ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಆಜಾನ್ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ -ಈಶ್ವರಪ್ಪ ಸ್ಪಷ್ಟನೆ
ಕೆ.ಎಸ್.ಈಶ್ವರಪ್ಪ ತಮ್ಮ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಧಾರ್ಮಿಕ ನಿಂದನೆ ಮಾಡಿಲ್ಲ. ಆದ್ರೆ ಆಜಾನ್ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ ಎಂದರು.
ಮಂಗಳೂರು: ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಎಂದು ಆಜಾನ್ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾನು ಧಾರ್ಮಿಕ ನಿಂದನೆ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ನಾನು ಧಾರ್ಮಿಕ ನಿಂದನೆ ಮಾಡಿಲ್ಲ. ಆದ್ರೆ ಆಜಾನ್ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ ಎಂದು ಮಂಗಳೂರು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯ ಸಂಕಲ್ಪ ಯಾತ್ರೆ ಸಂಬಂಧ ಈಶ್ವರಪ್ಪ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಅವರು ಆಜಾನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅಲ್ಲಾನಿಗೆ ಕಿವಿ ಇದೆ ಇಲ್ವಾ ಅಂತಾ ನಾನು ಹೇಳಿದ್ದು ನಿಜ. ಇದು ಧಾರ್ಮಿಕ ನಿಂದನೆ ಮಾಡಿದಂತೆ ಆಗಿಲ್ಲ. ಅದನ್ನು ರಾಜ್ಯದ ಜನರು ತೀರ್ಮಾನ ಮಾಡ್ತಾರೆ. ಸುಪ್ರೀಂ ಕೋರ್ಟ್ ತೀರ್ಪು ಇದ್ರೂ ಜಾರಿ ಆಗಿಲ್ಲ ಎಂದರು.
ಇದನ್ನೂ ಓದಿ: ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಆಜಾನ್ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಪಕ್ಷ ನಂಬಿದರೆ ಮುಸಲ್ಮಾನರಿಗೆ ಉಳಿಗಾಲ ಇಲ್ಲ
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲಿ BJP ಪೂರ್ಣ ಬಹುಮತ ಪಡೆಯಲಿದೆ. ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಮಾಡ್ತಾ ಇದೆ. ಯಾಕಂದ್ರೆ ಅವರ ಮೇಲೆ ಭ್ರಷ್ಟಾಚಾರ ಆರೋಪ ಇದೆ. ಡಿಕೆ ಶಿವಕುಮಾರ್ ದೆಹಲಿ ಮನೆಯಲ್ಲಿ ಸಿಕ್ಕ ಹಣ ಎಷ್ಟು ಅಂತ ಜನ ನೋಡಿದ್ದಾರೆ. ತಿಹಾರ್ ಜೈಲಿಗೆ ಹೋಗಿ ಈಗ ಜಾಮೀನಿನಲ್ಲಿ ಇದ್ದಾರೆ. ಮತ್ತೆ ಯಾವಾಗ ಜೈಲಿಗೆ ಹೋಗ್ತಾರೆ ಗೊತ್ತಿಲ್ಲ. ಅರ್ಕಾವತಿ ಡಿ ನೋಟಿಫಿಕೇಷನ್ ಅವ್ಯವಹಾರ ಸಾಬೀತಾಗಿದೆ. 40% ವಿಚಾರವಾಗಿ ಒಂದೇ ಒಂದು ಕೇಸ್ ಕೂಡಾ ಹಾಕಿಲ್ಲ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಅಂತ ಕೇಸ್ ಹಾಕಲಾಗಿದೆ. ಈ ಚುನಾವಣೆಯಲ್ಲಿ ಎಲ್ಲವನ್ನೂ ಜನರೇ ತೀರ್ಮಾನ ಮಾಡ್ತಾರೆ. ಮಾಡಳ್ ಅವರು ಜೈಲಿನಿಂದ ಬಂದಾಗ ಮೆರವಣಿಗೆ ಮಾಡಿದ್ದು ತಪ್ಪು. ಹಿಂದೆ ಡಿಕೆಶಿ ತಿಹಾರ್ ಜೈಲಿನಿಂದ ಬಂದಾಗ ಮೆರವಣಿಗೆ ಮಾಡಿದ್ರು. ಚುನಾವಣೆಯಲ್ಲಿ ಏನು ಪರಿಣಾಮ ಬೀರೊತ್ತೆ ಅಂತ ನಾವು ಸಿದ್ದಾಂತ ಬಿಡಲಾರೆವು.
ಅಭಿವೃದ್ಧಿ ವಿಚಾರದ ಬಗ್ಗೆಯೂ ಸಭೆಯಲ್ಲಿ ಮಾತನಾಡಿದ್ದೇವೆ. ರಾಜಕೀಯ ಲಾಭ ಮಾತ್ರ ನಮ್ಮ ಉದ್ದೇಶ ಅಲ್ಲ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದು ಲಾಭಕ್ಕೆ ಅಲ್ಲ. ಕೇವಲ ರಾಜಕಾರಣ ಮಾಡಲ್ಲ ಹಾಗಂತ ನಾವು ಸನ್ಯಾಸಿಗಳಲ್ಲ. ನಾನು ಶಾಸಕನಾಗಿ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಮನೆಗೆ ಹಲವು ಮುಸ್ಲಿಂ ಮಹಿಳೆಯರು ಬರ್ತಾರೆ. ಅವರಿಗೆ ಸಹಾಯ ಮಾಡುವುದರಲ್ಲಿ ಧರ್ಮ ನೋಡಿಲ್ಲ. ಕಾಂಗ್ರೆಸ್ ಪಕ್ಷ ನಂಬಿದ್ರೆ ಮುಸಲ್ಮಾನರಿಗೆ ಉಳಿಗಾಲ ಇಲ್ಲ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:03 pm, Mon, 13 March 23