ ಹೀಗೆಯೇ ಸೋಪಿನಿಂದ ಗುಳ್ಳೆಗಳನ್ನು ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:08 pm, Sun, 19 March 23