AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್

ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಮುಸ್ಲಿಂ ಯುವಕ ಆಜಾನ್ ಕೂಗಿದ್ದು ಪೊಲೀಸರು ಮತ್ತು ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿಯಾಗಿದೆ.

ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್
ಆಜಾನ್ ಕೂಗಿದ ಯುವಕ
Follow us
ಆಯೇಷಾ ಬಾನು
|

Updated on:Mar 19, 2023 | 12:49 PM

ಶಿವಮೊಗ್ಗ: ಜಿಲ್ಲೆಯ ಡಿಸಿ ಕಚೇರಿ ಆವರಣದಲ್ಲಿ(Shivamogga DC Office) ನಿಂತು ಯುವಕನೋರ್ವ ಆಜಾನ್(Azaan) ಕೂಗಿದ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದೆ.  ಕೆಎಸ್​ ಈಶ್ವರಪ್ಪ(KS Eshwarappa) ಆಜಾನ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವಕ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದ. ವಿಡಿಯೋ ವೈರಲ್ ಆಗಿದೆ.

ಆಜಾನ್ ಹಾಗೂ ಅಲ್ಲಾಹು ಬಗ್ಗೆ ಮಾಜಿ‌ ಸಚಿವ ಈಶ್ವರಪ್ಪ ಅವಹೇಳನ ಮಾಡಿದ ಆರೋಪ ಹಿನ್ನೆಲೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈಶ್ವರಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹಾಕಿದ್ದರು. ಪ್ರತಿಭಟನೆ ವೇಳೆ ಮುಸ್ಲಿಂ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿ ಉದ್ದಟತನ ಪ್ರದರ್ಶಿಸಿದ್ದ. ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಯುವಕ ಆಜಾನ್ ಕೂಗುತ್ತಿದ್ದಂತೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು ಈ ವೇಳೆ ಪೊಲೀಸರು ಹಾಗು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗದಂತೆ ಪೊಲೀಸರು ತಾಕೀತು ಮಾಡಿದ್ದರು. ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ. ಇದು ತಾಯಿ ಬಗ್ಗೆ ಮಾತನಾಡಿದ್ದಲ್ಲ, ಅಲ್ಲ ಬಗ್ಗೆ ಮಾತನಾಡಿದ್ದು ಎಂದು ಮತ್ತೋರ್ವ ಯುವಕ ಆಕ್ರೋಶ ಹೊರ ಹಾಕಿದ್ದ. ಬಳಿಕ ಮುಸ್ಲಿಂ ಮುಖಂಡರೆ ಮುಂದೆ ಬಂದು ಜನರಿಗೆ ಬುದ್ದಿ ಹೇಳಿ ಯುವಕನಿಗೆ ಬೈದು ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ವಾಪಸ್ ಕಳುಹಿಸಿದ್ದರು.

ರಾಜ್ಯದಲ್ಲಿ ಇಂತಹ ಘಟನೆ ಪ್ರಾರಂಭ ಆಗುವುದಕ್ಕೆ ಬಿಜೆಪಿ ಕಾರಣ -ಹೆಚ್​ಡಿಕೆ

ಇನ್ನು ಘಟನೆ ಸಂಬಂಧ ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ H.D.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿ ಕಚೇರಿ ಮೇಲೆ ಆಜಾನ್ ಕೂಗಿರುವುದು ಸೂಕ್ಷ್ಮವಾದ ವಿಚಾರ. ರಾಜ್ಯದಲ್ಲಿ ಇಂತಹ ಘಟನೆ ಪ್ರಾರಂಭ ಆಗುವುದಕ್ಕೆ ಬಿಜೆಪಿ ಕಾರಣ. ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವೂ ಇದೆ. ಇವತ್ತು ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಚಿತಾವಣೆ ಮಾಡುವವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಆಜಾನ್​​ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ -ಈಶ್ವರಪ್ಪ ಸ್ಪಷ್ಟನೆ

ಕೆಎಸ್​ ಈಶ್ವರಪ್ಪ ನೀಡಿದ ಹೇಳಿಕೆ ಏನು?

ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ ಭಾಷಣ ಮಾಡುತ್ತಿದ್ದ ವೇಳೆ ಸ್ಥಳೀಯ ಮಸೀದಿಯಿಂದ ಆಜಾನ್‌ ಕೇಳಿ ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಆಜಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು.

ನಾನು ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಅನ್ನುತ್ತೇವೆ. ಸುಪ್ರೀಂಕೋರ್ಟ್ ಆದೇಶವಿದ್ದು ಇಂದಲ್ಲ, ನಾಳೆ ಈ ಸಮಸ್ಯೆ ಇತ್ಯರ್ಥವಾಗಲಿದೆ. ಇದರಲ್ಲಿ ಯಾವುದೇ ಅನುಮಾನಬೇಡ. ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಮೈಕ್‌ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳುವುದಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ‌. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂಥಹ ದೇಶ ಭಾರತ ಮಾತ್ರ ಎಂದು ಹೇಳಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:19 am, Sun, 19 March 23

ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ