ಸಿದ್ದರಾಮಯ್ಯರನ್ನ ಸೋಲಿಸಿದ ನಾಯಕನ ಪುತ್ರನ ಪರ ಪ್ರಾಚರಕ್ಕೆ ಬಂದ ಕುರುಬ ಸಮುದಾಯದ ಮುಖಂಡರಿಗೆ ಯುವಕ ಕ್ಲಾಸ್, ವಿಡಿಯೋ ವೈರಲ್

ಸಿದ್ದರಾಮಯ್ಯರನ್ನ ಸೋಲಿಸಿದ ನಾಯಕನ ಪುತ್ರನ ಪರ ಪ್ರಾಚರಕ್ಕೆ ಬಂದ ಕುರುಬ ಸಮುದಾಯದ ಮುಖಂಡರಿಗೆ ಯುವಕ ಕ್ಲಾಸ್, ವಿಡಿಯೋ ವೈರಲ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 05, 2023 | 9:22 AM

ಜೆಡಿಎಸ್ ಪರ ಮತ ಕೇಳಲು ಬಂದ ಕುರುಬ ಸಮಾಜದ ಮುಖಂಡರಿಗೆ ಯುವಕನೊಬ್ಬ ತರಾಟೆಗೆ ತೆಗೆದುಕೊಂಡಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮೈಸೂರು:  ಜೆಡಿಎಸ್ ಪರ ಮತ ಕೇಳಲು ಬಂದ ಕುರುಬ ಸಮಾಜದ ಮುಖಂಡರಿಗೆ ಯುವಕನೊಬ್ಬ ತರಾಟೆಗೆ ತೆಗೆದುಕೊಂಡಿದ್ದಾನೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ. ಬೀರತಮ್ಮನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ. ಹರೀಶ್ ಗೌಡ ಪರ ಮತ ಕೇಳಲು ಬಂದಿದ್ದ ಕುರುಬ ಸಮಾಜದ ಮುಖಂಡರಿಗೆ ಯುವಕ ಮಹೇಶ್ ಕ್ಲಾಸ್ ತೆಗೆದುಕೊಂಡಿದ್ದಾನೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ ನಾಯಕನ ಮಗನ ಪರ ಪ್ರಚಾರ ಮಾಡಲು ಬಂದು ತಮ್ಮ ಕುರುಬ ಸಮುದಾಯದ ಮುಖಂಡರ ಮೇಲೆ ಗರಂ ಆಗಿದ್ದಾನೆ.

ಕುರುಬ ಸಮಾಜದ ಹೆಸರೇಳಿಕೊಂಡು ನೀವು ಹೀಗೆ ಊರೂರು ತಿರುಗುವುದು ಸರೀನಾ ? ನಮ್ಮ ಸಮಾಜದ ಅಧ್ಯಕ್ಷರಿಲ್ಲವೇ ಪದಾಧಿಕಾರಿಗಳಿಲ್ಲವೇ ? ನೀವು ಕುರುಬ ಸಮಾಜದ ಹೆಸರು ಹೇಳಿಕೊಂಡು ಈ ರೀತಿ ಜೆಡಿಎಸ್ ಪರ ಮತ ಕೇಳುವುದು ಸರಿಯೇ ? ಕುರುಬ ಸಮಾಜದ ಮುಖಂಡರಾಗಿ ನಮ್ಮ ಸಮುದಾಯದ ನಾಯಕನನ್ನೇ ಸೋಲಿಸುವುದು ಸರೀನಾ ? ಎಂದು ಪ್ರಶ್ನಿಸಿದ್ದಾನೆ. ಇದೀಗ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.