Karnataka Assembly Polls: ಬಾಗಲಕೋಟೆಯ ಹಿರೇಬಾಗೇವಾಡಿ ಟೋಲ್ ಬಳಿ ದಾಖಲೆರಹಿತ ರೂ. 2 ಕೋಟಿ ಪೊಲೀಸ್ ವಶಕ್ಕೆ, ಖಾಸಗಿ ಬಸ್ಸಲ್ಲಿ ಹಣ ಪತ್ತೆ
ರಾಜ್ಯದ ನಾನಾ ಭಾಗಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಆಭರಣ ಮತ್ತು ಇತರ ವಸ್ತುಗಳು ಬರಾಮತ್ತಾಗುತ್ತಿರುವುದು ನಿಜವಾದರೂ ಅವುಗಳ ವಾರಸುದಾರರು ಯಾರೆನ್ನುವುದು ಗೊತ್ತಾಗುತ್ತಿಲ್ಲ.
ಬಾಗಲಕೋಟೆ: ಜಿಲ್ಲೆಯ ಹಿರೇಬಾಗೇವಾಡಿ (Hirebagewadi) ಟೋಲ್ ಬಳಿ ಖಾಸಗಿ ಬಸ್ಸೊಂದರಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ 2 ಕೋಟಿ ರೂ. ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸಿನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರಿಗೆ ಹಣದ ಥೈಲಿ (money bag) ಸಿಕ್ಕಿದೆ. ಹಣ ವಶಪಡಿಸಿಕೊಂಡ ಬಳಿಕ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳಿಗೆ (IT department officials) ಮಾಹಿತಿ ನೀಡಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಆಭರಣ ಮತ್ತು ಇತರ ವಸ್ತುಗಳು ಪೊಲೀಸ್ ಇಲ್ಲವೇ ಚುನಾವಣಾಧಿಕಾರಿಗಳ ದಾಳಿಯಲ್ಲಿ ಬರಾಮತ್ತಾಗುತ್ತಿರುವುದು ನಿಜವಾದರೂ ಅವುಗಳ ವಾರಸುದಾರರು ಯಾರೆನ್ನುವುದು ಗೊತ್ತಾಗುತ್ತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
