AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯ ತಾಯಿ ಬಳಿ ಹೋಂಗಾರ್ಡ್ ಹಣ ವಸೂಲಿ ಮಾಡಿದ ಪ್ರಕರಣ, ಹೊರಬಿತ್ತು ತಾಯಿಯ ಮಸಾಜ್ ಪಾರ್ಲರ್​​ನ ಚಿನ್ನದ ಕಥೆ!

ನಟಿಯ ತಾಯಿಯೊಬ್ಬರು ಮೂರ್ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ವತಃ ಎರಡು ಕಡೆ ಮಸಾಜ್ ಪಾರ್ಲರ್ ನಡೆಸುತ್ತಿದ್ರು. ಮಾಜಿ ಹೋಮ್ ಗಾರ್ಡ್ ಅವರ ಮನೆಗೆ ನುಗ್ಗಿ ಎರಡು ಬಾರಿ ಬ್ಲಾಕ್ ಮೇಲ್ ಮಾಡಿ, ಒಟ್ಟು 38 ಸಾವಿರ ಹಣ ವಸೂಲಿ ಮಾಡಿದ್ದ. ಆದರ ಮುಂದಿನದ್ದೇ ಕುತೂಹಲಕಾರಿ ಸ್ಟೋರಿ!

ನಟಿಯ ತಾಯಿ ಬಳಿ ಹೋಂಗಾರ್ಡ್ ಹಣ ವಸೂಲಿ ಮಾಡಿದ ಪ್ರಕರಣ, ಹೊರಬಿತ್ತು ತಾಯಿಯ ಮಸಾಜ್ ಪಾರ್ಲರ್​​ನ ಚಿನ್ನದ ಕಥೆ!
ಹೊರಬಿತ್ತು ನಟಿ ತಾಯಿಯ ಮಸಾಜ್ ಪಾರ್ಲರ್​​ ಚಿನ್ನದ ಕಥೆ!
TV9 Web
| Edited By: |

Updated on: Mar 14, 2023 | 6:51 AM

Share

ಮಂಗಳೂರಿನ (Mangaluru) ನಟಿ ಓರ್ವಳ ತಾಯಿ ಬಳಿ ನಕಲಿ ಪೊಲೀಸ್ ವೇಷಧಾರಿಯೊಬ್ಬ ಹಣ ವಸೂಲಿ ಮಾಡಿದ ಪ್ರಕರಣಕ್ಕೆ (Blackmail) ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಂದರ್ ಆಗಿದ್ದು ಆತ ಪೊಲೀಸ್ ಅಲ್ಲ ಅನ್ನೊದು ಗೊತ್ತಾಗಿದೆ. ಆದ್ರೆ ಆತ ಮಾಜಿ ಹೋಮ್ ಗಾರ್ಡ್ (Home Guard) ಆಗಿದ್ದಾನೆ. ಪೊಲೀಸ್ ತನಿಖೆ ವೇಳೆ ಆತ ಮಸಾಜ್ ಪಾರ್ಲರ್ ನ ಚಿನ್ನದ ಕಥೆ ಹೇಳುತ್ತಿದ್ದಾನೆ. ಈ ಪಾರ್ಲರ್ ನ ಚಿನ್ನದ ಕಥೆ ಏನು. ಈ ಸ್ಟೋರಿ ನೋಡಿ. ವೇಶ್ಯಾವಾಟಿಕೆ ಹೆಸರಿನಲ್ಲಿ ಪೊಲೀಸರು ಹಣ ಪೀಕಿದ್ದಾರೆ ಅನ್ನೊ ಆರೋಪ ಕೇಳಿಬಂದಿತ್ತು. ಪ್ರಕರಣದ ಆರೋಪಿ ಬಂಧನವಾಗಿದ್ದಾನೆ. ಹಣ ವಸೂಲಿ ಮಾಡಿದ್ದು ಪೊಲೀಸ್ ಅಲ್ಲ ಅನ್ನೊದು ಈಗ ಬೆಳಕಿಗೆ ಬಂದಿದೆ. ಆದ್ರೆ ಆತ ಮಾಜಿ ಹೋಮ್ ಗಾರ್ಡ್ ಆಗಿದ್ದವನು. ಈ ಮಾಜಿ ಹೋಮ್ ಗಾರ್ಡ್ ಈಗ ಬಂಧಿತ ಆರೋಪಿಯಾಗಿದ್ದಾನೆ (Arrest).

ಆ ಮಹಿಳೆ ಮಂಗಳೂರು ನಿವಾಸಿ. ಮೂರ್ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ವತಃ ಎರಡು ಕಡೆ ಮಸಾಜ್ ಪಾರ್ಲರ್ ನಡೆಸುತ್ತಿದ್ರು. ಈಗ ಮಕ್ಕಳೊಂದಿಗೆ ಮನೆಯಲ್ಲೇ ಇದ್ದಾರೆ. ಈಕೆಯ ಮಗಳು ಸಿನಿಮಾ ನಟಿ. ಈಕೆ ತನ್ನ ಮನೆಯಲ್ಲಿದ್ದಾಗ ಪೊಲೀಸ್ ವೇಷ ಹಾಕಿ ಬಂದ ಈ ಮಾಜಿ ಹೋಮ್ ಗಾರ್ಡ್ ಶಿವರಾಜ್ ದೇವಾಡಿಗೆ ತಾನು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಅಂತಾ ಪರಿಚಯಿಸಿಕೊಂಡಿದ್ದಾನೆ.

ನಿಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತಾ ದೂರು ಬಂದಿದೆ. ಸಾಹೇಬ್ರು ರೈಡ್ ಮಾಡುತ್ತಾರೆ. ಅವರು ರೈಡ್ ಮಾಡಬಾರದು ಅಂದ್ರೆ 20 ಸಾವಿರ ಹಣ ನೀಡಿ ಅಂತಾ ಎರಡು ಬಾರಿ ಬ್ಲಾಕ್ ಮೇಲ್ ಮಾಡಿ ಒಟ್ಟು 38 ಸಾವಿರ ಹಣ ವಸೂಲಿ ಮಾಡಿದ್ದ. ಈ ಬಗ್ಗೆ ಟಿವಿ9 ನಲ್ಲಿ ವರದಿ ಪ್ರಸಾರವಾಗಿತ್ತಿದ್ದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಆರೋಪಿ ಶಿವರಾಜ್ ದೇವಾಡಿಗನನ್ನು ಬಂಧಿಸಿದ್ದಾರೆ. ಬಂಧಿತ ಶಿವರಾಜ್ ದೇವಾಡಿಗೆ ಬೇರೆಯೆ ಕತೆಯನ್ನು ಹೇಳುತ್ತಿದ್ದಾನೆ. ಈ ಮಹಿಳೆ ನಡೆಸುತ್ತಿದ್ದ ಪಾರ್ಲರ್ ಗೆ ಗಿರಾಕಿಯಾಗಿ ಹೋಗಿದ್ದಾಗ ಆಕೆ ನನ್ನನ್ನು ಬ್ಲಾಕ್ ಮೇಲ್ ಮಾಡಿದ್ರು. ಕಿರುಚಿಕೊಂಡು ಹೊರಗಡೆ ಹೋಗಿ ನನಗೆ ಕಿರುಕುಳ ನೀಡಿದ ಅಂತಾ ಹೇಳುತ್ತೇನೆ ಅಂತಾ ಹೇಳಿ, ನನ್ನ ಬಳಿಯಿದ್ದ ಚಿನ್ನದ ಚೈನ್ ಕಿತ್ತುಕೊಂಡಿದ್ರು. ಆದ್ರಿಂದ ನಾನು ಈಕೆಗೆ ಹೀಗೆ ಬ್ಲಾಕ್ ಮೇಲ್ ಮಾಡಿ ಹಣವನ್ನು ವಸೂಲಿ ಮಾಡಿದೆ ಅಂತಾ ಹೇಳಿದ್ದಾನೆ ಬಂಧಿತ ಆರೋಪಿ ಶಿವರಾಜ್ ದೇವಾಡಿಗ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಹಿಳೆ, ಈತ ನನ್ನ ಕಸ್ಟಮರ್ ಆಗರಲಿಲ್ಲ. ಆ ವ್ಯಕ್ತಿಯನ್ನು ನಾನು ಅವತ್ತು ಮೊದಲನೇ ಸಲ ನೋಡಿದ್ದು. ನಾನು ಆತನ ಬಳಿ ಯಾವುದೇ ಚಿನ್ನದ ಚೈನ್ ಕಿತ್ತುಕೊಂಡಿಲ್ಲ. ಆತನೇ ಸುಳ್ಳು ಹೇಳುತ್ತಿದ್ದಾನೆ ಅಂತಾ ಮಹಿಳೆ ಹೇಳಿದ್ದಾರೆ.

ಸದ್ಯ ಕಾವೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೋಮ್ ಗಾರ್ಡ್ ಆಗಿದ್ದ ಶಿವರಾಜ್ ಗೆ ಪೊಲೀಸರ ಹಾವಭಾವ ಗೊತ್ತಾಗಿದ್ದಿದ್ದರಿಂದ ಅವರ ರೀತಿ ಆಕ್ಟಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾನೆ. ಇನ್ನು ಆರೋಪಿ ಪ್ರಕಾರ ಚಿನ್ನದ ಚೈನ್ ವಸೂಲಿ ರಿವೇಂಜ್ ಆಗಿದೆ. ಆದ್ರೆ ಪೊಲೀಸ್ ತನಿಖೆಯಲ್ಲಿ ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9, ಮಂಗಳೂರು 

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!